ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಎರಡನೇ ಚಿತ್ರ ಉಪ್ಪು ಹುಳಿ ಖಾರಾಗೆ ಇನ್ಫೋಸಿಸ್‍ನ ಸಹ ಸಂಸ್ಥಾಪಕರಾದ ಸುಧಾಮೂರ್ತಿ ಅವರು ಕ್ಲಾಪ್ ಮಾಡಲಿದ್ದಾರೆ.
ಏಪ್ರಿಲ್ 17ರಂದು ಚಿತ್ರ ಮುರ್ಹೂತಕ್ಕೆ ಮುಖ್ಯ ಅತಿಥಿಯಾಗಿರುವ ಸುಧಾಮೂರ್ತಿ ಅವರು ಚಿತ್ರಕ್ಕೆ ಕ್ಲಾಪ್ ಮಾಡಲಿದ್ದು, ನಿರ್ಮಾಪಕ ಕೆ. ಮಂಜು ಕ್ಯಾಮೆರಾ ಸ್ವೀಚ್ ಆನ್ ಮಾಡಲಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ.
ಸುಧಾಮೂರ್ತಿ ಅವರು ಚಿತ್ರರಂಗದ ಬಗ್ಗೆ ಅದೆಷ್ಟು ಮಾಹಿತಿ ಹೊಂದಿದ್ದಾರೆ ಎಂದರೆ ನನಗೆ ಆಶ್ಚರ್ಯವಾಯಿತು. ಅವರೊಬ್ಬ ಬಿಸಿನೆಸ್ ಹುಮೇನ್ ಆಗಿದ್ದು, ಚಿತ್ರರಂಗದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ.
ಎಂದೆದಿಗೂ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದ ಇಮ್ರಾನ್ ತಮ್ಮ ಚಿತ್ರಕ್ಕೆ ಅಜೇಯ್ ರಾವ್ ಹಾಗೂ ರಾಧಿಕ ಪಂಡಿತ್ ರನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಉಪ್ಪು ಹುಳಿ ಖಾರ ಚಿತ್ರಕ್ಕೆ ಹೊಸಬರಿಗೆ ಚಾನ್ಸ್ ನೀಡಲಿದ್ದಾರೆ.