ಸಿನಿಮಾ ಸುದ್ದಿ

ಸೆಲ್ಫಿಗೆ ಕ್ಲಿಕ್ ಎಂದು ಕ್ಯಾನ್ಸರ್ ರೋಗಿಗಳಿಗೆ ನೆರವಾಗಿ..

Sumana Upadhyaya
'ಸೆಲ್ಫಿ ಕ್ಲಿಕ್ ಕ್ಲಿಕ್ ನಲ್ಲಿ ಕಿಕ್' ಇದು ಚಿತ್ರವೊಂದರ ಶೀರ್ಷಿಕೆ,ಇದನ್ನು ನಿರ್ದೇಶಿಸುತ್ತಿರುವವರು ಫಣಿ ಕೊಟಪ್ರೊಲು. ನಾಳೆ ಬಿಡುಗಡೆಯಾಗುತ್ತಿರುವ 8 ಚಲನಚಿತ್ರಗಳಲ್ಲಿ ಇದು ಕೂಡ ಒಂದು. ಸಾಫ್ಟ್ ವೇರ್ ಎಂಜಿನಿಯರ್ ಗಳು ಸೇರಿ ತಯಾರಿಸಿದ ಚಿತ್ರವಿದು. 
ಚಿತ್ರದ ನಿರ್ಮಾಪಕರಲ್ಲೊಬ್ಬರಾದ ನವೀನ್ ಕೈಪು, ತಮ್ಮ ಬಾಲ್ಯ ಸ್ನೇಹಿತ ಫಣಿಯವರ ಹತ್ತಿರ ಸಹಾಯ ಕೇಳಿದ್ದಾಗಿ ಹೇಳುತ್ತಾರೆ. ಸೆಲ್ಫಿ ನಿಜ ಜೀವನದ ಘಟನೆ ಆಧರಿಸಿದ ಚಿತ್ರ. ಸೆಲ್ಫಿ ತೆಗೆಯುವಾಗ ತೀರಿಹೋದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನ ರಹಸ್ಯ ಸಾವಿನ ಕುರಿತು ತಯಾರಿಸಿದ ಚಿತ್ರವಿದು. 
ಚಿತ್ರ ತಯಾರಿಸಲು ಸುಮಾರು ಎರಡು ವರ್ಷ ಹಿಡಿಯಿತು. ಯಾಕೆಂದರೆ ಸಾಫ್ಟ್ ವೇರ್ ಎಂಜಿನಿಯರ್ ಗಳಾದ ಕಾರಣ ವಾರಾಂತ್ಯದಲ್ಲಿ ಮಾತ್ರ ಕೆಲಸ ಮಾಡುತ್ತಿದ್ದರು. ಚಿತ್ರ ಬಿಡುಗಡೆ ನಂತರ ಸಂಪಾದನೆಯಾದ ಹಣದಲ್ಲಿ ಒಂದು ಭಾಗವನ್ನು ಕ್ಯಾನ್ಸರ್ ಫೌಂಡೇಶನ್ ಗೆ ನೀಡಲು ಚಿತ್ರತಂಡ ನಿರ್ಧರಿಸಿದೆ.
''ನಾನು ನನ್ನ ತಂದೆ ಮತ್ತು ಬಾವನನ್ನು ಕ್ಯಾನ್ಸರ್ ಖಾಯಿಲೆಯಿಂದ ಕಳೆದುಕೊಂಡೆ. ಅವರ ಚಿಕಿತ್ಸಾ ಸಮಯದಲ್ಲಿ ಕ್ಯಾನ್ಸರ್ ವೆಚ್ಚ ದುಬಾರಿಯಾಗಿತ್ತು. ಕೆಲವರಿಗೆ ಕ್ಯಾನ್ಸರ್ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಂದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಕ್ಯಾನ್ಸರ್ ಫೌಂಡೇಶನ್ ಗೆ ನೀಡುತ್ತಿದ್ದೇವೆ ಎನ್ನುತ್ತಾರೆ ನವೀನ್. ಚಿತ್ರ ಬಿಡುಗಡೆಗೂ ಮುನ್ನ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಟಿಕೆಟ್ ಕಾಯ್ದಿರಿಸಿದ್ದಾರೆ. ನಮ್ಮ ಈ ಪ್ರಯತ್ನಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡಬೇಕೆಂದು ಕೋರುತ್ತೇನೆ ಎನ್ನುತ್ತಾರೆ ಅವರು.
ಸೆಲ್ಫಿ ಕ್ಲಿಕ್ ಚಿತ್ರದಲ್ಲಿ ತ್ರಿಲೋಕ್ ಶ್ರಾಫ್, ದೀಪಾ ಗೌಡ, ನಮ್ರತಾ, ಪೂಜಾ ಮೊದಲಾದವರಿದ್ದಾರೆ. ಅರ್ಜುನ್ ರಾಮು ಅವರ ಸಂಗೀತವಿದೆ.
SCROLL FOR NEXT