ಬೆಂಗಳೂರು: ವಿದೇಶದಲ್ಲಿ ಗಂಧದ ಪರಿಮಳ ಎನ್ನಬೇಕೋ ಗಾಂಧಿನಗರದ ಪರಿಮಳ ಎನ್ನಬೇಕೋ, ರಂಗಿತರಂಗ ಸಿನೆಮಾದ ವಿದೇಶಿ ಗಳಿಕೆ ಗಾಂಧಿನಗರದಲ್ಲಿ ಭರವಸೆಯ ಮಹಾಪೂರವನ್ನೇ ಹರಿಸಿದೆ. ವಿದೇಶದಲ್ಲಿ ಇಷ್ಟು ಖ್ಯಾತಿ ಪಡೆದ ಕನ್ನಡ ಸಿನೆಮಾವಾಗಿ ಇದು ಹೊರ ಹೊಮ್ಮಿದ್ದರೆ ಇಲ್ಲಿ ಕೂಡ ಶತದಿನದತ್ತ ದಾಪುಗಾಲು ಹಾಕಿದೆ.
ಈ ಸಿನೆಮಾ ವಿದೇಶಗಳಲ್ಲಿ ೫೦ ದಿನಗಳನ್ನು ಪೂರಿಸಿದ್ದು, ೨.೧ಕೋಟಿ ಗಳಿಕೆ ಕಂಡಿದೆ. ಅಲ್ಲದೆ ಇನ್ನು ತುಂಬಿನ ಪ್ರದರ್ಶನ ಕಾಣುತ್ತಿದೆಯಂತೆ. ಮೊದಲ ಬಾರಿಗೆ ಕನ್ನಡ ಸಿನೆಮಾವೊಂದು ಸ್ವೀಡನ್, ಸ್ಟೂಗ್ಗರ್ಟ್, ಬೆಲ್ಜಿಯಮ್, ಜ್ಯುರಿಕ್, ಹಾಂಕಾಂಗ್ ಮತ್ತು ಮಲೇಸಿಯಾದಲ್ಲಿ ಪ್ರದರ್ಶನ ಕಾಣುತ್ತಿರುವುದು. ಮಧ್ಯ ಪ್ರಾಚ್ಯ ದೇಶಗಳಲ್ಲಿ ಸೆನ್ಸಾರ್ ಮಂಡಲಿ ಅಸ್ತು ನೀಡಬೇಕಿರುವುದರಿಂದ ದಿನಾಂಕಗಳು ಶೀಘ್ರದಲ್ಲೇ ಹೊರಬೀಳಲಿವೆ ಎನ್ನಲಾಗಿದೆ.
ಉಪ್ಪಿ೨ ಕೂಡ ಅಮೆರಿಕಾದಲ್ಲಿ ಪ್ರದರ್ಶನ ಕಾಣುತ್ತಿದ್ದು, ೨೬ ಲಕ್ಷ ಗಳಿಕೆ ಕಂಡಿದೆ ಎನ್ನಲಾಗಿದೆ. ಮಿ ಅಂಡ್ ಮಿಸೆಸ್ ರಾಮಾಚಾರಿ ಕೂಡ ವಿದೇಶಗಳಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು.