ಪುನೀತ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಪುನೀತ್ ರಿಮೇಕ್ ಪಂಚ್

ರಾಮ್, ಹುಡುಗ್ರು, ಯಾರೇ ಕೂಗಾಡಲಿ, ಪವರ್... ಇವಿಷ್ಟೂ ಪುನೀತ್ ರಾಜ್‌ಕುಮಾರ್ ನಟಿಸಿದ ಯಶಸ್ವಿ ರಿಮೇಕ್ ಸಿನಿಮಾಗಳು. ಸದ್ಯ ಅವರು ಚಿತ್ರೀಕರಣದಲ್ಲಿ...

ರಾಮ್, ಹುಡುಗ್ರು, ಯಾರೇ ಕೂಗಾಡಲಿ, ಪವರ್... ಇವಿಷ್ಟೂ ಪುನೀತ್ ರಾಜ್‌ಕುಮಾರ್ ನಟಿಸಿದ ಯಶಸ್ವಿ ರಿಮೇಕ್ ಸಿನಿಮಾಗಳು. ಸದ್ಯ ಅವರು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ 'ಚಕ್ರವ್ಯೂಹ' ಸಿನಿಮಾ ಕೂಡ ರಿಮೇಕ್ ಎನ್ನಲಾಗುತ್ತಿದೆ. ಇದು ತಮಿಳಿನ 'ಇವನ್ ವೀರಮಾದಿರಿ' ಚಿತ್ರದ ನಕಲು ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ವಿ.ಸೋಮಶೇಖರ್ ನಿರ್ದೇಶನದ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ.

ಇದೀಗ ಈ ರಿಮೇಕ್ ಸಾಲಿಗೆ ಇನ್ನೊಂದು ಚಿತ್ರ ಸೇರ್ಪಡೆಯಾಗುವ ಸಾಧ್ಯತೆ ಇತೆ. ತಿಂಗಳ ಹಿಂದಷ್ಟೇ ತೆರೆ ಕಂಡ ತಮಿಳಿನ 'ಥನಿ ಒರುವನ್‌' ಭಾರಿ ಯಶಸ್ಸು ಕಂಡಿರುವ ಚಿತ್ರ. ಜಯಂ ರವಿ ಹಾಗೂ ನಯನಾ ತಾರಾ ಅಭಿನಯದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಈ ಯಶಸ್ಸನ್ನು ಕಂಡಿರುವ ದಕ್ಷಿಣದ ನಿರ್ಮಾಪಕರು ರಿಮೇಕ್ ರೈಟ್ಸ್‌ಗಾಗಿ ಅಲೆದಾಡುತ್ತಿದ್ದು, ಕನ್ನಡದ ಹಲವು ನಿರ್ಮಾಪಕರು ಸ್ಪರ್ಧೆಗೆ ಬಿದ್ದಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ. ಈ ಸಾಲಿನಲ್ಲಿ ಕೆಲವು ದೊಡ್ಡ ದೊಡ್ಡ ನಿರ್ಮಾಪಕರ ಹೆಸರುಗಳು ಇವೆ. ರಿಮೇಕ್ ರೈಟ್ಸ್ ಯಾರ ಪಾಲಾಗುತ್ತದೋ ಗೊತ್ತಿಲ್ಲ. ಆದರೆ ಈ ಚಿತ್ರದಲ್ಲಿ ಜಯಂ ರವಿ ಮಾಡಿರುವ ಪಾತ್ರ ಕೇವಲ ಪುನೀತ್ ಅವರಿಗೆ ಮಾತ್ರ ಸೂಟ್ ಆಗುತ್ತದೆಂಬುದು ಹಲವರ ವಾದ. ಹೀಗಾಗಿ ಕನ್ನಡಕ್ಕೆ ರಿಮೇಕ್ ರೈಟ್ಸ್ ತೆಗೆದುಕೊಂಡು ಬರುವ ನಿರ್ಮಾಪಕರು ಪುನೀತ್ ಬಳಿ ಹೋಗುವುದು ಗ್ಯಾರಂಟಿ. ಆದರೆ ಪುನೀತ್ ಅವರಿಂದ ಈ ಬಗ್ಗೆ ಯಾವ ಗ್ನೀನ್ ಸಿಗ್ನಲ್ ಇಲ್ಲಿಯವರೆಗೂ ಬಂದಿಲ್ಲ. ಒಂದಾದ ಮೇಲೊಂದು ರಿಮೇಕ್ ಚಿತ್ರಗಳಲ್ಲಿ ಕನ್ನಡ ಸೂಪರ್ ಸ್ಟಾರ್‌ಗಳು ಕಾಣಿಸಿಕೊಳ್ಳುತ್ತಿರುವುದು ಗಾಂಧಿನಗರದ ಹೊಸ ಗಾಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!