ಸಿದ್ಧಾರ್ಥ್ ಬಸ್ರೂರ್ 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಬಿ-ಟೌನ್ ರಾಕರ್ ಸಿದ್ಧಾರ್ಥ್ ಬಸ್ರೂರ್

ಸ್ಯಾಂಡಲ್ ವುಡ್ ಗೆ ಹೊಸ ಗಾಯಕರನ್ನು ಪರಿಚಯಿಸುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಬಾರಿ ಹೆಬ್ಬುಲಿ...

ಸ್ಯಾಂಡಲ್ ವುಡ್ ಗೆ ಹೊಸ ಗಾಯಕರನ್ನು ಪರಿಚಯಿಸುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಬಾರಿ ಹೆಬ್ಬುಲಿ ಸಿನಿಮಾಗೆ ರಾಕರ್ ಮತ್ತು ಹಾಡುಗಾರ ಸಿದ್ಧಾರ್ಥ್ ಬಸ್ರೂರ್ ಅವರನ್ನು ಕರೆತಂದಿದ್ದಾರೆ. ಬಾಲಿವುಡ್ ನಲ್ಲಿ ಭರವಸೆಯ ಗಾಯಕ ಎಂಬ ಹೆಸರನ್ನು ಗಳಿಸಿರುವ ಸಿದ್ಧಾರ್ಥ್ ಹಾಂಟೆಡ್, ಪ್ಲೇಯರ್ಸ್ ಮತ್ತು ಇತ್ತೀಚಿನ ಧೋನಿ-ದ ಅನ್ ಟೋಲ್ಡ್ ಸ್ಟೋರಿ ಮೊದಲಾದ ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದಕ್ಕೆ ಸಿದ್ದಾರ್ಥ್ ಬಸ್ರೂರ್ ಧ್ವನಿ ನೀಡಿದ್ದಾರೆ.
ಪಂಕ್ ರಾಕ್ ಮತ್ತು ಇಂಡೀ ರಾಕ್ ನಲ್ಲಿ ವಿಶೇಷತೆ ಹೊಂದಿರುವ ಸಂಗೀತಗಾರ ಮತ್ತು ಹಾಡುಗಾರ ಸಿದ್ಧಾರ್ಥ್ ಹೆಬ್ಬುಲಿಯಲ್ಲಿ ಸುದೀಪ್ ಅವರ ಆರಂಭದ ಪ್ರವೇಶದ ಗೀತೆಗೆ ಧ್ವನಿ ನೀಡಿದ್ದಾರೆ. ಅವರ ಬೇಸ್ ಧ್ವನಿ ಹಾಡಿನ ಟ್ರ್ಯಾಕಿಗೆ ಹೊಂದಿಕೆಯಾಗುತ್ತದೆ ಎಂದು ಅರ್ಜುನ್ ಜನ್ಯ ಹೇಳುತ್ತಾರೆ. 
''ನನಗೆ ಕರ್ನಾಟಕ ಮತ್ತು ಕನ್ನಡ ಭಾಷೆ ಹೊಸತಲ್ಲ. ನಾನು ಕರಾವಳಿ ಜಿಲ್ಲೆಯಲ್ಲಿ ಹುಟ್ಟಿದ್ದು, ಕೊಂಕಣಿ ನನ್ನ ಮಾತೃಭಾಷೆ. ನಾನು ಮುಂಬೈಯಲ್ಲಿ ನೆಲೆಸಿರುವುದರಿಂದ ಅಲ್ಲಿನ ಭಾಷೆಗೆ ಪ್ರಭಾವಿತನಾಗಿದ್ದೇನೆ. ಇದು ಕನ್ನಡದಲ್ಲಿ ನನ್ನ ಮೊದಲ ಹಾಡಾದರೂ ಕೂಡ ಕನ್ನಡದ ಗಾಯಕರಾದ ವಿಜಯ್ ಪ್ರಕಾಶ್ ರಂಥವರ ಜೊತೆ ಸಂಪರ್ಕದಲ್ಲಿದ್ದೇನೆ'' ಎನ್ನುತ್ತಾರೆ ಸಿದ್ಧಾರ್ಥ್.
ಹೆಬ್ಬುಲಿ ಚಿತ್ರದ ಹಾಡಿನಲ್ಲಿ ಅರ್ಜುನ್ ಜನ್ಯ ಅವರ ಸಲಹೆಯಂತೆ ಹಾಡಿದ್ದೇನೆ. ಹಾಡಿನಲ್ಲಿ ರಾಕ್ ನ ಪ್ರಭಾವವಿದೆ. ಸಂಗೀತ ನಿರ್ದೇಶಕರು ಕೂಡ ಹಾಡು ಅದೇ ರೀತಿ ಬರಬೇಕೆಂದು ಬಯಸಿದ್ದರು ಎಂದರು.
ಸುದೀಪ್ ಅವರ ಹಾಡಿನ ಚಿತ್ರೀಕರಣ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಮಧ್ಯೆ ಚಿತ್ರದ ಆಡಿಯೊ ಇದೇ ತಿಂಗಳ 25ರಂದು ದಾವಣಗೆರೆಯಲ್ಲಿ ನಡೆಯಲಿದೆ. 
ಎಸ್ ಆರ್ ವಿ ಪ್ರೊಡಕ್ಷನ್ ಉಮಾಪತಿ ಪಿಕ್ಚರ್ಸ್ ಸಹಯೋಗದೊಂದಿಗೆ ತಯಾರಾಗುತ್ತಿರುವ ಹೆಬ್ಬುಲಿ ಚಿತ್ರವನ್ನು ಎಸ್.ಕೃಷ್ಣ ನಿರ್ದೇಶಿಸಿದ್ದಾರೆ. ಚಿತ್ರದ ನಾಯಕಿಯಾಗಿ ಅಮಲಾ ಪೌಲ್ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!