ತೆಲುಗು ಮೆಗಾಸ್ಟಾರ್ ಚಿರಂಜೀವಿ 
ಸಿನಿಮಾ ಸುದ್ದಿ

61 ನೇ ವರ್ಷಕ್ಕೆ ಕಾಲಿಟ್ಟ ಚಿರಂಜೀವಿ; ಉಡುಗೊರೆಯಾಗಿ ವಿಶೇಷ ಟೀಸರ್

ಸೋಮವಾರಕ್ಕೆ 61 ನೇ ವರ್ಷಕ್ಕೆ ಕಾಲಿಟ್ಟ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಅವರ ಮುಂದಿನ ಚಿತ್ರದ ಚಿತ್ರತಂಡ ವಿಶೇಷ ಟೀಸರ್ ಉಡುಗೊರೆ ನೀಡಿದೆ. ಈ ವಿಡಿಯೋದಲ್ಲಿ ಸಿನೆಮಾದ

ಚೆನ್ನೈ: ಸೋಮವಾರಕ್ಕೆ 61 ನೇ ವರ್ಷಕ್ಕೆ ಕಾಲಿಟ್ಟ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಅವರ ಮುಂದಿನ ಚಿತ್ರದ ಚಿತ್ರತಂಡ ವಿಶೇಷ ಟೀಸರ್ ಉಡುಗೊರೆ ನೀಡಿದೆ. ಈ ವಿಡಿಯೋದಲ್ಲಿ ಸಿನೆಮಾದ ತಾಂತ್ರಿಕ ತಂಡವನ್ನು ವೀಕ್ಷಕರಿಗೆ ಪರಿಚಯಿಸಲಾಗಿದೆ. 
ಈ 52 ಸೆಕಂಡ್ ಗಳ ಟೀಸರ್ ನಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದ ಮತ್ತು ತೆಲುಗು ಸಿನೆಮಾ ರಂಗದ ಒಮ್ಮತದ ರಾಜ ಎಂದು ಚಿರಂಜೀವಿಯವರನ್ನು ಬಿಂಬಿಸಲಾಗಿದೆ. 
ಟೀಸರ್ ನ ಕೊನೆಯಲ್ಲಿ 'ಬಾಸ್ ಈಸ್ ಬ್ಯಾಕ್' (ಬಾಸ್ ಹಿಂದಿರುಗಿದ್ದಾರೆ) ಎಂದು ಹೇಳಲಾಗಿದ್ದು, #ಬಾಸ್ ಈಸ್ ಬ್ಯಾಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. 
ನಟ ಚಿರಂಜೀವಿ ತಮ್ಮ ವೃತ್ತಿ ಜೀವನದ 150 ನೆಯ ಚಿತ್ರ 'ಖೈದಿ ನಂ 150' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದು ತಮಿಳು ಸಿನೆಮಾ 'ಕತ್ತಿ' ಯ ರಿಮೇಕ್. 
ಕಾಜಲ್ ಅಗರವಾಲ್ ನಾಯಕ ನಟಿಯಾಗಿದ್ದು, ವಿವಿ ವಿನಾಯಕ್ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಸಂಕ್ರಾಂತಿಗೆ ತೆರೆ ಕಾಣಲಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI ಇಂಪ್ಯಾಕ್ಟ್ ಶೃಂಗಸಭೆ ಟಾರ್ಗೆಟ್: ವಿದೇಶಿಗರಿಂದ ದಾಳಿ ಸಾಧ್ಯತೆ, ಗುಪ್ತಚರ ವರದಿ ಬೆನ್ನಲ್ಲೇ G20 ಗ್ರೇಡ್ ಸೈಬರ್ ಭದ್ರತಾ ವ್ಯವಸ್ಥೆ!

'ಕರಾವಳಿ' ಹೂಡಿಕೆ ವಿವಾದ: ಪ್ರಿಯಾಂಕ್ ಖರ್ಗೆ ಸಹಜವಾಗಿ ಹೇಳಿದ್ದಾರೆ, ಆದರೆ ದಕ್ಷಿಣ ಕನ್ನಡ ಬದಲಾಗುತ್ತಿದೆ; ಪರಮೇಶ್ವರ್

T20 World Cup: Super 8 ಪ್ರವೇಶಿಸಿ ಜಿಂಬಾಬ್ವೆ ಇತಿಹಾಸ ಸೃಷ್ಟಿ; 17 ವರ್ಷಗಳ ನಂತರ Australia ಟೂರ್ನಿನಿಂದ ಔಟ್!

News wrap of the day 17-02-2026| Muda case: CS ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ, ಆಡಿಯೋ ಬಿಡುಗಡೆ; ನಾಯಿ, ನಾಯಕತ್ವ: ಮಹದೇವಪ್ಪ ಹೇಳಿಕೆಗೆ DK Suresh ಪ್ರತಿಕ್ರಿಯೆ ಏನು?

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ: ಅಶ್ವಿನಿ ವೈಷ್ಣವ್

SCROLL FOR NEXT