ದಂಡುಪಾಳ್ಯ-೨ ಸಿನೆಮಾದಲ್ಲಿ ಪೂಜಾ ಗಾಂಧಿಯವರ ಭೀಕರ ಆಕ್ಷನ್
ಬೆಂಗಳೂರು: ಮಳೆ ಹುಡುಗಿ ಪೂಜಾ ಗಾಂಧಿ ಅಭಿನಯದ ದಂಡುಪಾಳ್ಯ-2 ಚಿತ್ರದ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಬುಧವಾರ ಸಿಟಿ ಸಿವಿಲ್ ಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ
ದಂಡುಪಾಳ್ಯ-2 ಚಿತ್ರದ ಬಿಡುಗಡೆಗೆ ತಡೆಕೋರಿ ಜೈಲಿನಲ್ಲಿರುವ 6 ಕೈದಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನಿರ್ದೇಶಕ ಶ್ರೀನಿವಾಸ ರಾಜು ಹಾಗೂ ನಿರ್ಮಾಪಕರಾದ ಪ್ರಶಾಂತ್ ಜಿ.ಆರ್ ಹಾಗೂ ಗಿರೀಶ್ ಅವರಿಗೆ ನೋಟಿಸ್ ನೀಡಿದೆ.
ನಮ್ಮ ಮೇಲಿರುವ ಪ್ರಕರಣಗಳ ಕುರಿತು ವಿಚಾರಣೆ ಇನ್ನೂ ಕೋರ್ಟ್ ನಲ್ಲಿ ಬಾಕಿಯಿದೆ, ಅಲ್ಲದೇ ತಮ್ಮ ಬದುಕಿನ ಘಟನೆ ಕುರಿತು ತಮ್ಮಿಂದ ಯಾವುದೇ ಹೇಳಿಕೆ ಪಡೆಯದೇ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೈದಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ ನಮ್ಮ ಅನುಮತಿ ಪಡೆದು ಚಿತ್ರ ಬಿಡುಗಡೆಗೊಳಿಸಲು ಸೂಚಿಸಬೇಕು ಎಂದು ಕೈದಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
2012ರಲ್ಲಿ ಸ್ಯಾಂಡಲ್ ವುಡ್ ಸಿನಿರಸಿಕರನ್ನು ಬೆಚ್ಚಿಬೀಳಿಸಿದ 'ದಂಡು ಪಾಳ್ಯ' ಚಿತ್ರದ ಮುಂದುವರಿದ ಭಾಗಕ್ಕೆ ಕಳೆದ ತಿಂಗಳು ಚಾಲನೆ ದೊರೆತಿದೆ. ಮತ್ತೊಮ್ಮೆ ಕುಖ್ಯಾತ ನರಹಂತಕ ಪಾತಕಿಗಳನ್ನ ಕೌರ್ಯವನ್ನ ತೆರೆ ಮೇಲೆ ತರಲು ನಿರ್ದೇಶಕ ಶ್ರೀನಿವಾಸ ರಾಜು ರೆಡಿಯಾಗಿದ್ದರೆ, ಇತ್ತ ಚಿತ್ರದ ನಿರ್ಮಾಪಕ ನಿರ್ದೇಶಕರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.