ಸಿನಿಮಾ ಸುದ್ದಿ

ಇಂಗ್ಲಿಷ್-ಕನ್ನಡ ಚಿತ್ರ 'ಕಲರ್ಸ್' ಮೂಲಕ ಹಿಂದಿರುಗಿದ ರೂಪಾ ಅಯ್ಯರ್

Guruprasad Narayana
ಬೆಂಗಳೂರು: 'ಚಂದ್ರ' ಸಿನೆಮಾದ ನಂತರ ಹಿಂಬದಿಗೆ ಸರಿದಿದ್ದ ನಿರ್ದೇಶಕಿ-ನಟಿ ರೂಪಾ ಅಯ್ಯರ್ ಮತ್ತೆ ಹಿಂದಿರುಗಿದ್ದಾರೆ. 'ಮುಖಪುಟ' ಸಿನೆಮಾದ ಮೂಲಕ ಗಮನ ಸೆಳೆದಿದ್ದ ರೂಪಾ ಈಗ ಅಂತಾರಾಷ್ಟ್ರೀಯ ಮಕ್ಕಳ ಸಿನೆಮಾವೊಂದನ್ನು ನಿರ್ದೇಶಿಸಿದ್ದು, ಅದರ ಹೆಸರು 'ಕಲರ್ಸ್'.
ಎಚ್ ಐ ವಿ ಸೋಂಕು ತಗುಲಿರುವ ಮಕ್ಕಳ ವಿಷಯವನ್ನಿಟ್ಟುಕೊಂಡು ನಿರ್ದೇಶಿದ್ದ ಹೃದಯಸ್ಪರ್ಶಿ ಸಿನೆಮಾ 'ಮುಖಪುಟ'ಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. 
ಈಗ ಅವರ ಇತ್ತೀಚಿನ ಚಿತ್ರ 'ಕಲರ್ಸ್' ನಲ್ಲಿ ಅಮೆರಿಕಾ, ಆಫ್ರಿಕಾ ಮತ್ತು ಭಾರತೀಯ ಮಕ್ಕಳನ್ನು ಒಟ್ಟಿಗೆ ತಂದಿದ್ದಾರೆ. "ನಾನು ಹಿಂಬದಿಗೆ ಸರಿದದ್ದು ಏಕೆಂದರೆ ನಾನು ಮಾಡುವ ಸಿನೆಮಾಗಳ ಬಗ್ಗೆ ನಾನು ಖಚಿತವಾಗಿದ್ದೇನೆ. ನನ್ನ ಹೊಸ ಸಿನೆಮಾ ಜನಾಂಗೀಯ ನಿಂದನೆ ಬಗೆಗೆ ಮಾತನಾಡುತ್ತದೆ" ಎನ್ನುತ್ತಾರೆ. 
ಕನ್ನಡ ಮತ್ತು ಇಂಗ್ಲೀಷಿನಲ್ಲಿ ಚಿತ್ರೀಕರಿಸಲಾಗಿರುವ ಈ ಸಿನೆಮಾದಲ್ಲಿ ಅವ್ವೊರಾ, ಬಸು ಮತ್ತು ಯಶವಂತ್ ಬಾಲನಟರಾಗಿ ನಟಿಸಿದ್ದಾರೆ. "ಈ ಸಿನೆಮಾ ಮಕ್ಕಳ ನಾಯಕತ್ವ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ" ಎಂದು ಕೂಡ ರೂಪಾ ತಿಳಿಸುತ್ತಾರೆ. 
ಸಿನೆಮಾದ ಚಿತ್ರೀಕರಣ ಮುಗಿದಿದ್ದು, ಈಗ ಚಿತ್ರೀಕರಣ ನಂತರದ ಕೆಲಸಗಳಲ್ಲಿ ನಿತರರಾಗಿರುವ ರೂಪ "ಈ ಸಿನೆಮಾವನ್ನು ದಾಂಡೇಲಿ ಅರಣ್ಯದಲ್ಲಿ ಚಿತ್ರಿಸಲಾಗಿದೆ. ಆದುದರಿಂದ ನಮ್ಮೆಲ್ಲರಿಗೂ ಸಾಹಸ ದೃಶ್ಯಗಳು ಸಿಗಲಿವೆ" ಎನ್ನುತ್ತಾರೆ. 
ಮೂರು ತಿಂಗಳುಗಳಲ್ಲಿ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿರುವ ರೂಪಾ, 30 ಕ್ಕೂ ಹೆಚ್ಚು ಸಿನೆಮೋತ್ಸವಗಳಲ್ಲಿ ಈ ಸಿನೆಮಾ ಪ್ರದರ್ಶಿಸುವ ಉಮೇದು ತೋರುತ್ತಾರೆ. 
SCROLL FOR NEXT