'ಕಿಲ್ಲಿಂಗ್ ವೀರಪ್ಪನ್' ಸಿನೆಮಾದಲ್ಲಿ ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ದೀಪಾವಳಿಗೆ 'ಕಿಲ್ಲಿಂಗ್ ವೀರಪ್ಪನ್'

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟಿಸಿರುವ 'ಕಿಲ್ಲಿಂಗ್ ವೀರಪ್ಪನ್' ಚಲನಚಿತ್ರ ನವೆಂಬರ್ ೧೨ ರಂದು ದೀಪಾವಳಿ

ಬೆಂಗಳೂರು: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟಿಸಿರುವ 'ಕಿಲ್ಲಿಂಗ್ ವೀರಪ್ಪನ್' ಚಲನಚಿತ್ರ ನವೆಂಬರ್ ೧೨ ರಂದು ದೀಪಾವಳಿ ಸಂಭ್ರಮಕ್ಕೆ ಬಿಡುಗಡೆಯಾಗಲಿದೆ. ಹಾಗೆಯೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ನವೆಂಬರ್ ೨ ರಂದು ಆಡಿಯೋ ಬಿಡುಗಡೆಯಾಗಲಿದೆಯಂತೆ.

ಈಗ ಚಲನಚಿತ್ರದ ಮೊದಲ ಪ್ರತಿಗಾಗಿ ಚಿತ್ರತಂಡ ದುಡಿಯುತ್ತಿದ್ದು, ಎಲ್ಲವೂ ಸುಸೂತ್ರವಾಗಿ ನಡೆದರೆ ಈ ವಾರವೇ ಸೆನ್ಸಾರ್ ಮಂಡಲಿಯ ಮುಂದೆ ಪ್ರದರ್ಶನ ಕಾಣಲಿದೆಯಂತೆ. "ಇದಕ್ಕೂ ಮೊದಲು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಹಮ್ಮಿಕೊಂಡಿದ್ದೆವು. ಆದರೆ ಶಿವರಾಜ್ ಕುಮಾರ್ ಅವರಿಗೆ ಅಷ್ಟು ದೂರ ಪ್ರಯಾಣ ಮಾಡಲು ಹೇಳಿ ಒತ್ತಡ ಹಾಕಲು ಬೇಡವೆಂದು ಈಗ ಬೆಂಗಳೂರಿನಲ್ಲೇ ಬಿಡುಗಡೆ ಮಾಡಲಿದ್ದೇವೆ" ಎಂದು ನಿರ್ಮಾಪಕರಲ್ಲಿ ಒಬ್ಬರಾದ ಬಿ ಎಸ ಸುಧೀಂದ್ರ ತಿಳಿಸಿದ್ದಾರೆ. ಆಡಿಯೋ ಬಿಡುಗಡೆಯ ಮುಖ್ಯಾಂಶವೆಂದರೆ ಎರಡು ಹಾಡುಗಳು. ಈ ಹಾಡುಗಳನ್ನು ಪುನೀತ್ ರಾಜಕುಮಾರ್ ಮತ್ತು ಶಿವಣ್ಣ ಹಾಡಿದ್ದಾರೆ ಎಂದು ತಿಳಿದುಬಂದಿದೆ.

ಈಗ ಕಿಲ್ಲಿಂಗ್ ವೀರಪ್ಪನ್ ದೀಪಾವಳಿಗೆ ಬಿಡುಗಡೆಯಾಗುತ್ತಿದ್ದು, ಪಿ ವಾಸು ನಿರ್ದೇಶನದ ಶಿವಲಿಂಗು ಬಿಡುಗಡೆ ಮುಂದೆಹೋಗಲಿದೆ ಎಂದು ತಿಳಿದುಬಂದಿದೆ.

ಉತ್ತರ ಭಾರತದ ರಂಗಭೂಮಿ ನಟ ಸಂದೀಪ್ ಭಾರದ್ವಾಜ್ ವೀರಪ್ಪನ್ ಪಾತ್ರದಲ್ಲಿ ನಟಿಸಿದ್ದರೆ, ಪರುಲ್ ಯಾದವ್, ಯಜ್ಞ ಶೆಟ್ಟಿ ಮತ್ತು ಸಂಚಾರಿ ವಿಜಯ್ ಕೂಡ ಸಿನೆಮಾದಲ್ಲಿ ಮುಖ್ಯಪಾತ್ರಧಾರಿಗಳು. ಜಿ ಆರ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ಬಿವಿ ಮಂಜುನಾಥ್, ಬಿ ಎಸ್ ಸುಧೀಂದ್ರ ಮತ್ತು ಎ ಶಿವಪ್ರಕಾಶ್ ಸಿನೆಮಾದ ನಿರ್ಮಾಪಕರು. ಸಾಯಿ ಕಾರ್ತಿಕ್ ಸಂಗೀತ ನಿಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT