ಸಿನಿಮಾ ಸುದ್ದಿ

ರಮೇಶ್ ಅರವಿಂದ್ 'ಧನ್ಯವಾದ ವಿಶ್ವಪರ್ಯಟನೆ'; ಲಂಡನ್ ನಲ್ಲಿ ಮೊದಲ ಸ್ಟಾಪ್

Guruprasad Narayana
ಬೆಂಗಳೂರು: ತಮ್ಮ ನಿರ್ದೇಶನದ 'ಸುಂದರಾಂಗ ಜಾಣ' ಬಿಡುಗಡೆಯ ಮೂಲಕ ಈ ವರ್ಷಕ್ಕೆ ಅಂತ್ಯ ಹಾಡಲಿರುವ ನಟ-ನಿರ್ದೇಶಕ ರಮೇಶ್ ಅರವಿಂದ್ ಮುಂದಿನ ವರ್ಷ ತಮ್ಮ ೧೦೦ನೆ ಚಿತ್ರ 'ಪುಷ್ಪಕ ವಿಮಾನ'ದ ಬಿಡುಗಡೆಯಿಂದ ಆರಂಭಿಸಲಿದ್ದಾರೆ. ಡಿಸೆಂಬರ್ ೨೩ ಕ್ಕೆ 'ಸುಂದರಾಂಗ ಜಾಣ' ಬಿಡುಗಡೆಯಾಗಲಿದೆ ಮತ್ತು ಜನವರಿ ೬ ೨೦೧೭ ಕ್ಕೆ 'ಪುಷ್ಪಕ ವಿಮಾನ' ಬಿಡುಗಡೆಯಾಗಲಿದೆ. 
ಈಮಧ್ಯೆ ರಮೇಶ್ ಅರವಿಂದ್ ಲೈವ್ ಕಾರ್ಯಕ್ರಮ ನಡೆಸಿಕೊಡಲು ವಿಶ್ವಪರ್ಯಟನೆ ನಡೆಸಿದ್ದಾರೆ. ಇದರ ಮೊದಲ ಕಂತು ಲಂಡನ್ನಿನಲ್ಲಿ ನವೆಂಬರ್ ೨೭ ಮತ್ತು ೨೯ ರ ನಡುವೆ ನಡೆದಿದೆ. 
ಈ ಧನ್ಯವಾದ ತಿಳಿಸುವ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬಂದಿತು ಎಂದು ತಿಳಿಸುವ ಅವರು, "೨೫ ವರ್ಷದ ರಮೇಶ್ ಅರವಿಂದ್ ವೇದಿಕೆಯ ಮೇಲಿದ್ದ ೫೦ ವರ್ಷದ ರಮೇಶ್ ಅರವಿಂದ್ ಅವರೊಂದಿಗೆ ಮಾತುಕತೆ ನಡೆಸಿದರು. ಇದು ದ್ವಿಪಾತ್ರ ಅಭಿನಯದ ರೀತಿಯಲ್ಲಿತ್ತು ಮತ್ತು ಪ್ರೇಕ್ಷಕರಿಗೆ ಇಷ್ಟವಾಯಿತು. ನನ್ನ ಜೀವನದ ಖುಷಿಯ ಕ್ಷಣಗಳನ್ನು ಆನಿಮೇಷನ್ ಟೀಸರ್ ಗಳ ಮೂಲಕ ತೆರೆದಿಟ್ಟು, ಅವುಗಳನ್ನು ಕಥೆಯ ರೂಪದಲ್ಲಿ ವಿವರಿಸಿದೆ" ಎನ್ನುತ್ತಾರೆ ರಮೇಶ್. 
ಪ್ರೇಕ್ಷಕರ ಜೊತೆಗೆ ನಡೆದ ಸಂವಾದದಲ್ಲಿ ಘಟನೆಯೊಂದನ್ನು ನೆನಪಿಸಿಕೊಂಡ ರಮೇಶ್ "ತೀರ್ಥಹಳ್ಳಿಯ ಬಳಿ ೨೦ ವರ್ಷದ ಹಿಂದೆ 'ಮುಂಗಾರಿನ ಮಿಂಚಿ' ಸಿನೆಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗ, ಹುಡುಗಿಯೊಬ್ಬಳು ಓಡಿ ಬಂದು ನನ್ನ ಗಲ್ಲಕ್ಕೆ ಮುತ್ತಿಟ್ಟಳು. ನಾನು ಅವಳ ಗೆಳತಿಯನ್ನು ಈ ಕಾರ್ಯಕ್ರಮದಲ್ಲಿ ಭೇಟಿ ಮಾಡಿದೆ. ಆ ಘಟನೆ ಒಂದು ಸವಾಲಾಗಿತ್ತು ಮತ್ತು ಅವಳ ಗೆಳತಿ ಸವಾಲಿನಲ್ಲಿ ಗೆದ್ದಿದ್ದಳು ಎಂದು ನನಗೆ ಇಲ್ಲಿ ತಿಳಿಯಿತು. ಈಗ ಚುಂಬಿಸಬಹುದೇ ಎಂದು ಅವರು ನನ್ನನ್ನು ಕೇಳಿದರು, ನಾನು ನಿರಾಕರಿಸಲು ಸಾಧ್ಯವಾಗಲಿಲ್ಲ ಆದರೆ ತಬ್ಬಿಕೊಳ್ಳುವುದಕ್ಕೆ ಒಪ್ಪಿದೆ" ಎನ್ನುತ್ತಾರೆ. 
ಅವರ ಮುಂದಿನ ನಿಲ್ದಾಣ ಅಮೆರಿಕಾ ಅಂತೆ. ಇದು ನನ್ನ ಸಿನೆಮಾಗಳ ಮತ್ತು ಪೂರ್ವ ಕೆಲಸಗಳ ಮೇಲೆ ನಿರ್ಧಾರವಾಗುತ್ತದೆ. "ಈ ಬಾರಿ ನನ್ನ ಸಿನೆಮಾ 'ಪುಷ್ಪಕ ವಿಮಾನ'ದ ಜೊತೆ ವಿದೇಶಿ ಪ್ರಯಾಣ ಬೆಳೆಸಲಿದ್ದೇನೆ" ಎನ್ನತ್ತಾರೆ ರಮೇಶ್.  
SCROLL FOR NEXT