ಸಿನಿಮಾ ಸುದ್ದಿ

ಅಮೆರಿಕ ಅಧ್ಯಕ್ಷ ಅಭ್ಯರ್ಥಿ ಹಿಲರಿ ಕ್ಲಿಂಟನ್; ಚಂದಾ ಕಾರ್ಯಕ್ರಮ ಆಯೋಜಿಸಲಿರುವ ಡಿಕ್ಯಾಪ್ರಿಯೊ

Guruprasad Narayana
ಲಾಸೆಂಜಲಿಸ್: ಈ ತಿಂಗಳ ಕೊನೆಯ ಭಾಗದಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಭೇಟಿಯ ಸಮಯದಲ್ಲಿ ಅವರಿಗೆ ಚುನಾವಣೆಗಾಗಿ ಸಹಕರಿಸಲು ಚಂದಾ ಎತ್ತುವ ಕಾರ್ಯಕ್ರಮವನ್ನು ಆಸ್ಕರ್ ಪ್ರಶಸ್ತಿ ವಿಜೇತ ನಟ ಲಿಯಾನಾರ್ಡೋ ಡಿಕ್ಯಾಪ್ರಿಯೊ ಆಯೋಜಿಸಲಿದ್ದಾರೆ. 
'ಹಿಲರಿಯೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಬ್ಬ ವ್ಯಕ್ತಿ 33,400 ಡಾಲರ್ ನೀಡಿ ಟಿಕೆಟ್ ಖರೀದಿಸಬೇಕಿದೆ.
ಈ ಮೊತ್ತದಲ್ಲಿ 2700 ಡಾಲರ್ ಕ್ಲಿಂಟನ್ ಅವರ ಪ್ರಚಾರಕ್ಕೆ ಹೋದರೆ, ಉಳಿದ ಹಣ ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿ ಮತ್ತು ಇತರ ರಾಜ್ಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ನೀಡಲಾಗುತ್ತದೆ. 
ಈ ಕಾರ್ಯಕ್ರಮವನ್ನು ಡಿಕ್ಯಾಪ್ರಿಯೊ ಮನೆಯಲ್ಲಿ ಆಯೋಜಿಸಲು ಯೋಜನೆಗಳು ಸಿದ್ಧಗೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿದ್ದು, ಇನ್ನು ಅಂತಿಮ ರೂಪುರೇಶೆ ಹೊರಬೀಳಬೇಕಿದೆ. 
ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶ ನಡೆದ ಮೇಲೆ ಕ್ಲಿಂಟನ್ ಅವರ ಮೊದಲ ಲಾಸೆಂಜಲಿಸ್ ಭೇಟಿ ಇದಾಗಲಿದೆ. 
SCROLL FOR NEXT