ರವಿಚಂದ್ರನ್ ಚಿತ್ರಕ್ಕೆ ಎಸ್ ನಾರಾಯಣ್ ಆಕ್ಷನ್ ಕಟ್
ಅಪ್ಪನ ಪಾತ್ರಗಳಲ್ಲಿ ಬೆಳ್ಳಿ ತೆರೆಯ ಮೇಲೆ ಹೊಸಹುಟ್ಟು ಪಡೆದಿರುವ ನಟ ರವಿಚಂದ್ರನ್, ನಾಯಕ ನಟನ ಪಾತ್ರಗಳನ್ನು ಮುಂಚೂಣಿಯಲ್ಲಿ ಪಡೆಯುತ್ತಿರುವುದು
ಬೆಂಗಳೂರು: ಅಪ್ಪನ ಪಾತ್ರಗಳಲ್ಲಿ ಬೆಳ್ಳಿ ತೆರೆಯ ಮೇಲೆ ಹೊಸಹುಟ್ಟು ಪಡೆದಿರುವ ನಟ ರವಿಚಂದ್ರನ್, ನಾಯಕ ನಟನ ಪಾತ್ರಗಳನ್ನು ಮುಂಚೂಣಿಯಲ್ಲಿ ಪಡೆಯುತ್ತಿರುವುದು ಗಮನಾರ್ಹ.
ಈಗ ಎಸ್ ನಾರಾಯಣ್ ಅವರು ರವಿಚಂದ್ರನ್ ಅವರನ್ನು ನಿರ್ದೇಶಿಸಲಿದ್ದಾರೆ. ವಿಶೇಷವೆಂದರೆ ೧೬ ವರ್ಷಗಳ ನಂತರ ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿರುವುದು. "ವಿಜಯವಾಡ ಮೂಲದ ನಿರ್ಮಾಪಕ ಸುಬ್ರಮಣಿಯನ್ ಅವರೇ ಸಿನೆಮಾ ಕಥೆ ಸಿದ್ಧಪಡಿಸಿದ್ದಾರೆ. ಸೋಮವಾರ ಚಲನಚಿತ್ರಕ್ಕೆ ಮುಹೂರ್ತ ನಡೆದಿದ್ದು, ಸಿನೆಮಾಗೆ ಇನ್ನೂ ಹೆಸರಿಡಬೇಕಿದೆ. ನವೆಂಬರ್ ೩ ಅಥವಾ ೪ ಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
"ರವಿಚಂದ್ರನ್ ಅವರಿಗೆ ಸಿನೆಮಾದಲ್ಲಿ ವಿಶಿಷ್ಟ ಪಾತ್ರವಿದೆ. ಇನ್ನೂ ಹೆಚ್ಚಿನ ನಟರ ಆಯ್ಕೆ ಪ್ರಾರಂಭವಾಗಿದೆ" ಎನ್ನುತ್ತಾರೆ ನಾರಾಯಣ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.