ಬಾಲಿವುಡ್ ನಟ ನಾಸಿರುದ್ದೀನ್ ಶಾ 
ಸಿನಿಮಾ ಸುದ್ದಿ

ಖ್ಯಾತ ಸಂಗೀತಗಾರರಾದ ಕಿಶೋರ್ ಕುಮಾರ್, ಬರ್ಮನ್ ಜೀವನಾಧಾರಿತ ಚಿತ್ರ ಮಾಡದಿದ್ದರೆ ಚೆನ್ನ: ನಾಸಿರುದ್ದೀನ್

ಖ್ಯಾತ ಸಂಗೀತಗಾರರಾದ ಕಿಶೋರ್ ಕುಮಾರ್ ಮತ್ತು ಆರ್.ಡಿ ಬರ್ಮನ್ ಅವರ ಜೀವನಚರಿತ್ರೆ ಚಿತ್ರವನ್ನು ಮಾಡದಿದ್ದರೆಯೇ ಚೆನ್ನಾಗಿರುತ್ತೆ ಎಂದು ಬಾಲಿವುಡ್ ನಟ ನಾಸಿರುದ್ದೀನ್...

ಮುಂಬೈ: ಖ್ಯಾತ ಸಂಗೀತಗಾರರಾದ ಕಿಶೋರ್ ಕುಮಾರ್ ಮತ್ತು ಆರ್.ಡಿ ಬರ್ಮನ್ ಅವರ ಜೀವನಚರಿತ್ರೆ ಚಿತ್ರವನ್ನು ಮಾಡದಿದ್ದರೆಯೇ ಚೆನ್ನಾಗಿರುತ್ತೆ ಎಂದು ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರು ಬುಧವಾರ ಹೇಳಿದ್ದಾರೆ.

ಸಾಧನೆಕಾರರ ಕುರಿತ ಜೀವನಚರಿತ್ರೆಯನ್ನು ಸಿನಿಮಾ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಖ್ಯಾತ ನಿರ್ದೇಶಕ ಗುರು ದತ್ ಅವರ ಜೀವನಚರಿತ್ರೆ ಕುರಿತಂತೆ ಸಿನಿಮಾ ನಿರ್ಮಾಣವಾಗುತ್ತಿರುವ ವಿಚಾರ ತಿಳಿಯಿತು. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಉದ್ದೇಶದಿಂದ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ರೀತಿಯ ಚಿತ್ರಗಳು ಅವರ ಜೀವನ ಚರಿತ್ರೆ ಹಾಗೂ ಸಾಧನೆಗಳನ್ನು ಹಾಳು ಮಾಡುತ್ತವೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಂಗೀತ ನಿರ್ದೇಶಕರಾದ ಕಿಶೋರ್ ಕುಮಾರ್ ಮತ್ತು ಆರ್.ಡಿ. ಬರ್ಮನ್ ಅವರ ಜೀವನಚರಿತ್ರೆ ಕುರಿತಂತೆ ನಿರ್ಮಾಣವಾಗಲಿರುವ ಚಿತ್ರ ಕುರಿತಂತೆ ಮಾತನಾಡಿರುವ ಅವರು, ಈ ಚಿತ್ರಗಳನ್ನು ಮಾಡದಿರುವುದೇ ಒಳ್ಳೆಯದು. ಮಿಲ್ಕಾ ಸಿಂಗ್ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ಗುರು ದತ್ ಅವರ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ವಿಚಾರ ತಿಳಿಯಿತು. ಈ ಚಿತ್ರಗಳನ್ನು ಮಾಡದಿದ್ದರೆಯೇ ಚೆನ್ನಾಗಿರುತ್ತದೆ.

ಹಾಡು ಹಾಗೂ ನೃತ್ಯಗಳನ್ನೇ ಸಿನಿಮಾ ಮಾಡುವುದು ಚೆನ್ನಾಗಿರುತ್ತದೆ. ವಾಣಿಜ್ಯ ಚಿತ್ರ ನಿರ್ಮಿಸಿರುವವರು ಈ ರೀತಿಯ ಗಂಭೀರವಾದ ವಿಚಾರಗಳನ್ನು ಮುಟ್ಟದಿದ್ದರೆಯೇ ಚೆನ್ನಾಗಿರುತ್ತದೆ. ಸಾಧಕರ ಕಥೆಗಳನ್ನು ಸಿನಿಮಾ ಮಾಡುವ ಮೂಲಕ ಅವುಗಳನ್ನು ನಾಶ ಮಾಡಿಬಿಡುತ್ತಾರೆ.

ಚಿತ್ರರಂಗಕ್ಕೆ ಅಗತ್ಯವಿದ್ದಾಗ ನಾನು ಚಿತ್ರರಂಗಕ್ಕೆ ಬಂದೆ. ದೇವರ ಆಶೀರ್ವಾದ ಜನರು ನನ್ನನ್ನು ಇಷ್ಟಪಟ್ಟರು. ನವಾಜುದ್ದೀನ್ ಅಥವಾ ಇರ್ಫಾನ್ ರಂತಹ ನಟರಷ್ಟು ನಾನು ಸುಧೀರ್ಘ ಹಾಗೂ ಕಠಿಣ ಶ್ರಮವನ್ನು ಪಟ್ಟಿಲ್ಲ. ಇದೀಗ ನಟರು ಯಶಸ್ವಿಯಾಗಿದ್ದಾರೆ. ಆದರೆ, ಸುಧೀರ್ಘ ಶ್ರಮದ ಬಳಿಕ ಎಂದು ಹೇಳಿದ್ದಾರೆ.

ನಾಸಿರುದ್ದೀನ್ ಅವರು ಶಾದ್ ಅಲಿ ನಿರ್ದೇಶಿಸುತ್ತಿರುವ ಆದಿತ್ಯಾ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟಿನೆಯ 'ಓಕೆ ಜಾನುಟ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel