ನಟ ಶರಣ್ 
ಸಿನಿಮಾ ಸುದ್ದಿ

'ನಾನುಮ್ ರೌಡಿ ಧಾನ್' ಕನ್ನಡ ರಿಮೇಕ್ ನಲ್ಲಿ ಶರಣ್; ಪಿ ಸಿ ಶೇಖರ್ ನಿರ್ದೇಶನ

ತಮಿಳು ಸಿನೆಮಾ 'ನಾನುಮ್ ರೌಡಿ ಧಾನ್' ಕನ್ನಡಕ್ಕೆ ರಿಮೇಕ್ ಆಗಲಿದೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಮೂಲಗಳನ್ನು ನಂಬುವುದಾದರೆ ಈಗ ಕನ್ನಡ ಅವತರಣಿಕೆಯನ್ನು ಪಿ ಸಿ ಶೇಖರ್

ಬೆಂಗಳೂರು: ತಮಿಳು ಸಿನೆಮಾ 'ನಾನುಮ್ ರೌಡಿ ಧಾನ್' ಕನ್ನಡಕ್ಕೆ ರಿಮೇಕ್ ಆಗಲಿದೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಮೂಲಗಳನ್ನು ನಂಬುವುದಾದರೆ ಈಗ ಕನ್ನಡ ಅವತರಣಿಕೆಯನ್ನು ಪಿ ಸಿ ಶೇಖರ್ ನಿರ್ದೇಶಿಸಲಿದ್ದು, ಶರಣ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಇದು ಶೇಖರ್-ಶರಣ್ ಜೋಡಿಯ ಮೊದಲ ಚಿತ್ರ.
ಮತ್ತೊಂದು ಆಸಕ್ತಿದಾಯಕ ಅಂಶವೆಂದರೆ ಕನ್ನಡ ರಿಮೇಕ್ ಸಿನೆಮಾವನ್ನು ತಮಿಳು ನಟ ಧನುಶ್ ಅವರೇ ವಂಡರ್ ಬಾರ್ ಫಿಲಂಸ್ ಬ್ಯಾನರ್ ಅಡಿ ನಿರ್ಮಿಸಲಿದ್ದಾರಂತೆ. ನಿರ್ದೇಶಕ ಶೇಖರ್ ಮತ್ತು ನಟ ಶರಣ್ ಇದರ ಬಗ್ಗೆ ವಿವರ ನೀಡಲು ನಿರಾಕರಿಸಿದರು ಬಲ್ಲ ಮೂಲಗಳಿಂದ ತಮಿಳು ನಟ ಇದನ್ನು ನಿರ್ಮಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ. 
"ಮಾತುಕತೆಗಳು ನಡೆದಿವೆ ಮತ್ತು ಎರಡು ಕಡೆಯಿಂದ ಸಮಾನ ಆಸಕ್ತಿ ಇದೆ. ಆದರೆ ಅಧಿಕೃತ ಘೋಷಣೆಯಾಗುವವರೆಗೆ ಕಾಯಬೇಕಾಗುತ್ತದೆ" ಎನ್ನುತ್ತವೆ ಮೂಲಗಳು. 
ವಿಜ್ಞೇಶ್ ಶಿವಂ ನಿರ್ದೇಶಿಸಿದ್ದ, ವಿಜಯ್ ಸೇತುಪತಿ ಮತ್ತು ನಯನತಾರ ನಟಿಸಿದ್ದ 'ನಾನುಮ್ ರೌಡಿ ಧಾನ್' 2015 ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. 
ಶರಣ್ ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಇದು ಸೆಪ್ಟೆಂಬರ್ ಗೆ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಶೇಖರ್ ಕೂಡ ತಮ್ಮ ಮುಂದಿನ ಚಿತ್ರ 'ರಾಗ' ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT