'ಪುಷ್ಪಕ ವಿಮಾನ'ದಲ್ಲಿ ಬಾಲಿವುಡ್ ನಟಿ ಜೂಹಿ ಚಾವ್ಲಾ 
ಸಿನಿಮಾ ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಮತ್ತೆ ಜೂಹಿ ಮ್ಯಾಜಿಕ್

ಜೂಹಿ ಚಾವ್ಲಾ 'ಪ್ರೇಮ ಲೋಕ'ದ ಮೂಲಕ ಮೊದಲ ಬಾರಿ ಕನ್ನಡ ಸಿನೆ ರಸಿಕರ ಮನ ಗೆದ್ದಾಗ ನಟಿಗೆ ೨೦ ವರ್ಷ. ಈಗ ೫೦ ವರ್ಷದ ನಟಿ ಸ್ಯಾಂಡಲ್ವುಡ್ ಗೆ

ಬೆಂಗಳೂರು: ಜೂಹಿ ಚಾವ್ಲಾ 'ಪ್ರೇಮ ಲೋಕ'ದ ಮೂಲಕ ಮೊದಲ ಬಾರಿ ಕನ್ನಡ ಸಿನೆ ರಸಿಕರ ಮನ ಗೆದ್ದಾಗ ನಟಿಗೆ ೨೦ ವರ್ಷ. ಈಗ ೫೦ ವರ್ಷದ ನಟಿ ಸ್ಯಾಂಡಲ್ವುಡ್ ಗೆ ಹಿಂದಿರುಗಿದ್ದು ಮತ್ತದೇ ಮಾಂತ್ರಿಕತೆ ಪ್ರದರ್ಶಿಸಲು ಮುಂದಾಗಿದ್ದಾರೆ.

೧೦ ನಿಮಿಷಗಳ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿರುವ ಜೂಹಿ ಚಾವ್ಲಾ ಅವರ ಪೋಸ್ಟರ್ ಈಗ ಬಿಡುಗಡೆಯಾಗಿದೆ. ಈ ಹಾಡಿಗಾಗಿಯೇ ಸಿನೆಮಾ ಬಜೆಟ್ ನ ಅರ್ಧದಷ್ಟು ಖರ್ಚು ಮಾಡಲಾಗಿದೆಯಂತೆ. "ನಟಿಗೆ ಕೊಟ್ಟ ವರಮಾನ, ಮತ್ತಿತರ ಖರ್ಚುಗಲೇ ೧ ಕೋಟಿ. ಸೆಟ್ ಗಾಗಿ ೨೦ ಲಕ್ಷ ಖರ್ಚು ಮಾಡಲಾಗಿದೆ. ಈ ಸೆಟ್ ಒಳಗೆ ಬಂದಾಕ್ಷಣ, ನಾನು ಸಂಜಯ್ ಲೀಲಾ ಭನ್ಸಾಲಿ ಸೆಟ್ಟೊಳಗೆ ಬಂದಿದ್ದೇನೆಯೇ ಎಂದು ಉದ್ಘರಿಸಿದರು ಜೂಹಿ" ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್.

ಈ ಹಾಡಿಗೆ ಭುವನ್ ಗೌಡ ನೃತ್ಯ ನಿರ್ದೇಶನ ಮಾಡಿದ್ದಾರೆ. ೧೯೮೦ರ ಕಾಲಘಟ್ಟದಲ್ಲೂ ಸಿನೆಮಾ ನಡೆಯುವುದರಿಂದ ಜೂಹಿ ಚಾವ್ಲಾ ಅವರನ್ನು ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ವಿಖ್ಯಾತ್.

ಎಸ್ ರವೀಂದ್ರನಾಥ್ ನಿರ್ದೇಶನದ ಈ ಚಿತ್ರದಲ್ಲಿ ರಮೇಶ್ ಅರವಿಂದ್, ರಚಿತಾ ರಾಮ್ ಮತ್ತು ಬಾಲ ನಟಿ ಯುವಿನಾ ಪಾರ್ಥವಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್