ಸಿದ್ಧಾರ್ಥ್ ಭರತನ್ 
ಸಿನಿಮಾ ಸುದ್ದಿ

ಕಾರು ಅಪಘಾತ: ಮಲಯಾಳಂ ನಟ ಸಿದ್ಧಾರ್ಥ ಭರತನ್‌ ಸ್ಥಿತಿ ಗಂಭೀರ

ಮಲಯಾಳಂ ಚಿತ್ರ ನಟ ನಿರ್ದೇಶಕ ಸಿದ್ಧಾರ್ಥ ಭರತನ್‌ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ...

ಕೊಚ್ಚಿ: ಮಲಯಾಳಂ ಚಿತ್ರ ನಟ ನಿರ್ದೇಶಕ ಸಿದ್ಧಾರ್ಥ ಭರತನ್‌ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. 
ಬೆಳಗ್ಗೆ 2 ಗಂಟೆ ಸುಮಾರಿಗೆ ಚಂಪಕ್ಕರ ಎಂಬಲ್ಲಿ ಸಿದ್ಧಾರ್ಥ ಕಾರು ರಸ್ತೆ ಬದಿ ಗೋಡೆಗೆ ಬಲವಾಗಿ ಢಿಕ್ಕಿ ಹೊಡೆಡಿದ್ದು ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಭರತನ್‌ ರನ್ನು ಮೆಡಿಕಲ್‌ ಟ್ರಸ್ಟ್‌ ಆಸ್ಪತ್ರೆಗೆ ದಾಖಲಿಸಲಾದೆ. 
ಸದ್ಯ ಭರತನ್ ರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 
ಸಿದ್ಧಾರ್ಥ ಅವರು ಮಲಯಾಳಂ ಚಿತ್ರರಂಗದ ದಂತಕಥೆ ಎನಿಸಿರುವ ನಿರ್ದೇಶಕ ಭರತನ್‌ ಮತ್ತು ನಟಿ ಕೆಪಿಎಸಿ ಲಲಿತಾ ಅವರ ಪುತ್ರ. ಮಲಯಾಳಂ ಮೇರು ನಟ ಮಮ್ಮೂಟ್ಟಿ ಮತ್ತು ದಿಲೀಪ್‌ ಅವರು ಭರತನ್‌ ಅವರನ್ನು ಕಾಣಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸಿದ್ಧಾರ್ಥ ನಿರ್ದೇಶನದಲ್ಲಿ ದಿಲೀಪ್‌ ಅಭಿನಯಿಸಿರುವ "ಚಂದ್ರತ್ತನ್‌ ಅವಿಧೇಯ' ಈ ವರ್ಷದ ಆರಂಭದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!