ನಿರ್ದೇಶಕ ಲೋಹಿತ್ ಮತ್ತು ನಟಿ ಪ್ರಿಯಾಂಕಾ ಉಪೇಂದ್ರ
ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ 'ಮಮ್ಮಿ ಸೇವ್ ಮಿ' ಸಿನೆಮಾದ ಯಶಸ್ಸು, ನಟಿ ಪ್ರಿಯಾಂಕಾ ಉಪೇಂದ್ರ ಮತ್ತು ನಿರ್ದೇಶಕ ಎಚ್ ಲೋಹಿತ್ ಅವರನ್ನು ಮತ್ತೆ ಒಂದು ಮಾಡಿದೆ. ಈ ಜೋಡಿಯ ಮುಂದಿನ ಸಿನೆಮಾ 'ಭಾವನಾತ್ಮಕ ಥ್ರಿಲ್ಲರ್' ಅಂತೆ. ನಟಿ ಸ್ಕ್ರಿಪ್ಟ್ ಗೆ ಒಪ್ಪಿಗೆ ನೀಡಿದ್ದು, ಕೋಲ್ಕತ್ತಾದಲ್ಲಿ ನಡೆಯುವ ಕಥೆ ಒಳಗೊಂಡಿದೆಯಂತೆ.
ಇದನ್ನು ಧೃಢೀಕರಿಸುವ ಪ್ರಿಯಾಂಕಾ, ಲೋಹಿತ್ ಅವರೊಂದಿಗೆ ಮತ್ತೆ ಕೆಲಸ ಮಾಡುವುದಕ್ಕೆ ಸಂತಸ ತಂದಿದೆ ಎನ್ನುತ್ತಾರೆ. "ನಾನು 'ಮಮ್ಮಿ.. ' ಬಿಡುಗಡೆಯಾಗಿ, ಪ್ರತಿಕ್ರಿಯೆಗಳು ಬರುವವರೆಗೂ ಕಾಯುವಂತೆ ಅವರಿಗೆ ಹೇಳಿದ್ದೆ" ಎನ್ನುವ ಅವರು "ಈಗ ಸಿನೆಮಾ ಜನಮೆಚ್ಚುಗೆ ಗಳಿಸಿದ್ದು, ಎರಡನೇ ಯೋಜನೆಯ ಬಗ್ಗೆ ಗಮನಹರಿಸುವಂತೆ ಹೇಳಿದ್ದೇನೆ" ಎನ್ನುತ್ತಾರೆ.
ತಮ್ಮ ಸ್ವಂತ ಬ್ಯಾನರ್ ಅಡಿ ಸಿನೆಮಾವೊಂದನ್ನು ನಿರ್ಮಿಸಲು ಹಲವು ದಿನಗಳಿಂದ ನಟಿ ಹವಣಿಸುತ್ತಿದ್ದರು, ಈಗ ಲೋಹಿತ್ ಅವರ ಮುಂದಿನ ಚಿತ್ರ ಇದೆ ಬ್ಯಾನರ್ ಅಡಿ ಮೂಡಿ ಬರಲಿದೆಯೆ ಎಂಬ ಪ್ರಶ್ನೆಗೆ "ನಿರ್ದೇಶಕ ಸ್ಕ್ರಿಪ್ಟ್ ಕೆಲಸ ಸಂಪೂರ್ಣಗೊಳಿಸಲಿ, ನಂತರ ಇದು ನನ್ನ ಬ್ಯಾನರ್ ಅಡಿ ನಿರ್ಮಾಣವಾಗುತ್ತದೆಯೋ ಅಥವಾ ಬೇರೆ ನಿರ್ಮಾಪಕರು ಮುಂದೆ ಬರಲಿದ್ದಾರೋ ಎಂಬುದನ್ನು ನಿರ್ಧರಿಸಬಹುದು" ಎನ್ನುತ್ತಾರೆ ಪ್ರಿಯಾಂಕಾ.
'ಮಮ್ಮಿ ಸೇವ್ ಮಿ' ೧೦ ದಿನಗಳಲ್ಲಿ ಸುಮಾರು ೩.೫ ಕೋಟಿ ರೂ ವ್ಯವಹಾರ ಮಾಡಿದೆಯಂತೆ ಮತ್ತು ತೆಲುಗು ಅವತರಿಣಿಕೆ ಈ ವಾರ ಬಿಡುಗಡೆಯಾಗಲಿದೆ. ಹಾಗೆಯೇ ಬಾಲಿವುಡ್ ನಲ್ಲಿ ಈ ಸಿನೆಮಾ ರಿಮೇಕ್ ಮಾಡಲು ಆಸಕ್ತಿ ತೋರಿದ್ದಾರಂತೆ. "ಮುಂಬೈ ಸಿನೆಮಾ ರಂಗ ಲೋಹಿತ್ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿದು ಸಂತಸವಾಯಿತು" ಎನ್ನುತ್ತಾರೆ ಪ್ರಿಯಾಂಕಾ. "ಅವರು ಮೊದಲು ಉಪೇಂದ್ರ ಅವರಿಗೆ ಕರೆ ಮಾಡಿದ್ದರು, ನಂತರ ಅವರು ಲೋಹಿತ್ ಅವರಿಗೆ ಸಂಪರ್ಕ ಮಾಡಿಕೊಟ್ಟಿದ್ದಾರೆ. ಕನ್ನಡ ಸಿನೆಮಾಗಳ ಬಗ್ಗೆ ಇತರ ಚಿತ್ರರಂಗದವರು ಆಸಕ್ತಿವಹಿಸುವುದು ಬಹಳ ಆಪ್ತವಾದದ್ದು. ಮುಂದಿನ ಯೋಜನೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದೇನೆ. ಇದು ವಿಭಿನ್ನವಾಗಿರುತ್ತದೆ" ಎನ್ನುತ್ತಾರೆ ನಟಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos