ಸಿನಿಮಾ ಸುದ್ದಿ

ನಾ ನೋಡಿದ ಜಂಗಲ್ ಬುಕ್ ...!

ಅಪ್ಪಾ ...ಅಪ್ಪಾ ..ಅಂತಾ ಮಗ ಕರೆದಾಗ , ಏನೋ ಅದು ? ನ್ಯೂಸ್ ನೋಡಕು ಬಿಡಲ್ವಲ್ಲಾ..ಸರಿ ಹೇಳು ಅದೇನು ? ಅಂತಾ ನಾ ಅಂದಾಗ...

ಅಪ್ಪಾ ...ಅಪ್ಪಾ ..ಅಂತಾ ಮಗ ಕರೆದಾಗ , ಏನೋ ಅದು ? ನ್ಯೂಸ್ ನೋಡಕು ಬಿಡಲ್ವಲ್ಲಾ..ಸರಿ ಹೇಳು ಅದೇನು ? ಅಂತಾ ನಾ  ಅಂದಾಗ...
can ವೀ ಗೋ ಟು ಜಂಗಲ್ ಬುಕ್ ಮೂವಿ ? it 's released already...ಮಗ ಕೇಳಿದ್ದ.

ಓಹ್ ಮೊಗ್ಲಿ ಮೂವಿನಾ? ಹಳೆದಲ್ವೇನೋ ಅದು ? ಯಾವಾಗಲೋ ನೋಡಿದ ನೆನಪು ...

ನೋ ಅಪ್ಪ...ದಿಸ್ ಇಸ್ ಫ್ರಮ್ ಡಿಸ್ನಿ ...ಇನ್ 3D ಬಂದಿದೆ ...ಕ್ಯಾನ್ ವೀ ಗೋ ಟುಡೇ ? any way ಸಂಡೇ..i 'm  ಡನ್ ವಿಥ್ ಮೈ ಹೋಂ ವರ್ಕ್ ಟೂ ... ಅಂತಾ ಅವಾ ಗೋಗರೆಯುವ ಸ್ವರದಲ್ಲಿ ಕೇಳಿದಾಗ , ಸರಿಯಪ್ಪ ...ವಿಲ್ ಗೋ ಟುಡೇ...ಚೆಕ್ ಮಾಡ್ತೀನಿ ತಡಿ , ಎಷ್ಟು ಗಂಟೆಗೆ ಶೋ ಇದೆ ಅಂತಾ ಅಂದು ಕಂಪ್ಯೂಟರ್ ಮುಂದೆ ಕೂತಿದ್ದೆ .

ಸಂಜೆ 4 ಗಂಟೆಗೆ ಶೋ ಇದೆ ..I M A X 3D ಶೋ ಬೇಕು ಅಂದ್ರೆ ...೩ ಗಂಟೆ ಗೆ ಇದೆ...ಆಲ್ರೆಡಿ ೨-೧೫ ಆಗಿದೆ ...ಊಟ ಬೇಗ ಮಾಡಿ ...ವಿಲ್ ಗೋ ಟು I M A X 3D ಶೋಗೆ ...ಚೆನ್ನಾಗಿರುತ್ತೆ ನೋಡಲಿಕ್ಕೆ ಅಂತಾ hurry ಮಾಡಿ ಕೊನೆಗೊ ಥೀಯೇಟರ್ ಒಳಗೆ ಹೊಕ್ಕಾಗ ಆಲ್ರೆಡಿ ಲೈಟ್ಸ್ ಎಲ್ಲ ಆಫ್ ಆಗಿ , ಸಿನಿಮಾ ಸ್ಟಾರ್ಟಿಂಗ್ ಸ್ಕ್ರೀನ್ ಬರ್ತಾ ಇತ್ತು ...ಛೆ ಯಾವಾಗ್ಲೂ ಲೇಟ್ ಆಗಿ ಬರೋದೆ ಆಗಿದೆ ಸಿನೆಮಾಗೆ ...ಒಳ್ಳೆ ಸೀಟ್ಸ್ ಸಿಗೋದು ಬೇರೆ ಕಷ್ಟ ಅಂತಾ ನನ್ನ ನಾನೇ ಬಯ್ಕೊಳ್ತಾ.. ಹೆಂಡ್ತಿ , ಮಗನ ಜೊತೆ ಕತ್ತಲಲ್ಲೇ ಸೀಟ್ ಹುಡ್ಕೊಂಡು ಉಸ್ಸ್ ಅಂತಾ ಕೂತಿದ್ದೆ .

ಬಹಳ ದಿನ ಆಗಿತ್ತು ಮೂವಿ ನೋಡಲಿಕ್ಕೆ ಬರದೆ , ಲಾಸ್ಟ್ ಟೈಮ್ ಆ ರಂಗಿ ತರಂಗ ಸಿನಿಮಾ ನೋಡಲಿಕ್ಕೆ ಬಂದು , ಪಕ್ಕದಲ್ಲಿ ಯಾರೋ ಹೆಣ್ ಮಗಳು ಅದರಲ್ಲಿ ಬರೋ  "ತಾನಾನ..  ತನ.. ತಾನಾನ" ಅನ್ನೋ ಭೂತದ  ಮನೆ ಶಬ್ದಕ್ಕೆ ಹೆದರಿಕೊಂಡು ನನ್ನ ಕೈ ಹಿಡಿದು ಪರಚಿ ..ಪೇಚಿಗೆ ಸಿಕ್ಕಿಸಿದ್ದ ಘಟನೆ ನೆನೆಸಿ ಕೊಂಡು ನನ್ನ ಪಕ್ಕ ಕಾಲಿ ಸೀಟ್ ಇರೋದು confirm ಮಾಡಿಕೊಂಡಿದ್ದೆ. ಆ ಪ್ಲಾಸ್ಟಿಕ್ 3D ಗ್ಲಾಸ್ ಹಾಕೊಂಡು ನೋಡುವಾಗಂತೂ ಅಕ್ಕ ಪಕ್ಕ ಏನು ಕಾಣೋಲ್ಲ ...ಅದಕ್ಕೆ ಬರಿ ಕಣ್ಣಲ್ಲೇ ನೋಡಿ ಕೂತಿದ್ದೆ !

ಮೂವಿ ಸ್ಟಾರ್ಟಿಂಗ್ ನಲ್ಲಿ ಆ ಮೊಗ್ಲಿ ವೂಲ್ಫ್ ತರಹ ಜೋರಾಗಿ ಓಡಿ ಬರೋದು , ಅವನ ಹಿಂದೆ ಆ ಕರಿ ಭಗೀರ ಮತ್ತೆ ಬೇರೆ ತೋಳ (ವೂಲ್ಫ್) ಗಳು ಕಾಡಿನ ಮಧ್ಯೆ ಓಡಿ ಬರೋದು ...wow ..ಸುಂದರ ರೌದ್ರ ರಮಣೀಯ ಕಾಡಿನ ಚಿತ್ರಣ ...ಅದರ ಮೇಲೆ ಈ I M A X 3D ಎಫೆಕ್ಟ್ಸ್ ...ಓಹ್ ಓಹ್ ..ನಮ್ಮ ಹತ್ತಿರಾನೆ ಓಡಿ ಬರ್ತಾ ಇದಾರೇನು ಅಥವಾ ನಾನೇ ಅವರ ಜೊತೆ ಓಡ್ತಾ ಇದಿನೋ ಅನ್ನಿಸಿತ್ತು. ಪಕ್ಕದಲ್ಲಿ ಹೆಂಡ್ತಿ , ಮಗ ಸೀಟಿನ ತುದಿಯಲ್ಲೇ ಬಾಯ್ ಬಿಟ್ಕೊಂಡು ಕುಂತು ನೋಡ್ತಿದ್ದ ಹಾಗೆ ಕಾಣಿಸ್ತಿತ್ತು ಆ ಕತ್ತಲ ಬೆಳಕಲ್ಲೇ ...

ಶೇರ್ ಖಾನ್ ...ಅಬ್ಬಾ ಆ ಬಂಗಾಳಿ ಟೈಗರ್ ನ ಗತ್ತು , ಆರ್ಭಟ ...ಒಮ್ಮೆ ಅದು ಜೋರಾಗಿ ನಮ್ಮೆಡೆ ಮುಖ ಮಾಡಿ ಘರ್ಜಿಸಿದಾಗ, ಥೀಯೇಟರ್ ನಲ್ಲಿ ಬೇರೆ ಹೆಚ್ಚಿನ ಡಾಲ್ಬಿ ಸೌಂಡ್ ಗು ..ಅದರ ಆರ್ಭಟಕ್ಕೂ ...ನಮ್ಮ ಮೇಲೆ ಹಾರಿದಂಗೆ ಹಾಗಿತ್ತು ಅದು ... :) ಒಳ್ಳೆದಾಯ್ತು ..I M A X 3D ಶೋ ಗೆ ಬಂದಿದು ಅನ್ನ್ಕೊಂಡೆ ಆ ಎಫೆಕ್ಟ್ ನೋಡಿ !

ಮೊದಲರ್ಧ ಮೊಗ್ಲಿ , ತೋಳಗಳು , ಭಗೀರ , ಶೇರ್ಖಾನ್  ಇವೆರೆಲ್ಲರ  ಸ್ವಲ್ಪ ಸೀರಿಯಸ್ ಸನ್ನಿವೇಶಗಳಾದ  ಮೇಲೆ ...ಬಾಲು (ಕರಡಿ) ಯಾ ಎಂಟ್ರಿ ...ಅದು ಬಂದ ಮೇಲೆ ಸ್ವಲ್ಪ funny , ಕಾಮಿಡಿ ಸೀನ್ಸ್ , ಡೈಲಾಗ್ಸ್ ಗೆ ..ಅಲ್ಲಲ್ಲಿ ಜನ ಸ್ವಲ್ಪ ನಗೋದು ಕೇಳಿಸಿತ್ತು ...ಜೊತೆಗೆ ನಾನೂ ನಕ್ಕಿದ್ದೆ.

ವಿಂಟರ್ ಸೀಸನ್ ನಲ್ಲಿ ಜೇನು ತುಪ್ಪ (ಹನಿ ) ಇಲ್ಲ ಅಂದ್ರೆ , ನಾ hybernate ಆಗಿ ಬಿಡ್ತೀನಿ ..ನಿನ್ನ ಹಾವಿಂದ ಬಚಾವ್ ಮಾಡಿದ್ದಕ್ಕೆ ..ಮೊಗ್ಲಿ , ನೀನು ಗುಡ್ಡದ ಮೇಲೆ ಇರೋ ಜೇನು ಗೂಡು ಒಡೆದು ನಂಗೆ ತಗೊಂಡು ಬಾ ...ಜೇನು ಹುಳ ನಿಂಗೆ ಏನು ಕಚ್ಹೊಲ್ಲಾ ಅಂತಾ ಸುಳ್ಳು ಹೇಳಿ , ಮೊಗ್ಲಿ ಗೆ ಬಾಲು ಪುಸಾಯಿಸಿದಾಗ ...ಮನಸ್ಸಿಲ್ಲದ ಮನಸಿಂದ ಬರಿ ಮೈಯಲ್ಲೇ ಮೇಲೆ ಹತ್ತಿದ್ದ ಮೊಗ್ಲಿ...!

ಕಷ್ಟ ಪಟ್ಟು ಜೇನು ಗೂಡಿಗೆ ಕೈ ಹಾಕಿದಾಗ ಕಚ್ಚೆ ಬಿಟ್ಟಿದ್ದವು ಆ ಹನಿ ಬೀಸ್.  ಅಯ್ಯೋ ಪಾಪ ಅನ್ನುವಾಗಲೇ , ಜೇನು ಗೂಡು ಕಿತ್ತಾಕಿ ಕೆಳಗಡೆ ಬೀಳಿಸಿ ...ಮೊಗ್ಲಿ ಇಳಿದು ಬಂದು ..ಬಾಲು ? ಯು said , ಬೀಸ್ won't  ಬೈಟ್ ರೈಟ್ ? ಅಂತಾ ಕೇಳಿದಾಗ ... "mostly ಅವು ಲೇಡೀಸ್ ಬೀಸ್ ಇರ್ಬೇಕು ...ಅವು ಮಾತ್ರ ಸ್ಟಿಂಗ್ ಮಾಡೋದು"...ಬಾಲು ಕೂಲಾಗಿ ನುಡಿದಿತ್ತು.
ಬಾಲು ನಗ್ತಾ ಆ ಮಾತನ್ನ ಹೇಳ್ದಾಗ ...ಜೋರಾಗಿ ನಕ್ಕಿದ್ದೆ ನಾ ...ಏನೋ ನೆನೆಸಿಕೊಂಡು :) ...ನನ್ನ ಪಕ್ಕದಲ್ಲಿ ಯಾರೋ ಆಸಾಮಿ ಸಹ...ಹೌದು ಹೌದು ...ಹೆಂಗಸರೇ ಕಚ್ಚೋದು ಅಂತಾ ಸ್ವಲ್ಪ ಜೋರಾಗೆ ಅಂದಿದ್ದ ( ಅದು ಕನ್ನಡದಲ್ಲೇ ಕೇಳಿ , ಎಫೆಕ್ಟ್ ಚೆನ್ನಾಗಿ ಅನ್ನಿಸಿತ್ತು ...ಕನ್ನಡ ಕೇಳೋ ಮಜಾನೆ ಬೇರೆ ಅಲ್ವಾ ?). ರೀ ಸುಮ್ನೆ ಇರ್ತಿರಾ , ಯಾರಾರು ಕೇಳಿಸ್ಕೊಂಡು ಪಾಪ ಇವರ ಹೆಂಡ್ತಿ ಎಷ್ಟು ಕಷ್ಟ ಕೊಡ್ತಾಳೋ ಅಂತಾ ನನ್ನ ಮೇಲೆ ಅಪವಾದ ಮಾಡಬೇಕಲ್ಲ ...ಅಂತಾ ತುಸು ಮುನಿಸಿನಿಂದಲೇ ಗೊಣಗಿ ಅವನ ಹೆಂಡ್ತಿ...ಬೆರಳಲ್ಲಿ ಚಿವುಟೇ ಬಿಟ್ಟಿದ್ದಳು.

"ಅಮ್ಮಾ" ಅಂತಾ ಸ್ವಲ್ಪ ಜೋರಾಗೆ ನಾ ಕಿರುಚಿದ್ದೆ ...ನೋಡಿದರೆ ನನ್ನ ಬಲಗೈಯನ್ನು ಚೂಪಾದ ಉಗುರುಗಳಿಂದ ಸ್ಟಿಂಗ್ ಮಾಡಿದ್ದು ನೋಡಿದರೆ ...ಪಕ್ಕದಲ್ಲೇ ಕೂತಿದ್ದ ಆ ಹೆಂಗಸು ...ಅಷ್ಟರಲ್ಲೇ "ರೀ ಸುಮ್ನೆ ನೋಡ್ತೀರಾ ...ಕೂಗಾಡ್ತಿರಲ್ಲ" ಅಂತಾ ಎಡಗಡೆ ಕೂತಿದ್ದ ನನ್ನ ಹೆಂಡ್ತಿ ಬೇರೆ ನನ್ನ ಎಡಗೈಗೆ ಚಿವುಟಿದ್ದಳು  ):

ಓಹ್ ಐ ಯಾಮ್ ವೆರಿ ಸಾರೀ ...by ಮಿಸ್ಟೇಕ್ ದಿಸ್ ಹ್ಯಾಪನ್ಡ್ ...ಐ ಯಾಮ್ ವೆರಿ ಸಾರೀ..ಅಂತಾ ಆ ಹೆಂಗಸು ಸಾರೀ ಕೇಳಿದಾಗ ...ಸರಿ ಬಿಡಿ ...ಅರ್ಥ ಮಾಡ್ಕೊತೀನಿ ..ನಾನು ನಿಮ್ಮೊನೆ ..ಅಂದ್ರೆ ..ಕನ್ನಡದೋನೆ ಅಂತಾ ಮೆಲ್ಲಗೆ ಎಡಗಡೆ ಇದ್ದ ಹೆಂಡತಿಗೆ ಕೇಳದ ಹಾಗೆ ನುಡಿದು ...ಮತ್ತೆ ಮೂವಿ ಕಡೆ ನೋಡಿದರು ..ಮನಸ್ಸಿನ ಏಕಾಗ್ರತೆ ಕಳೆದಿತ್ತು.  ಅಲ್ಲಾ , ಪಕ್ಕದ ಸೀಟ್ ಖಾಲಿ ಇರದೋ ನೋಡೇ ಕೂತಿದ್ದೆ ....ಅದು ಯಾವಾಗ ಬಂದು ಕುತ್ರೋ ಇವ್ರು ? ಗೊತ್ತಾಗಲೇ ಇಲ್ಲವಲ್ಲ ಅಂತಾ ತಲೆ ಕೆರೆದು ಕೊಳ್ಳೋದರಲ್ಲೇ ಸಿನೆಮಾ ಮುಗಿದಿತ್ತು..

ಥೀಯೇಟರ್ ಮೇನ್ ಲಾಬಿನಲ್ಲಿ ಮಗನಿಗೆ ಪಾಪ್ ಕಾರ್ನ್ ತಗಂಡು ಬರ್ತೀನಿ ಅಂತಾ ಹೇಳಿ ಹೋಗಿ ನಿಂತಿದ್ದಾಗ , ಸಾರೀ again ಅಂತಾ ಪಕ್ಕದಲ್ಲಿ ಯಾರೋ ನುಡಿದಾಗ ತಿರುಗಿ ನೋಡಿದರೆ..ಅದೇ ಸುಂದರ ಪರಿಚಿತ ಮೊಗ. ಲಾಸ್ಟ್ ಟೈಮ್ ರಂಗಿ ತರಂಗ ಮೂವಿನಲ್ಲಿ ನೀವೇ ಅಲ್ವಾ ಸಿಕ್ಕಿದ್ದು ? ಹ್ಮ್ಮ್ ...ಪ್ರಿಯ ರೈಟ್ ? ಅಂತಾ ಕೇಳಿದ್ದೆ. ಓಹ್ ಯಾ ...ವಾಟ್ a co -incidence ಅಗೈನ್ ...ಅಂತಾ ಪ್ರಿಯಾ ನುಡಿದು ..ಹೊಸದಾಗಿ ಮದುವೆಯಾಗಿದ್ದ ಪತಿರಾಯನನ್ನು ಪರಿಚಯಿಸಿದ್ದಳು.

ಅಪ್ಪಾ...ಅಂತಾ ದೂರದಿಂದಲೇ ಮಗನ ಧ್ವನಿ ಕೇಳಿ ಬಂದಾಗ ...ಸಾರೀ , i  have ಟು ಗೋ ನೌ ...ಅಂತಾ ಅಲ್ಲಿಂದ ಬಂದಿದ್ದೆ.  ರೀ , ಯಾರು ಅದು? ಅಂತಾ ಹೆಂಡ್ತಿ ಕೇಳಿದಾಗ...ಹೊಸದಾಗಿ ಕನ್ನಡ ಫ್ಯಾಮಿಲಿ ಬಂದಿದ್ದಾರೆ ...ಏನೋ ಇನ್ಫೋ ಬೇಕಿತ್ತು ಅಂತಾ ಕೇಳ್ತಿದ್ರು ...ಅಂತಾ ನಾ ಅಂದಿದ್ದೆ . ಮತ್ತೆ ಪರಿಚಯ ಮಾಡಿಸಬೇಕಲ್ವಾ , ನಂಗೂ ಕಂಪನಿ ಸಿಗ್ತಿತ್ತು ಅಂತಾ ಹೆಂಡ್ತಿ ಹೇಳಿದ್ದು ಕೇಳಿ...ಆ ಪ್ರಿಯಾ ಚಿವುಟಿದ್ದಕ್ಕೆ ಕೆಂಪಾಗಿದ್ದ ನನ್ನ ಬಲಗೈ, ಹೆಂಡ್ತಿ ಚಿವುಟಿದ್ದ ಎಡಗೈ ಅನ್ನೇ ನೋಡಿಕೊಂಡು ಏನೂ ಉತ್ತರಿಸದೆ ..."ನೆಕ್ಸ್ಟ್ ಟೈಮ್ , ಮೂವಿ ಏನರ ನೋಡಲಿಕ್ಕೆ ಹೋದರೆ ಸ್ವಲ್ಪ ಬೇಗನೆ ಹೋಗಿ ಒನ್ದು ಮೂಲೆ ಸೀಟ್ ಹಿಡ್ಕೋ ಬೇಕು ...ಇಲ್ಲಾ ಅಂದ್ರೆ ಮನೇಲೆ netflix ಇಲ್ಲಾ ಡಿವಿಡಿ ಹಚ್ಚಿ ಕೊಂಡು ನೋಡ್ಬೇಕು, ಈ ಕೈ ಪರ್ಚಿಸಿಕೊಳ್ಳೋ ತೊಂದರೆ ತಪ್ಪಿಸಿಕೊಳ್ಳಲು...ಅಂತಾ ಮನದಲ್ಲೇ ಯೋಚಿಸುತ್ತಾ" ಮಗನ ಜೊತೆ ಹಾಗೆ ಮಾತಾಡ್ತಾ, ಓಡಿಸಿದ್ದೆ ಕಾರನ್ನು ..ಮನೆ ಕಡೆಗೆ !

ಅಬ್ಬಾ , ಆ ಭಯಕರ ರಮಣೀಯ ಕಾಡು , ಜಲಪಾತಗಳು , ಕ್ರೂರವಾದ ಆದರೆ ಪೀಸ್ (ಶಾಂತಿ) ಸರೋವರದ ಬಳಿ ಬಂದರೆ ಅಷ್ಟೇ ಪೀಸ್ ನಿಂದ ಜಗಳವಾಡದೆ ನೀರು ಕುಡಿವ ಎಲ್ಲಾ ಬಗೆಯ ಆ ಕಾಡಿನ ಪ್ರಾಣಿಗಳು...ಇವನ್ನೆಲ್ಲ ಡಿಸ್ನಿ ಅವರು ಅತ್ಯದ್ಬುತವಾಗಿ ತೋರಿಸಿರುವ ಪರಿ ಕಂಡು ..."ಈ ನಾಡಿನ ಮಂದಿಗಿಂತ , ಆ ಕಾಡಿನ ಮಂದಿನೇ ಎಷ್ಟೋ ವಾಸಿ..ನಾನು ಯಾಕೆ ಆ ಕಾಡಲ್ಲೇ ಇರಬಾರದು, ಈ ನಾಡಲ್ಲಿ ಇರೋಬದ್ಲು ?" ಅನ್ನೋ ಯೋಚನೆ ಕೂಡ ಮನದಲ್ಲಿ ಇಣುಕಿತ್ತು ...ನಿಮಗೂ ಕೂಡ ಇದೆ ತರಹ ಅನ್ನಿಸಿರೋ ಬಹುದು ಈ ಜಂಗಲ್ ಬುಕ್ ಸಿನಿಮಾ ನೋಡಿದ ಮೇಲೆ ....ಇನ್ನೂ ನೋಡಿಲ್ಲ ಅಂದ್ರೆ  ಖಂಡಿತ ನೋಡಿ ..ನಿಮ್ಮ ಮಡದಿ , ಮಕ್ಕಳೊಂದಿಗೆ :)

ದಿನ ನಿತ್ಯ ಹೇಗಿದ್ರೂ
ನೋಡ್ತಿರಿ, ಅದೇ ಆ ..ಹಾಳಾದ ಫೇಸ್ ಬುಕ್ ...
ಅದರ ಮಧ್ಯೆ ಒಮ್ಮೆಯಾದರೂ
ಸಂಸಾರದೊಂದಿಗೆ ನೋಡಿ ಬನ್ನಿ
ಮೊಗ್ಲಿಯ ಈ.. ಸುಂದರವಾದ ಜಂಗಲ್ ಬುಕ್ ...!

- ನಾಗರಾಜ್.ಎಂ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT