ಬಾಲಿವುಡ್ ನಟಿ ಹೂಮ ಖುರೇಶಿ 
ಸಿನಿಮಾ ಸುದ್ದಿ

ಶಕೀಲಾ ಬಯೋಪಿಕ್ ಗೆ ಆಸಕ್ತಿ ತೋರಿದ ಹೂಮ ಖುರೇಶಿ

ದೀರ್ಘ ಕಾಲದ ವಿರಾಮದ ನಂತರ ಮತ್ತೆ ನಿರ್ದೇಶನಕ್ಕಿಳಿದು 'ಲವ್ ಯು ಆಲಿಯಾ' ನಿರ್ದೇಶಿಸಿದ ಇಂದ್ರಜಿತ್ ಲಂಕೇಶ್ ಮತ್ತೆ ವಿರಮಿಸುವ ಇರಾದೆಯಲ್ಲಿಲ್ಲ. 'ಲವ್ ಯು ಆಲಿಯಾ' ಸಿನೆಮಾಗೆ

ಬೆಂಗಳೂರು: ದೀರ್ಘ ಕಾಲದ ವಿರಾಮದ ನಂತರ ಮತ್ತೆ ನಿರ್ದೇಶನಕ್ಕಿಳಿದು 'ಲವ್ ಯು ಆಲಿಯಾ' ನಿರ್ದೇಶಿಸಿದ ಇಂದ್ರಜಿತ್ ಲಂಕೇಶ್ ಮತ್ತೆ ವಿರಮಿಸುವ ಇರಾದೆಯಲ್ಲಿಲ್ಲ. 'ಲವ್ ಯು ಆಲಿಯಾ' ಸಿನೆಮಾಗೆ ಶಕೀಲಾ ಅವರನ್ನು ಕರೆತಂದಿದ್ದ ಇಂದ್ರಜಿತ್, ಅವರ ಆತ್ಮಕತೆಯನ್ನು ಸಿನೆಮಾ ಮಾಡುವ ಉತ್ಸಾಹ ತೋರಿದ್ದರು. ಶಕೀಲಾ ಅವರ ಆತ್ಮಕತೆಯ ಸಿನೆಮಾ ಹಕ್ಕುಗಳನ್ನು ಕೂಡ ಅವರು ಖರೀದಿಸಿದ್ದರು.

ಈಗ ಈ ಕಥೆಗೆ ಬೆಳಕು ನೀಡುವ ಸಮಯ ಬಂದಿದೆ ಎನ್ನತ್ತಾರೆ ಇಂದ್ರಜಿತ್. ಈ ಸಿನೆಮಾವನ್ನು ಹಿಂದಿಯಲ್ಲಿ ಮಾತ್ರ ನಿರ್ದೇಶಿಸಬೇಕು ಎಂದುಕೊಂಡಿರುವ ಲಂಕೇಶ್ ಬಾಲಿವುಡ್ ನಟಿ ಹೂಮ ಖುರೇಶಿ ಅವರ ಬಳಿ ಪಾತ್ರವನ್ನು ಚರ್ಚಿಸಿದ್ದು, ಖುರೇಶಿ ಕೂಡ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಶಕೀಲಾ ದಕ್ಷಿಣ ಭಾರತದ ನಟಿಯಾಗಿದ್ದು ಇಲ್ಲೇ ಹೆಚ್ಚು ಜನಪ್ರಿಯ ಅಲ್ಲವೇ ಎಂದು ಇಂದ್ರಜಿತ್ ಅವರನ್ನು ಪ್ರಶ್ನಿಸಿದರೆ "ಸಿಲ್ಕ್ ಸ್ಮಿತಾ ಕೂಡ ದಕ್ಷಿಣದವರೇ. ಆದರೆ ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಬಾಲಿವುಡ್ ನವರು ಅವರ ಜೀವನಾಧಾರಿತ 'ಡರ್ಟಿ ಪಿಕ್ಚರ್' ಮಾಡಿದರು. ಹಿಂದಿಗೆ ವಿಶಾಲವಾದ ಮಾರುಕಟ್ಟೆಯಿದೆ. ಇವರ ಕಥೆಯನ್ನು ಹೆಚ್ಚು ಜನಕ್ಕೆ ತಲುಪಿಸಲು ಸಹಕಾರಿಯಾಗುವಂತೆ ಕಾರ್ಪೊರೆಟ್ ಸಂಸ್ಥೆಗಳ ಹೂಡಿಕೆಗೆ ಪ್ರಯತ್ನಿಸುತ್ತಿದ್ದೇವೆ" ಎನ್ನುತ್ತಾರೆ.

ಚಿತ್ರೀಕರಣದ ಮುಂಚಿನ ಕೆಲಸಗಳನ್ನು ನಿರ್ದೇಶಕ ಆಗಲೇ ಪ್ರಾರಂಭಿಸಿದ್ದಾರಂತೆ. ಈಗ ಅವರು ಮುಂಬೈ ಪ್ರಯಾಣ ಬೆಳೆಸುತ್ತಿದ್ದು, ಹೂಮ ಅವರನ್ನು ಭೇಟಿ ಮಾಡಿ ಸ್ಕ್ರಿಪ್ಟ್ ಮತ್ತು ಶಕೀಲಾ ಅವರ ಆತ್ಮಕಥೆಯನ್ನು ಚರ್ಚಿಸಲಿದ್ದಾರಂತೆ,

ಎಲ್ಲವೂ ಸುಸೂತ್ರವಾಗಿ ನಡೆದರೆ ಇಂದ್ರಜಿತ್ ಬಾಲಿವುಡ್ ಗೆ ಚೊಚ್ಚಲ ಪ್ರವೇಶ ನೀಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿಂದಿನ ತಪ್ಪುಗಳನ್ನು ಸರಿಪಡಿಸಲು ನಮ್ಮ ಎನರ್ಜಿ ವ್ಯಯ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ; ಪ್ರತಿಪಕ್ಷಗಳಿಂದ ಸಭಾತ್ಯಾಗ

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಿಂದ ಪ್ರಧಾನಿ ಮೋದಿ ವಿರುದ್ಧ 'ಅನಿರೀಕ್ಷಿತ ಕೃತ್ಯ'ದ ಬಗ್ಗೆ ಮಾಹಿತಿ ಇತ್ತು: ಸ್ಪೀಕರ್ ಸ್ಫೋಟಕ ಆರೋಪ

T20 ವಿಶ್ವಕಪ್: ಭಾರತ ವಿರುದ್ಧದ ಪಂದ್ಯ ಆಡಲು ಪಾಕ್ ನಕಾರ, ಸೂರ್ಯ ಕುಮಾರ್ ಯಾದವ್ ಸ್ಪಷ್ಟ ನಿಲುವು!

ಮೇಘಾಲಯ: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ; ಕನಿಷ್ಠ 16 ಕಾರ್ಮಿಕರು ಸಾವು

ಮೆಟ್ರೋ ಪ್ರಯಾಣ ದರ ಏರಿಕೆಗೆ ವಿರೋಧ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ ದರ ನಿಗದಿ ಸಮಿತಿ ಪುನಾರಚನೆಗೆ ಮನವಿ

SCROLL FOR NEXT