ಸುದೀಪ್ ಮತ್ತು ಉಪೇಂದ್ರ 
ಸಿನಿಮಾ ಸುದ್ದಿ

'ಮುಕುಂದ ಮುರಾರಿ' ಉಪೇಂದ್ರ-ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕಾತರ!

ನಿರ್ದೇಶಕ ನಂದಕಿಶೋರ್ ತಮ್ಮ ಮುಂದಿನ ಚಿತ್ರ 'ಮುಕುಂದ ಮುರಾರಿ'ಯೊಂದಿಗೆ ಹಲವು ವಿಶೇಷತೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ಈ ಸಿನೆಮಾದಲ್ಲಿ ಉಪೇಂದ್ರ ಮತ್ತು ಸುದೀಪ್

ಬೆಂಗಳೂರು: ನಿರ್ದೇಶಕ ನಂದಕಿಶೋರ್ ತಮ್ಮ ಮುಂದಿನ ಚಿತ್ರ 'ಮುಕುಂದ ಮುರಾರಿ'ಯೊಂದಿಗೆ ಹಲವು ವಿಶೇಷತೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ಈ ಸಿನೆಮಾದಲ್ಲಿ ಉಪೇಂದ್ರ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದಾರೆ. 
ಗಾಂಧಿನಗರದ್ಲಲಿ ಹರಿದಾಡುತ್ತಿರುವ ಇತ್ತೀಚಿನ ಸುದ್ದಿಯಂತೆ, ಸಿನೆಮಾದ ಆಡಿಯೋ ಮತ್ತು ಟೀಸರ್ ಸುದೀಪ್ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿದೆ ಹಾಗೂ ಉಪೇಂದ್ರ ಹುಟ್ಟುಹಬ್ಬವಾದ್ದ ಸೆಪ್ಟೆಂಬರ್ 18 ರ ಆಸುಪಾಸಿನಲ್ಲಿ ಸಿನೆಮಾ ಬಿಡುಗಡೆಯಾಗುವ ಮುನ್ಸೂಚನೆ ದೊರೆತಿದೆ.
ಆಡಿಯೋ ಮತ್ತು ಟೀಸರ್ ಬಿಡುಗಡೆ ಸಾರ್ವಜನಿಕ ಕಾರ್ಯಕ್ರಮವಾಗಲಿದ್ದು, ಮಧ್ಯರಾತ್ರಿಯಲ್ಲಿ  ಈ ಸ್ಟಾರ್ ಗಳ ಅಭಿಮಾನಿಗಳ ನಡುವೆ ಪಾದಾರ್ಪಣೆಗೊಳ್ಳಲಿವೆ ಎಂದು ತಿಳಿದುಬಂದಿದೆ. 
ಈ ಇಬ್ಬರು ಒಟ್ಟಿಗೆ ನಟಿಸಿರುವುದು ಮತ್ತು ಅವರ ಹುಟ್ಟುಹಬ್ಬ ಒಂದೇ ತಿಂಗಳಲ್ಲಿ ಬಿದ್ದಿರುವುದು ಈ ನಟರ ಅಭಿಮಾನಿಯುಗಳಿಗೆ ಡಬಲ್ ಧಮಾಕ. ಸಿನೆಮಾದ ಚಿತ್ರೀಕರಣ ಬಹುತೇಕ ಸಂಪೂರ್ಣಗೊಂಡಿದ್ದು, ಡಬ್ಬಿಂಗ್ ಪ್ರಕ್ರಿಯೆ ಕೂಡ ಕೊನೆಯ ಹಂತದಲ್ಲಿದೆ ಎಂದು ತಿಳಿಸಿಯುತ್ತವೆ ಮೂಲಗಳು. 
ಇದು ಹಿಂದಿ ಸಿನೆಮಾ 'ಓ ಮೈ ಗಾಡ್' ನ ರಿಮೇಕ್. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸುಧಾಕರ್ ರಾಜ್ ಅವರ ಸಿನೆಮ್ಯಾಟೋಗ್ರಾಫಿ ಚಿತ್ರಕ್ಕಿದೆ. ನಿಖಿತಾ ತುಕ್ರಾಲ್ ನಾಯಕನಟಿಯಾಗಿದ್ದು, ರವಿಶಂಕರ್ ಮತ್ತು ಅವಿನಾಶ್ ಕೂಡ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ