ನಟಿ ಬ್ರಿಟ್ನಿ ಸ್ಪಿಯರ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಮತ್ತೆ ಮದುವೆಯಾಗಲ್ಲ, ಆದರೂ 3 ಮಕ್ಕಳು ಬೇಕು: ನಟಿ ಬ್ರಿಟ್ನಿ ಸ್ಪಿಯರ್

ಜೀವನದಲ್ಲಿ ಮತ್ತೆ ಮದುವೆಯಾಗುವುದಿಲ್ಲ. ಆದರೂ ತಮಗೆ ಮೂರು ಮಂದಿ ಮಕ್ಕಳು ಬೇಕು ಎಂದು ಹಾಲಿವುಡ್ ನಟಿ ಹಾಗೂ ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ ಹೇಳಿದ್ದಾರೆ.

ಲಂಡನ್: ಜೀವನದಲ್ಲಿ ಮತ್ತೆ ಮದುವೆಯಾಗುವುದಿಲ್ಲ. ಆದರೂ ತಮಗೆ ಮೂರು ಮಕ್ಕಳು ಬೇಕು ಎಂದು ಹಾಲಿವುಡ್ ನಟಿ ಹಾಗೂ ಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ ಹೇಳಿದ್ದಾರೆ.

ಲಂಡನ್ ನಲ್ಲಿ ಬ್ರಿಟೀಷ್ ನಿರೂಪಕ ಜೇಮ್ಸ್ ಕಾರ್ಡನ್ ನೊಂದಿಗೆ ಗುರುವಾರ ಕಾರ್ ಪೂಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟ್ನಿ, ತನಗೆ ಮದುವೆ ಮತ್ತು ಪುರುಷರೊಂದಿಗೆ ಸಾಕಾಗಿ  ಹೋಗಿದ್ದು, ತಾನೆಂದೂ ಮತ್ತೆ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಮದುವೆ ಹೊರತಾಗಿಯೂ ತಮಗೆ ಮತ್ತೆ ಮೂವರು ಮಕ್ಕಳು ಬೇಕು ಎಂದು ಬ್ರಿಟ್ನಿ ತಮ್ಮ ಮನದಾಳದ  ಆಸೆಯನ್ನು ಹೇಳಿಕೊಂಡಿದ್ದಾರೆ.

ಮದುವೆ ಮತ್ತು ಜೀವನದ ಕುರಿತು ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ರಿಟ್ನಿ, ಪ್ರಸ್ತುತ ನಾನು ಮದುವೆಯಿಂದ ದೂರವಿದ್ದೇನೆ. ನನ್ನ ಜೀವನದಲ್ಲೇ ನಾನು ಮದುವೆ ತಂಟೆಗೆ ಹೋಗುವುದಿಲ್ಲ.  ನನಗೆ ಸಾಕಾಗಿ ಹೋಗಿದ್ದು, ಮದುವೆ ಮಾತು ಇನ್ನು ಕನಸಷ್ಟೇ ಎಂದು ಹೇಳಿದ್ದಾರೆ. ಆದರೆ ಇದೇ ವೇಳೆ ಮಕ್ಕಳ ಕುರಿತು ಮಾತನಾಡಿರುವ ಬ್ರಿಟ್ನಿ, ನನಗೆ ಇನ್ನೂ ಮೂವರು ಮಕ್ಕಳನ್ನು  ಹೊಂದುವ ಆಸೆ ಇದ್ದು, ಇದಕ್ಕಾಗಿ ಉತ್ತಮ ಹುಡುಗನ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

34 ವರ್ಷದ ಬ್ರಿಟ್ನಿಗೆ ಇಬ್ಬರು ಮಕ್ಕಳಿದ್ದು, 10 ವರ್ಷದ ಸೀನ್ ಫೆಡರ್ಲಿನ್ ಹಾಗೂ 9 ವರ್ಷದ ಜೇಡನ್ ಜೇಮ್ಸ್ ಬ್ರಿಟ್ನಿ ಅವರ ಎರಡನೇ ಪತಿ ಕೆವಿನ್ ಫೆಡರ್ಲಿನ್ ಅವರ ಮಕ್ಕಳಾಗಿದ್ದಾರೆ. 2004ರಲ್ಲಿ  ಬ್ರಿಟ್ನಿ ಹಾಗೂ ಕೆವಿನ್ ಮದುವೆಯಾಗಿದ್ದು, ಇವರಿಬ್ಬರ ಸಂಬಂಧ 2007ರಲ್ಲಿ ಕೊನೆಗೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!