ಬಾಹುಬಲಿ ಪ್ರಬಾಸ್ 
ಸಿನಿಮಾ ಸುದ್ದಿ

ಬಾಹುಬಲಿ ಪ್ರಬಾಸ್ ಗೆ ಥಿಯೇಟರ್ ಮಾಲೀಕರಿಂದ ವಿಶೇಷ ಮನವಿ

ಭಾರತೀಯ ಚಿತ್ರರಂಗದಲ್ಲೇ ದೂಳೆಬ್ಬಿಸಿದ್ದ ಬಾಹುಬಲಿ ಚಿತ್ರಕ್ಕೆ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ದೂಳೆಬ್ಬಿಸಿದ್ದ ಬಾಹುಬಲಿ ಚಿತ್ರಕ್ಕೆ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ.

ಇನ್ನು ಬಾಹುಬಲಿ ಚಿತ್ರದ ಪ್ರಮುಖ ಪಾತ್ರಧಾರಿ ಪ್ರಬಾಸ್ ಗೆ ಕೆಲ ಚಿತ್ರಮಂದಿರದ ಮಾಲೀಕರು ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಚಿತ್ರ ತೆರೆಗೆ ಬಂದು 10 ತಿಂಗಳು ಕಳೆದರು ಇನ್ನು ಚಿತ್ರವನ್ನು ಪ್ರದರ್ಶನ ಮಾಡುತ್ತಿರುವ ಮಾಲೀಕರು ಪ್ರಭಾಗೆ ಚಿತ್ರಮಂದಿರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರಂತೆ.

ದೇಶಾದ್ಯಂತ ಕೆಲ ಚಿತ್ರಮಂದಿರಗಳಲ್ಲಿ ಚಿತ್ರ ಇನ್ನು ಪ್ರದರ್ಶನ ಕಾಣುತ್ತಿದ್ದು, ಆ ಚಿತ್ರಮಂದಿರದ ಮಾಲೀಕರು ಚಿತ್ರಮಂದಿರಕ್ಕೆ ಭೇಟಿ ನೀಡುವಂತೆ ಪತ್ರ ಬರೆದಿರುವುದು ಪ್ರಬಾಸ್ ಗೆ ಆಶ್ಚರ್ಯ ಉಂಟು ಮಾಡಿದೆಯೆಂತೆ ಹೀಗಂತ ಪ್ರಬಾಸ್ ನ ಆತ್ಮೀಯ ಮೂಲಗಳಿಂದ ತಿಳಿದುಬಂದಿದೆ.

ಚಿತ್ರ ಬಿಡುಗಡೆಯಾಗಿ ತಿಂಗಳುಗಳೆ ಕಳೆದರು ಚಿತ್ರ ಇನ್ನು ಪ್ರದರ್ಶನ ಕಾಣುತ್ತಿರುವುದು ಸಂತೋಷದಾಯಕ. ಅದೇ ರೀತಿ ಚಿತ್ರಮಂದಿರದ ಮಾಲೀಕರು ಪತ್ರ ಬರೆದು ಭೇಟಿ ನೀಡುವಂತೆ ಮನವಿ ಮಾಡಿರುವುದು ಚಿತ್ರ ನಟನೊಬ್ಬನಿಗೆ ಆತ್ಮಸ್ಥೈರ್ಯ ತುಂಬಿದ್ದಂತೆ. ಚಿತ್ರಮಂದಿರದ ಮಾಲೀಕರು ಚಿತ್ರರಂಗದ ಪ್ರಮುಖ ಭಾಗವಾಗಿದ್ದಾರೆ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ