ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಚುನಾವಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಸದ್ಯ ಸೈಬರ್ ಕ್ರೈಮ್ ವಿಭಾಗದಲ್ಲಿ ದೂರು ಸಲ್ಲಿಕೆ ಹಂತ ತಲುಪಿದೆ.
ಸಾ.ರಾ. ಬಣಕ್ಕೆ ಬೆಂಬಲ ನೀಡಿರುವ ಮಾಜಿ ಅಧ್ಯಕ್ಷ ಸಿ.ಎನ್. ಚಂದ್ರಶೇಖರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಕೃಷ್ಣೇಗೌಡ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಂದು ಎಸ್ ಎಂಎಸ್ ಕಳುಹಿಸಿ ದಾರಿ ತಪ್ಪಿಸಿದ್ದಾರೆ. ಇದು ಶುದ್ದ ಸುಳ್ಳಾಗಿದ್ದು, ನಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದರು.
ಜಯಮಾಲಾ ಮಾತನಾಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಣ ಇರುವುದೇ ನಾಡಿನ ಜಲ, ನೆಲ ಮತ್ತು ಭಾಷೆಯ ರಕ್ಷಣೆಗೆ. ನಾಡಿನ ಜನರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಕಳಸಾ ಬಂಡೂರಿ ಹೋರಾಟಕ್ಕೆ ವಾಣಿಜ್ಯ ಮಂಡಳಿಯಿಂದ ಖರ್ಚು ಮಾಡಿದ್ದ ಹಣದ ಬಗ್ಗೆ ಸರ್ವ ಸದಸ್ಯರ ಕಾರ್ಯಕಾರಣಿ ಸಭೆಯಲ್ಲಿ ಕೇಳಬೇಕಾಗಿತ್ತು. ಅದನ್ನು ಸಾರ್ವಜನಿಕವಾಗಿ ಕೇಳಿರುವುದು ಸರಿಯಲ್ಲ ಎಂದರು.
ಕಳಸಾ ಬಂಡೂರಿ ನಾಡಿನ ಸಮಸ್ಯೆ. ಇದಕ್ಕಾಗಿ ಹಣ ಖರ್ಚು ಮಾಡಿದ್ದನ್ನು ಅಧ್ಯಕ್ಷರ ಚುನಾವಣೆಯಲ್ಲಿ ಪ್ರಸ್ತಾಪಿಸುವುದು ಬೇಡ. ಚುನಾವಣೆ ಕುತಂತ್ರದಿಂದ ಎದುರಿಸಬೇಡಿ.
ಸಾ.ರಾ. ಗೋವಿಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ