'ಚಕ್ರವ್ಯೂಹ' ಸಿನೆಮಾದಲ್ಲಿ ರಚಿತಾ ರಾಮ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಏಪ್ರಿಲ್ ೨೧ರಂದು ಆಸ್ಟ್ರೇಲಿಯಾದಲ್ಲಿ 'ಚಕ್ರವ್ಯೂಹ' ಪ್ರೀಮಿಯರ್; ಏಪ್ರಿಲ್ ೨೨ಕ್ಕೆ ಜಾಗತಿಕ ಬಿಡುಗಡೆ

ಪುನೀತ್ ರಾಜಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ 'ಚಕ್ರವ್ಯೂಹ'ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪುನೀತ್ ಅವರ ತಂದೆ ವರನಟ ರಾಜಕುಮಾರ್ ಅವರ ಹುಟ್ಟುಹಬ್ಬವಾದ

ಬೆಂಗಳೂರು: ಪುನೀತ್ ರಾಜಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ 'ಚಕ್ರವ್ಯೂಹ'ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪುನೀತ್ ಅವರ ತಂದೆ ವರನಟ ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ ೨೪ ಕ್ಕೂ ಎರಡು ದಿನ ಮುಂಚಿತವಾಗಿ, ಅಂದರೆ ಏಪ್ರಿಲ್ ೨೨ ರಂದು ಸಿನೆಮಾ ಬಿಡುಗಡೆಯಾಗಲಿದೆ.

ವಿಶ್ವದಾದ್ಯಂತ ಬಿಡುಗಡೆ ಕಾಣಲಿರುವ ಈ ಸಿನೆಮಾಗೆ  ಏಪ್ರಿಲ್ ೨೧ರಂದು ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದೆ, ಆದರೆ ಪ್ರದರ್ಶನದ ಪ್ರದೇಶ ಇನ್ನೂ ಅಂತಿಮಗೊಳ್ಳಬೇಕಿದೆ. ಸಂತೋಶ್ ಆನಂದರಾಮ್ ನಿರ್ದೇಶಿಸುತ್ತಿರುವ 'ರಾಜಕುಮಾರ' ಸಿನೆಮಾದ ಚಿತ್ರೀಕರಣಕ್ಕಾಗಿ ಏಪ್ರಿಲ್ ೧೪ ಕ್ಕೆ ಆಸ್ಟ್ರೇಲಿಯಾಕ್ಕೆ ತೆರಳಲಿರುವ ಪುನೀತ್, ಪ್ರೀಮಿಯರ್ ನಲ್ಲಿ ಭಾಗವಹಿಸಲಿದ್ದಾರೆ. "ಸಿನೆಮಾ ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಹಾಂಕಾಂಗ್, ಸಿಂಗಾಪೂರ್, ಮಲೇಶಿಯಾ, ಸೌದಿ ಅರೇಬಿಯಾ, ಅಮೇರಿಕಾ, ಕೆನಡಾ ಸೇರಿದಂತೆ ೫೦ ಕ್ಕೂ ಹೆಚ್ಚು ದೇಶಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ. ಅಲ್ಲದೆ ಭಾರತದಲ್ಲಿ ಚೆನ್ನೈ, ಪುಣೆ, ಮುಂಬೈ, ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲೂ ಬಿಡುಗಡೆಯಾಗಲಿದೆ" ಎಂದು ವಿವರಿಸುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.

ಎನ್ ಕೆ ಲೋಹಿತ್ ನಿರ್ಮಿಸುತ್ತಿರುವ ಈ ಸಿನೆಮಾದ ನಿರ್ದೇಶಕ ಎಂ ಸರವಣನ್. ಎಸ್ ಎಸ್ ತಮನ್ ಸಂಗೀತ ನೀಡಿದ್ದು, ರಚಿತಾ ರಾಮ್ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳು ನಟ ಅರುಣ್ ವಿಜಯ್ ಖಳ ನಾಯಕನಾಗಿ ಕಾಣಿಸಿಕೊಂಡಿದ್ದರೆ. ಸಾಧು ಕೋಕಿಲಾ ಮತ್ತು ರಂಗಾಯಣ ರಘು ಕೂಡ ನಟಿಸಿದ್ದಾರೆ.

ತೆಲುಗು ನಟರಾದ ಜೂನಿಯರ್ ಎನ್ ಟಿ ಆರ್ ಮತ್ತು ಕಾಜಲ್ ಅಗರವಾಲ್ ಸಿನೆಮಾದಲ್ಲಿ ತಲಾ ಒಂದು ಹಾಡನ್ನು ಹಾಡಿದ್ದು, ಸಿನೆಮಾಗೆ ಒಳ್ಳೆಯ ಪ್ರಚಾರ ತಂದುಕೊಟ್ಟಿತ್ತು. ಆಡಿಯೋ ವಿತರಣೆ ಕೂಡ ನಿರ್ಮಾಪಕರಿಗೆ ಒಳ್ಳೆಯ ಹಣಗಳಿಸಿಕೊಟ್ಟಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT