ಪುನೀತ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಪುನೀತ್ ರ ಚಕ್ರವ್ಯೂಹ ಬಾಕ್ಸ್ ಆಫೀಸ್ ಧೂಳಿಪಟ

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರ ಕನ್ನಡ ಚಿತ್ರರಂಗದ ಹಳೆಯ ದಾಖಲೆಗಳನ್ನು ಸರಿಗಟ್ಟಿದೆ ಎಂದು ಹೇಳಲಾಗುತ್ತಿದೆ...

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರ ಕನ್ನಡ ಚಿತ್ರರಂಗದ ಹಳೆಯ ದಾಖಲೆಗಳನ್ನು ಸರಿಗಟ್ಟಿದೆ ಎಂದು ಹೇಳಲಾಗುತ್ತಿದೆ.

ಚಕ್ರವ್ಯೂಹ ಚಿತ್ರ ವಿಶ್ವದಾದ್ಯಂತ ಬರೋಬ್ಬರಿ 500 ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಭರ್ಜರಿ ಓಪನಿಂಗ್ ಸಿಕ್ಕಿದೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಚಕ್ರವ್ಯೂಹ ಚಿತ್ರ ಮೊದಲ ದಿನದ ಕಲೆಕ್ಷನ್ ಸುಮಾರು 11 ಕೋಟಿ ರುಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ.

ಪುನೀತ್ ರಾಜ್ ಕುಮಾರ್ ಅಭಿನಯದ ಈ ಹಿಂದಿನ ರಣವಿಕ್ರಮ ಚಿತ್ರ ಭರ್ಜರಿ ಓಪನಿಂಗ್ ಪಡೆದಿತ್ತು. ಬಳಿಕ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ವಿಫಲವಾಗಿತ್ತು. ಆದರೆ ತಮಿಳು ನಿರ್ದೇಶಕ ಶರವಣನ್ ಪ್ರೇಕ್ಷಕರು ಮೆಚ್ಚುವಂತ ಚಿತ್ರವನ್ನು ಕೊಟ್ಟಿದ್ದಾರೆ.

ಬಹುತಾರಾಗಣ ಹೊಂದಿರುವ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್, ರಚಿತಾರಾಮ್, ಅರುಣ್ ವಿಜಯ್, ಅಭಿಮನ್ಯು ಸಿಂಗ್, ಭವ್ಯಾ, ಸಿತಾರಾ, ಸಾಧು ಕೋಕಿಲ ಅಭಿನಯಿಸಿದ್ದಾರೆ. ಇನ್ನು ಚಿತ್ರಕ್ಕೆ ತಮನ್ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಅಣುಕೇಂದ್ರ ಇಸ್ಫಹಾನ್ ಮೇಲೆ ಅಮೆರಿಕ ದಾಳಿ; ದುಬೈ ಕರಾವಳಿಯ ತೈಲ ಟ್ಯಾಂಕರ್‌ ಹೊಡೆದು ಟೆಹ್ರಾನ್ ಪ್ರತೀಕಾರ

Hormuz ತೆರೆಯದಿದ್ದರೂ ಪರವಾಗಿಲ್ಲ, ಯುದ್ಧ ಕೊನೆಯಾಗಬೇಕು..: ಇರಾನ್ ಎದುರು ಮಂಡಿಯೂರಿದ್ರಾ ಅಮೆರಿಕ ಅಧ್ಯಕ್ಷ Donald Trump?

body-worn cams ಆಫ್ ಮಾಡಿ, ವಿನಾಕಾರಣ ವಾಹನ ತಡೆದು ಹಣ ವಸೂಲಿ: 3 ಟ್ರಾಫಿಕ್ ಪೊಲೀಸರ ಅಮಾನತು

ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದ 'ಅನ್ ಫಾಲೋ' ಪ್ರಹಸನ: ಮತ್ತೆ ಸುದ್ದಿಗೆ ಗ್ರಾಸವಾದ Rishab Shetty

IPL 2026: ದಶಕಗಳ ಕಾಲ ಆಟ.. CSK ಅಭಿಮಾನಿಗಳ ಕೂಗಾಟ.. ಮೈದಾನದಲ್ಲೇ ಭಾವುಕರಾದ Ravindra Jadeja, ವಿಡಿಯೋ ವೈರಲ್

SCROLL FOR NEXT