'ರಾಗ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ರಾಗ' ಸಿನೆಮಾದಲ್ಲಿ ಅಂಧನ ಪಾತ್ರದಲ್ಲಿ ನಿರ್ಮಾಪಕ ಮಿತ್ರ

ಪಿ ಸಿ ಶೇಖರ್ ನಿರ್ದೇಶನದ ಸಂಗೀತಮಯ ಸಿನೆಮಾ 'ರಾಗ' ಮೊದಲ ನೋಟದಲ್ಲೇ ಹಲವು ಅಚ್ಚರಿಗಳನ್ನು ಮೂಡಿಸಿದೆ. ಈ ಸಿನೆಮಾದ ನಿರ್ಮಾಪಕ ಮಿತ್ರ ನಾಯಕನಟನಾಗಿರುವುದು ಅದರಲ್ಲಿ ಒಂದು.

ಬೆಂಗಳೂರು: ಪಿ ಸಿ ಶೇಖರ್ ನಿರ್ದೇಶನದ ಸಂಗೀತಮಯ ಸಿನೆಮಾ 'ರಾಗ' ಮೊದಲ ನೋಟದಲ್ಲೇ ಹಲವು ಅಚ್ಚರಿಗಳನ್ನು ಮೂಡಿಸಿದೆ. ಈ ಸಿನೆಮಾದ ನಿರ್ಮಾಪಕ ಮಿತ್ರ ನಾಯಕನಟನಾಗಿರುವುದು ಅದರಲ್ಲಿ ಒಂದು. 
ಹಾಗೆಯೇ ಮಿತ್ರ ಅವರು ಈ ಸಿನೆಮಾದಲ್ಲಿ ಅಂಧನ ಪಾತ್ರವನ್ನು ಪೋಷಿಸುತ್ತಿರುವುದು ವಿಶೇಷ. ಅವರು ಭಾಮಾ ಎದುರು ನಟಿಸಲಿದ್ದಾರೆ. 
ಹೋಟೆಲ್ ಮಾಲೀಕರು ಕೂಡ ಆಗಿರುವ ಮಿತ್ರ ಅವರ ೩೦ ಎಕರೆ ತೋಟದಲ್ಲಿ ಚಿತ್ರೀಕರಣಕ್ಕಾಗಿ ಆಕರ್ಷಕ್ ಸೆಟ್ ಹಾಕಲಾಗಿದೆ. ಈ ಸಿನೆಮಾದ ಕಲಾ ನಿರ್ದೇಶಕ ಗುಣ ಖ್ಯಾತ ಕಲಾವಿದ ಕೂಡ. ಪ್ರತಿ ದೃಶ್ಯವು ಒಂದು ಕಲಾಕೃತಿಯಂತೆ ಕಾಣಲು ಇಡೀ ಚಿತ್ರತಂಡ ಶ್ರಮವಹಿಸಿದೆಯಂತೆ. 
ಈ ಸಿನೆಮಾ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂದು ತಿಳಿಸುವ ನಿರ್ದೇಶಕ "ಈ ಸಿನೆಮಾಗೆ ಮತ್ತೊಂದು ದೊಡ್ಡ ಬೆಂಬಲ ಎಂದರೆ ಸಿನಿಮಾಟೋಗ್ರಾಫರ್ ವೈದಿ ಕೂಡ ಕಲಾವಿದನಾಗಿರುವದು" ಎನ್ನುತ್ತಾರೆ ಶೇಖರ್. 
೭೦% ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇನ್ನು ೮ ದಿನಗಳ ಚಿತ್ರೀಕರಣ ಬಾಕಿ ಉಳಿದಿರುವುದಾಗಿ ತಿಳಿಸುತ್ತದೆ. ಫೆಬ್ರವರಿಯಲ್ಲಿ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ ನಿರ್ಮಾಪಕ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ