ಹುಚ್ಚ ವೆಂಕಟ್ 
ಸಿನಿಮಾ ಸುದ್ದಿ

'ಡಿಕ್ಟೇಟರ್' ಚಿತ್ರದಿಂದ ಹುಚ್ಚ ವೆಂಕಟ್ ಔಟ್, ನಿರ್ದೇಶಕರ ವಿರುದ್ಧ 'ಫೈರಿಂಗ್'

ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಖ್ಯಾತಿ ಪಡೆದಿರುವ ಸ್ಯಾಂಡಲ್ ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಎಸ್. ನಾರಾಯಣ ನಿರ್ದೇಶನದ...

ಬೆಂಗಳೂರು: ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಖ್ಯಾತಿ ಪಡೆದಿರುವ ಸ್ಯಾಂಡಲ್ ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಎಸ್. ನಾರಾಯಣ್ ನಿರ್ದೇಶನದ 'ಡಿಕ್ಟೇಟರ್' ಚಿತ್ರದಿಂದ ಹೊರ ನಡೆದು ಮತ್ತೆ ಸುದ್ದಿಯಲ್ಲಿದ್ದಾರೆ.
ಚಿತ್ರದಿಂದ ಹೊರಬಂದ ನಂತರ ನಿರ್ದೇಶಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವೆಂಕಟ್, ನಾನು ಸಾಹಸಸಿಂಹ ವಿಷ್ಣುವರ್ಧನ್ ಸಾರ್ ಬಿಟ್ಟರೆ ಹ್ಯಾಟ್ರಿಕ್ ಹೀರೋ ಶಿವಣ್ಣನ ಕಟ್ಟಾ ಅಭಿಮಾನಿಯಾಗಿದ್ದು, ನಾರಾಯಣ್ ಗೆಲ್ಲಾ 'ಕೇರ್ ಮಾಡಲ್ಲ ಎಂದಿದ್ದಾರೆ. ಅಲ್ಲದೆ ನಾರಾಯಣ್ ಅವರ ತಮ್ಮ ಜನಪ್ರಿಯತೆಯನ್ನು ಚಿತ್ರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಯಾರಿಗೂ ತಲೆ ತಗ್ಗಿಸಿ ನಡೆಯೋನಲ್ಲ, ನಾನು ನನ್ನಿಷ್ಟದಂತೆ ನನ್ನ ಬ್ಯಾನರಿನಲ್ಲೇ ಅಭಿನಯಿಸಿ ನನ್ನ ಅಭಿಮಾನಿಗಳನ್ನ ಖುಷಿಪಡಿಸುತ್ತೇನೆ ಎಂದು ಹೇಳಿದ್ದಾರೆ.
'ಡಿಕ್ಟೇಟರ್' ಚಿತ್ರತಂಡ ತಮ್ಮ ಕಾಲ್‌ಶೀಟ್ ಪಡೆದು ತಮ್ಮ ಸಮಯವನ್ನು ಹಾಳು ಮಾಡಿದ್ದು, ಅದಕ್ಕಾಗಿ ನಾನು ಚಿತ್ರದಿಂದ ಹೊರಬಂದಿದ್ದೇನೆ. ನಾನು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನನ್ನ ಅಭಿಮಾನಿಗಳು ಖುಷಿಪಟ್ಟಿದ್ದರು. ನನ್ನಿಂದಲೇ 'ಡಿಕ್ಟೇಟರ್' ಚಿತ್ರಕ್ಕೆ ಪ್ರಚಾರ ಸಿಕ್ಕಿದ್ದು ಎಂದು ವೆಂಕಟ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!