ಸಾಹಸಸಿಂಹ ವಿಷ್ಣು ವರ್ಧನ್ ಸ್ಮಾರಕ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ವಿಷ್ಣು ಸಮಾಧಿ ನಿರ್ಮಾಣಕ್ಕೆ ನಟ ಬಾಲಕೃಷ್ಣ ಕುಟುಂಬ ಅಡ್ಡಿ..!

ಖ್ಯಾತ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮತ್ತೆ ವಿಘ್ನ ಎದುರಾಗಿದ್ದು, ಸಮಾಧಿ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ದಿ. ಬಾಲಕೃಷ್ಣ ಕುಟುಂಬಸ್ಥರು ಮತ್ತೆ ತಕರಾರು ತೆಗೆದಿದ್ದಾರೆ ಎಂದು ತಿಳಿದುಬಂದಿದೆ...

ಬೆಂಗಳೂರು: ಖ್ಯಾತ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮತ್ತೆ ವಿಘ್ನ ಎದುರಾಗಿದ್ದು, ಸಮಾಧಿ  ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ದಿ.  ಬಾಲಕೃಷ್ಣ ಕುಟುಂಬಸ್ಥರು ಮತ್ತೆ ತಕರಾರು ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಅಭಿಮಾನ್ ಸ್ಟುಡಿಯೋಗೆ ಸೇರಿದ 10 ಎಕರೆ ಜಾಗದಲ್ಲಿ 2 ಎಕರೆ ಜಾಗವನ್ನು ವಿಷ್ಣುವರ್ಧನ್ ಸಮಾಧಿ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ವಿಷ್ಣು ಪ್ರತಿಷ್ಠಾನ ಟ್ರಸ್ಟ್‌ಗೆ ನೀಡಲು ನಟ  ಬಾಲಣ್ಣನ ಕುಟುಂಬ ವರ್ಗ ಸಮ್ಮತಿಸಿತ್ತಾದರೂ, ಇಂದು ಆ 2 ಎಕರೆ ಜಾಗದಲ್ಲಿ ತಂತಿಬೇಲಿ ನಿರ್ಮಿಸಲು ತೆರಳಿದ್ದ ಸಿಬ್ಬಂದಿ ಕಾರ್ಯಕ್ಕೆ ಬಾಲಣ್ಣನ ಮಕ್ಕಳು ಹಾಗೂ ಮೊಮ್ಮಗ ಅಡ್ಡಿಪಡಿಸಿದ್ದಾರೆ  ಎಂದು ತಿಳಿದುಬಂದಿದೆ.

ಅಭಿಮಾನ್ ಸ್ಟುಡಿಯೋಗೆ ಸೇರಿದ 10 ಎಕರೆ ಜಾಗದಲ್ಲಿ 2 ಎಕರೆ ಜಾಗವನ್ನು ವಿಷ್ಣುವರ್ಧನ್ ಸಮಾಧಿ ಸ್ಮಾರಕ ನಿರ್ಮಿಸಲು ಸರಕಾರಕ್ಕೆ ಹಾಗೂ ವಿಷ್ಣು ಪ್ರತಿಷ್ಠಾನ ಟ್ರಸ್ಟ್‌ಗೆ ನೀಡಲು ನಟ  ಬಾಲಣ್ಣನ ಕುಟುಂಬ ವರ್ಗ ಸಮ್ಮತಿಸಿತ್ತು. ಈ ಸಂಬಂಧ ಖುದ್ದು ಸರ್ಕಾರಕ್ಕೆ ಮುಚ್ಚಳಿಕೆ ಕೂಡ ಪತ್ರ ಬರೆದುಕೊಟ್ಟಿದ್ದರು. ಪತ್ರದಲ್ಲಿ 2 ಎಕರೆ ಜಾಗವನ್ನು ವಿಷ್ಣು ಪ್ರತಿಷ್ಠಾನಕ್ಕೆ ನೀಡುತ್ತಿದ್ದು, ಈ  ಜಾಗದ ಮೇಲೆ ಬಾಲಣ್ಣನ ಕುಟುಂಬದವರಿಗೆ ಯಾವುದೇ ಹಕ್ಕಿರುವುದಿಲ್ಲ. ಜತೆಗೆ ಯಾವುದೇ ಕೋರ್ಟಿನಲ್ಲೂ ಈ ಬಗ್ಗೆ ತಾವು ಪ್ರಶ್ನಿಸುವುದಿಲ್ಲ. ಒಂದು ವೇಳೆ ಮಾತು ತಪ್ಪಿದರೆ ಸರ್ಕಾರ ಸೂಕ್ತ  ಶಿಸ್ತು ಕ್ರಮ ಜರುಗಿಸಲಿ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಈ ಪತ್ರಕ್ಕೆ ನಟ ಬಾಲಕೃಷ್ಣ ಅವರ ಮಗಳಾದ ಗೀತಾಬಾಲಿ, ಮಗ ಬಿ. ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಸಹಿ ಮಾಡಿದ್ದರು.

ಆದರೆ ಈ ಜಾಗದಲ್ಲಿ ಇಂದು ಬೆಳಿಗ್ಗೆ ವಿಷ್ಣು ಪ್ರತಿಷ್ಠಾನದ ಸಿಬ್ಬಂದಿ ತಂತಿಬೇಲಿ ನಿರ್ಮಿಸಲು ಮುಂದಾಗಿದ್ದ  ವೇಳೆ ಬಾಲಕೃಷ್ಣ ಕುಟುಂಬ ಅಡ್ಡಿಪಡಿಸಿತು. ಯಾವುದೇ ಕಾರಣಕ್ಕೂ ಜಾಗ  ಬಿಟ್ಟುಕೊಡುವುದಿಲ್ಲ ಎಂದು ತಕರಾರು ತೆಗೆದಿದ್ದಾರೆ. ನಟ ಬಾಲಣ್ಣನ ಕುಟುಂಬದವರ ಈ ಕ್ರಮಕ್ಕೆ ವಿಷ್ಣು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ  ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಹ ನೀಡಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ