ನಟಿ ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

ಶ್ರದ್ಧಾ ಶ್ರೀನಾಥ್ ಮುಂದಿನ ಚಿತ್ರ 'ಗೆಳೆಯನ ಗೆಳತಿ'

'ಯು-ಟರ್ನ್' ಮೂಲಕ ಚಿತ್ರರಂಗದ ಗಮನ ಸೆಳೆದ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯಕ್ಕೆ 'ಉಳಿದವರು ಕಂಡಂತೆ' ಸಿನೆಮಾದ ತಮಿಳು ರಿಮೇಕ್ 'ನಿವಿನ್ ಪೌಲಿ'

ಬೆಂಗಳೂರು: 'ಯು-ಟರ್ನ್' ಮೂಲಕ ಚಿತ್ರರಂಗದ ಗಮನ ಸೆಳೆದ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯಕ್ಕೆ 'ಉಳಿದವರು ಕಂಡಂತೆ' ಸಿನೆಮಾದ ತಮಿಳು ರಿಮೇಕ್ ಸಿನೆಮಾದಲ್ಲಿ ನಿವಿನ್ ಪೌಲಿ ಜೊತೆಗೆ ನಟಿಸುತ್ತಿರುವ ನಟಿ ಮಣಿರತ್ನಂ ಅವರ ಮುಂದಿನ ಚಿತ್ರ 'ಕಾಟ್ರೆ ವೇಳೆಯಿಲೈ' ನಲ್ಲಿಯೂ ಪಾತ್ರ ಪಡೆದಿದ್ದಾರೆ. 
ಕನ್ನಡದಲ್ಲಿ ಶ್ರದ್ಧಾ ಸದ್ಯಕ್ಕೆ ಸುನಿ ಅವರ 'ಆಪರೇಷನ್ ಅಲಮೇಲಮ್ಮ' ಮತ್ತು ಪ್ರದೀಪ್ ವರ್ಮಾ ಅವರ 'ಊರ್ವಿ' ಸಿನೆಮಾಗಳಲ್ಲಿ ನಟಿಸುತ್ತಿದ್ದರೆ, ಈಗ ಚೊಚ್ಚಲ ನಿರ್ದೇಶಕ ಕಿಶೋರ್ ಕುಮಾರ್ ಅವರ ಸಿನೆಮಾದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. 
ಶೀರ್ಷಿಕೆ 'ಗೆಳೆಯನ ಗೆಳತಿ' ಎಂದಿದ್ದು ಸಿನೆಮಾ ಸೆಪ್ಟೆಂಬರ್ ಎರಡನೇ ವಾರದಿಂದ ಚಿತ್ರೀಕರಣ ಪ್ರಾರಂಭಿಸಲಿದೆ. ಶ್ರದ್ಧಾ ಜೊತೆಗೆ ಪ್ರಭು ನಟಿಸಲಿದ್ದಾರೆ. ಪ್ರಭು ಕೂಡ ಸದ್ಯಕ್ಕೆ 'ಊರ್ವಿ' ಸಿನೆಮಾದಲ್ಲಿ ನಟಿಸುತ್ತಿದ್ದು, 'ಮಂಜರಿ' ಸಿನೆಮಾದ ಭಾಗವಾಗಿದ್ದಾರೆ ಕೂಡ. 
ಕನ್ನಡ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಿಶೋರ್ ಅವರಿಗೆ 8-10 ವರ್ಷಗಳ  ಅನುಭವವಿದ್ದು, ತಮಿಳು ಚಿತ್ರರಂಗದಲ್ಲಿ ಬಾಲಶೇಖರನ್ ಮತ್ತು ಶಶಿ ಅವರ ಜೊತೆಗೆ ಸಹನಿರ್ದೇಶಕನಾಗಿ ಕೂಡ ಕೆಲಸ ಮಾಡಿದ್ದಾರೆ. 
"ನಾನು ಸ್ಕ್ರಿಪ್ಟ್ ಬರೆಯುವುದರ ನಂತರ ನಿರ್ದೇಶಕರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತೇನೆ. ನಾನು ಸಿನೆಮಾದ ಸಂಪೂರ್ಣ ಪ್ರಕ್ರಿಯೆಯಲ್ಲಿ ನಿರ್ದೇಶಕರ ಜೊತೆಗೆ ದುಡಿದಿದ್ದೇನೆ" ಎನ್ನುತ್ತಾರೆ ಕಿಶೋರ್. 
"ಉಳಿದ ತಾರಾಗಣದ ಆಯ್ಕೆಯಲ್ಲಿ ನಿರತನಾಗಿದ್ದೇನೆ" ಎನ್ನುತ್ತಾರೆ ಕಿಶೋರ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ