ರಚಿತಾ ರಾಮ್ 
ಸಿನಿಮಾ ಸುದ್ದಿ

ರಚಿತಾಳ ಚಕ್ರವ್ಯೂಹ

ಸಣ್ಣ ಅವಧಿಯಲ್ಲೇ ಕನ್ನಡ ಚಿತ್ರರಂಗದಲ್ಲಿ ಇಮೇಜ್ ರೂಪಿಸಿಕೊಂಡಿರುವ ಬೆಡಗಿ ರಚಿತಾ ರಾಮ್ ಈಗ ಮತ್ತೊಂದು ದೊಡ್ಡ ಬಿಡುಗಡೆಯ ತವಕದಲ್ಲಿದ್ದಾರೆ. ಅರಸಿ ಧಾರಾವಾಹಿಯಿಂದ ಹಿಡಿದು ನಂತರ

ಬೆಂಗಳೂರು: ಸಣ್ಣ ಅವಧಿಯಲ್ಲೇ ಕನ್ನಡ ಚಿತ್ರರಂಗದಲ್ಲಿ ಇಮೇಜ್ ರೂಪಿಸಿಕೊಂಡಿರುವ ಬೆಡಗಿ ರಚಿತಾ ರಾಮ್ ಈಗ ಮತ್ತೊಂದು ದೊಡ್ಡ ಬಿಡುಗಡೆಯ ತವಕದಲ್ಲಿದ್ದಾರೆ. ಅರಸಿ ಧಾರಾವಾಹಿಯಿಂದ ಹಿಡಿದು ನಂತರ ೨೦೧೩ ರ ಬುಲ್ ಬುಲ್, ದಿಲ್ ರಂಗೀಲಾ, ಅಂಬರೀಶಾ, ರನ್ನ ಮತ್ತು ರಥಾವರದಲ್ಲಿ ಕಾಣಿಸಿಕೊಂಡಿರುವ ನಟಿ ಅತಿ ಬೇಡಿಕೆಯುಳ್ಳ ನಟಿಯಾಗಿ ಹೊರಹೊಮ್ಮಿದ್ದಾರೆ.

ಪುನೀತ್ ರಾಜಕುಮಾರ್ ಜೊತೆಗೆ ಮೊದಲ ಸಿನೆಮಾದಲ್ಲಿ ನಟಿಸಿರುವ ನಟಿ ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ಹೀಗೆ "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪುನೀತ್ ಜೊತೆಗೆ ಕೆಲಸ ಮಾಡಲು ಚಕ್ರವ್ಯೂಹ ಸರಿಯಾದ ಸಿನೆಮಾ ಆಗಿತ್ತು. ಅಲ್ಲದೆ ನಿರ್ದೇಶಕ ಸರವಣನ್ ಜೊತೆಗೂ ವಿಶಿಷ್ಟ ಅನುಭವ. ಭಾಷೆಯ ಹೊರತಾಗಿಯೂ ಅವರ ಅತ್ಯುತ್ತಮ ಕೌಶಲ್ಯದಿಂದ ಎಲ್ಲಿ ಬೇಕಾದರೂ ಸಲ್ಲಬಹುದು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ" ಎನ್ನುತ್ತಾರೆ ರಚಿತಾ.

ಸರವಣನ್ ಅವರ ವೃತ್ತಿಪರತೆಯನ್ನು ಕೊಂಡಾಡುವ ರಚಿತಾ "ಕ್ಲೈಮ್ಯಾಕ್ಸ್ ವೇಳೆ ನನ್ನ ಮೊಣಕೈ ಉಳುಕಿಸಿಕೊಂಡು ಚಿತ್ರೀಕರಣಕ್ಕೆ ಹೋಗಲಾಗುತ್ತಿರಲಿಲ್ಲ. ಆದುದರಿಂದ ಡ್ಯೂಪ್ ಬಳಸಿ ಚಿತ್ರೀಕರಣ ಸಂಪೂರ್ಣಗೊಳಿಸಲು ಕೇಳಿಕೊಂಡೆ. ಆದರೆ ಅದನ್ನು ಅವರು ನಿರಾಕರಿಸಿ ನಾನು ಗುಣವಾಗುವವರೆಗೂ ಕಾದರು. ಸಿನೆಮಾ ಇಷ್ಟು ಚೆನ್ನಾಗಿ ಮೂಡಿ ಬಂದಿರುವುದಕ್ಕೆ ಸಂಗೀತ ನಿರ್ದೇಶಕ ಎಸ್ ಎಸ್ ಥಮನ್ ಮತ್ತು ಸಿನೆಮ್ಯಾಟೋಗ್ರಾಫರ್ ಶಣ್ಮುಗ ಸುಂದರಮ್ ಅವರ ಪಾತ್ರವೂ ದೊಡ್ಡದು" ಎನ್ನುತ್ತಾರೆ.

ಸಾಧು ಕೋಕಿಲಾ, ಭವ್ಯಾ, ಅಭಿಮನ್ಯು ಸಿಂಗ್ ಮತ್ತು ರಂಗಾಯಣ ರಘು ಕೂಡ ನಟಿಸಿರುವ ಚಕ್ರವ್ಯೂಹ ನಾಳೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT