ನಟಿ ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ಸ್ಕೂಬಾ ಡೈವಿಂಗ್ ಕಲಿತು ನಗರಕ್ಕೆ ಹಿಂದಿರುಗಿದ ರಾಗಿಣಿ

ನಟಿ ರಾಗಿಣಿ ದ್ವಿವೇದಿ ತಮ್ಮ ವೃತಿಯಲ್ಲದೇ ಹಲವು ವಿಷಯಗಳ ಮೇಲೆ ಗಮನ ಹರಿಸಿದ್ದಾರೆ. ಈಗ ಅವರ ನೂತನ ಆಸಕ್ತಿ ಸ್ಕೂಬಾ ಡೈವಿಂಗ್ ಎಂದು

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ತಮ್ಮ ವೃತಿಯಲ್ಲದೇ ಹಲವು ವಿಷಯಗಳ ಮೇಲೆ ಗಮನ ಹರಿಸಿದ್ದಾರೆ. ಈಗ ಅವರ ನೂತನ ಆಸಕ್ತಿ ಸ್ಕೂಬಾ ಡೈವಿಂಗ್ ಎಂದು ತಿಳಿದುಬಂದಿದೆ.

ಕಳೆದ ಗುರುವಾರ ಮಾಲ್ಡೀವ್ಸ್ ಗೆ ಪ್ರಯಾಣ ಮಾಡಿದ್ದ ರಾಗಿಣಿ, ಸಮುದ್ರದಾಳಕ್ಕೆ ಜಿಗಿದು ಈಜುವ ಆಟ ಸ್ಕೂಬಾ ಡಿವಿಂಗ್ ನಲ್ಲಿ ಭಾಗವಹಿಸಿದ್ದರಂತೆ. ಇದು ಬೇಸಿಗೆ ರಜೆಗಾಗಿ ಹೋದದ್ದಲ್ಲ ಬದಲಾಗಿ ಅವರ ಕೆಲಸದ ನಡುವೆ ಸ್ಕೂಬಾ ಡೈವಿಂಗ್ ತರಬೇತಿ ಪಡೆಯಲು ಹೋಗಿದ್ದರಂತೆ. ಈಗ ಈ ಸಮುದ್ರ ತಳದ ಆಟ ಕಲಿತು ನಗರಕ್ಕೆ ಹಿಂದಿರುಗಿದ್ದಾರೆ.

"ಮತ್ತೊಂದು ಸಾಹಸಮಯ ಕ್ರೀಡೆಯನ್ನು ಕಲಿಯುವುದು ನನ್ನ ಹವ್ಯಾಸ. ಮೊದಲು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದೆ. ಆಗ ಇದರ ಬಗ್ಗೆ ಆಸಕ್ತಿ ತಳೆದಿದ್ದೆ" ಎನ್ನುವ ರಾಗಿಣಿ ಈಗ ಸ್ಕೂಬಾ ಡೈವಿಂಗ್ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದಿದ್ದಾರಂತೆ. "ಸ್ಕೂಬಾ ಡೈವಿಂಗ್ ಮಾಡಲು ಇನ್ನೂ ಹೆಚ್ಚಿನ ಸ್ಥಳಗಳಿಗೆ ಪ್ರಯಾಣ ನಡೆಸಲಿದ್ದೇನೆ" ಎಂದು ಅವರು ಹೇಳಿದ್ದಾರೆ.

ಮುಂದೊಂದು ದಿನ ಈ ಕೌಶಲ್ಯವನ್ನು ಸಿನೆಮಾದಲ್ಲಿ ಬಳಸುವ ಇಂಗಿತವನ್ನು ರಾಗಿಣಿ ವ್ಯಕ್ತಪಡಿಸುವ ರಾಗಿಣಿ "ಕನ್ನಡ ಸಿನೆಮಾದಲ್ಲಿ ಈ ಕ್ರೀಡೆಯನ್ನು ಒಳಗಳ್ಳಲು ನನಗೆ ಆಸೆಯಿದೆ" ಎನ್ನುತ್ತಾರೆ.

ಸದ್ಯಕ್ಕೆ ಅವರ ಮುಂದಿನ ಸಿನೆಮಾ 'ರಣಚಂಡಿ' ಆಡಿಯೋ ಬಿಡುಗಡೆಗೆ ರಾಗಿಣಿ ಸಜ್ಜಾಗುತ್ತಿದ್ದಾರೆ ನಂತರೆ 'ನಾನೇ ನೆಕ್ಸ್ಟ್ ಸಿ ಎಂ' ಸಿನೆಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್