ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹಾ
ಮುಂಬೈ: ಖ್ಯಾತ ನಟ-ರಾಜಕಾರಿಣಿ ಶತ್ರುಘ್ನ ಸಿನ್ಹಾ ಅವರ ಪುತ್ರಿ ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹಾ ತಮಗೆ ರಾಜಕೀಯ ಸೇರುವ ಇಚ್ಛೆ ಇಲ್ಲ ಮತ್ತು ಅದಕ್ಕೆ ನನಗೆ ಸಾಮರ್ಥ್ಯವೂ ಇಲ್ಲ ಎಂದಿದ್ದಾರೆ.
"ಇಲ್ಲ, ನನಗೆ ರಾಜಕೀಯಕ್ಕೆ ಧುಮುಕುವ ಸಾಮರ್ಥ್ಯ ಇಲ್ಲ. ನನ್ನ ತಂದೆ ರಾಜಕಾರಣಿ ಆಗಿರುವುದಕ್ಕೆ ನಾನು ಕೂಡ ಅದಕ್ಕೆ ಬೀಳಬೇಕು ಎಂದೇನಿಲ್ಲ" ಎಂದು ಸೊನಾಕ್ಷಿ ಹೇಳಿದ್ದಾರೆ.
ನಟಿ ಸದ್ಯಕ್ಕೆ ತಮ್ಮ ಮುಂದಿನ ಸಿನೆಮಾ 'ಅಕಿರಾ' ಸಿನೆಮಾದ ಪ್ರಚಾರದಲ್ಲಿ ನಿರತರಾಗಿದ್ದು, ಅವರ ತಂದೆ ಸಿನೆಮಾ ನೋಡಲು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. "ನನ್ನ ತಂದೆ ಸಿನೆಮಾ ನೋಡಲು ತೀವ್ರವಾಗಿ ಕಾಯುತ್ತಿದ್ದಾರೆ. ನನ್ನ ತಾಯಿ ಸಿನೆಮಾ ನೋಡಿ ಅವರಿಗೆ ಹೇಳಿದರು. ಈಗ ಅವರು ಕಾಯುತ್ತಿದ್ದಾರೆ" ಎಂದಿದ್ದಾರೆ
ಎಆರ್ ಮುರುಗದಾಸ್ ನಿರ್ದೇಶನದ 'ಅಕಿರಾ' ಸೆಪ್ಟೆಂಬರ್ 2 ಕ್ಕೆ ಬಿಡುಗಡೆಯಾಗಲಿದೆ.