ರಜನಿಕಾಂತ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಕಲಾವಿದರ ಸಂಘ ಸಹಾಯಾರ್ಥ ಕಾರ್ಯಕ್ರಮದಲ್ಲಿ ರಜನಿ ಕಾಂತ್, ಸುದೀಪ್

ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ದಕ್ಷಿಣ ಭಾರತದ ನಟರು ಒಗ್ಗೂಡಿದ್ದಾರೆ.

ಚೆನ್ನೈ: ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ದಕ್ಷಿಣ ಭಾರತದ ನಟರು ಒಗ್ಗೂಡಿದ್ದಾರೆ.
ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಆಯೋಜಿಸಲಾಗಿದ್ದ ಒಂದು ದಿನದ ಸ್ಟಾರ್ಸ್ ಕ್ರಿಕೆಟ್ ಲೀಗ್  ನ್ನು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಉದ್ಘಾಟನೆ ಮಾಡಿದರು. ದಕ್ಷಿಣ ಭಾರತದ ನಟರೊಂದಿಗೆ ಕಲಾವಿದರ ಸಂಘದ (ಎಸ್ ಐಎಎ) ಪದಾಧಿಕಾರಿಗಳು, ಎಸ್ಐಎಎ ಅಧ್ಯಕ್ಷ ನಾಸಿರ್, ಪ್ರಧಾನ ಕಾರ್ಯದರ್ಶಿ ವಿಶಾಲ್ ರೆಡ್ಡಿ ಭಾಗವಹಿಸಿದ್ದರು.
ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ನಟ ಬಾಲಕೃಷ್ಣ, ವೆಂಕಟೇಶ್, ಸುದೀಪ್, ಅಂಬರೀಶ್, ಮಮ್ಮೂಟಿ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಅನೇಕ ನಟರು ಭಾಗವಹಿಸಿದ್ದರು. ಲೀಗ್ ಪಂದ್ಯ ನಡೆದ ಬಳಿಕ ನಟ ಸೂರ್ಯ ನೇತೃತ್ವದ ಚೆನ್ನೈ ಸಿಂಗಮ್ಸ್ ತಂಡ ಹಾಗೂ ಜೀವಾ ನೇತೃತ್ವದ ತಂಜಾವೂರ್ ತಂಡದ ನಡುವೆ ಫೈನಲ್ ಪಂದ್ಯ ನಡೆದು ಸೂರ್ಯ ನೇತೃತ್ವದ ತಂಡ ಜಯಗಳಿಸಿತು. ಚೆನ್ನೈ ನ ಟಿ.ನಗರ್ ನಲ್ಲಿ ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್