ನವದೆಹಲಿ: ಹಾಲಿವುಡ್ ನಲ್ಲಿ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಮುಂದಿನ ಐದು ವರ್ಷಗಳ ಕಾಲ ಲಾಸೆಂಜಲೀಸ್ ನಲ್ಲಿ ನೆಲೆಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು.
ಈ ಸುದ್ದಿ ಬಾಲಿವುಡ್ ನಲ್ಲಿ ಹಬ್ಬಿದ ನಂತರ ಸ್ಪಷ್ಟನೆ ನೀಡಿರುವ 34 ವರ್ಷದ ನಟಿ ಲಾಸೆಂಜಲೀಸ್ ನಲ್ಲಿ ನೆಲೆಸುವ ಯಾವುದೇ ಯೋಜನೆಗಳಿಲ್ಲ ಎಂದಿದ್ದಾರೆ.
"ನಾನು ಇಂತಹ ನಗೆಪಾಟಲಿನ ಸುದ್ದಿಗಳನ್ನು ನೋಡುತ್ತಾ ಏಳುತ್ತೇನೆ. ನ್ಯೂಯಾರ್ಕ್ ನಲ್ಲಿ ಕ್ವಾಂಟಿಕೋ ಚಿತ್ರೀಕರಣ ನಡೆಯುತ್ತಿದೆ, ನನ್ನ ಮನೆ ಮುಂಬೈನಲ್ಲಿ. ಎಲ್ ಎ ಚಿತ್ರದಲ್ಲಿಲ್ಲ" ಎಂದು ನಟಿ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಹಿಂದಿನ ವರದಿಗಳ ಪ್ರಕಾರ ಅಮೆರಿಕಾ ಟಿವಿ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ಮುಂದೆಯೂ ನಟಿಸುವ ಅವಕಾಶ ಸಿಕ್ಕರೆ 'ಬಾಜಿರಾವ್ ಮಸ್ತಾನಿ' ನಟಿ ಮುಂದಿನ ಐದು ವರ್ಷಗಳ ಕಾಲ ಲಾಸೆಂಜಲೀಸ್ ನಲ್ಲಿ ನೆಲೆಸಲಿದ್ದಾರೆ ಎಂದು ತಿಳಿಯಲಾಗಿತ್ತು.
ಹಾಲಿವುಡ್ ನಲ್ಲಿ ಹಲವಾರು ಅವಕಾಶಗಳು ಬಂದಿರುವುದರಿಂದ ಪೀಸೀ ಇಲ್ಲಿನ ಹಲವಾರು ಅವಕಾಶಗಳನ್ನು ನಿರಾಕರಿಸಿದ್ದಾರೆ ಎಂದು ಕೂಡ ತಿಳಿಯಲಾಗಿತ್ತು.
ಹಾಗೆಯೇ ಹಾಲಿವುಡ್ ಸಿನೆಮಾ 'ಬೇವಾಚ್' ನಲ್ಲಿ ಪಾದಾರ್ಪಣೆ ಮಾಡಿರುವ ಪ್ರಿಯಾಂಕಾ, ಅದರ ಬಿಡುಗಡೆಗೆ ಕಾಯುತ್ತಿದ್ದಾರೆ.