ದುನಿಯಾ ವಿಜಯ್ 
ಸಿನಿಮಾ ಸುದ್ದಿ

'ಕನಕ' ಚಿತ್ರೀಕರಣಕ್ಕೆ ಆರ್ ಚಂದ್ರು ಸಜ್ಜು; ದುನಿಯಾ ವಿಜಯ್ ಸಾರಥ್ಯ

ಡಿಸೆಂಬರ್ ೧೪ ರಂದು ತಮ್ಮ ಮುಂದಿನ ಸಿನೆಮಾ 'ಕನಕ'ನಿಗೆ ನಿರ್ದೇಶಕ ಆರ್ ಚಂದ್ರು ಮುಹೂರ್ತ ನೆರವೇರಿಸಿದ್ದು, ತಮ್ಮ ಚೊಚ್ಚಲ ಸಿನೆಮಾ 'ಚಾರ್ ಮಿನಾರ್' ಪ್ರಾರಂಭಿಸಿದ ೧೦ ವರ್ಷಗಳ ನಂತರ...

ಬೆಂಗಳೂರು: ಡಿಸೆಂಬರ್ ೧೪ ರಂದು ತಮ್ಮ ಮುಂದಿನ ಸಿನೆಮಾ 'ಕನಕ'ನಿಗೆ ನಿರ್ದೇಶಕ ಆರ್ ಚಂದ್ರು ಮುಹೂರ್ತ ನೆರವೇರಿಸಿದ್ದು, ತಮ್ಮ ಚೊಚ್ಚಲ ಸಿನೆಮಾ 'ಚಾರ್ ಮಿನಾರ್' ಪ್ರಾರಂಭಿಸಿದ ೧೦ ವರ್ಷಗಳ ನಂತರ ಅದೇ ದಿನ ಇದು ನೆರವೇರಿದೆ. 
"ನನ್ನ ಚೊಚ್ಚಲ ಚಿತ್ರ ನನ್ನನು ನಿರ್ದೇಶಕನಾಗಿ ಹೊರಹೊಮ್ಮಿಸಿತು. ೧೦ ವರ್ಷದ ನಂತರ ಅದೇ ದಿನ ನನ್ನ ಮುಂದಿನ ಚಿತ್ರವೂ ಪ್ರಾರಂಭವಾಗಿರುವುದಕ್ಕೆ ಸಂತಸವಾಗಿದೆ" ಎನ್ನುತ್ತಾರೆ ಚಂದ್ರು. 
ದುನಿಯಾ ವಿಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ 'ಕನಕ' ಸಿನೆಮಾದ ಅಡಿಶೀರ್ಷಿಕೆ 'ಅಣ್ಣಾವ್ರ ಅಭಿಮಾನಿ'ಯಂತೆ. 
ಇದಕ್ಕೂ ಮೊದಲು ನಿಗದಿಯಾದಂತೆ ಚಂದ್ರು ಶಿವರಾಜ್ ಕುಮಾರ್ ಅವರೊಂದಿಗೆ ಸಿನೆಮಾವೊಂದನ್ನು ಮಾಡಬೇಕಿತ್ತು, ಆದರೆ ಆ ಸಿನೆಮಾದ ಸ್ಕ್ರಿಪ್ಟ್ ಬದಲಾದದ್ದರಿಂದ, ತಮ್ಮ ಆದ್ಯತೆಯನ್ನು ಈಗ 'ಕನಕ'ನೆಡೆಗೆ ತಿರುಗಿಸಿದ್ದಾರಂತೆ. "ಇದು ನನ್ನ ಕನಸಿನ ಸ್ಕ್ರಿಪ್ಟ್. ಇದು ಮೂರು ವರ್ಷಗಳ ಮೊದಲೇ ತಯಾರಾಗಿತ್ತು. ಕಳೆದ ಆರು ತಿಂಗಳಲ್ಲಿ ಸ್ಕ್ರೀನ್ ಪ್ಲೆ ಮತ್ತು ಸಂಭಾಷಣೆ ಕೆಲಸ ಮುಗಿದಿದೆ" ಎನ್ನುತ್ತಾರೆ ಚಂದ್ರು. 
'ಮಾಸ್ತಿ ಗುಡಿ' ಸಿನೆಮಾ ಚಿತ್ರೀಕರಣದ ವೇಳೆ ಇಬ್ಬರು ನಟರು ಅಚಾತುರ್ಯದಲ್ಲಿ ಮೃತಪಟ್ಟ ವಿವಾದ ಬಗೆಹರಿಯುವವರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ಸಿನೆಮಾದಲ್ಲಿ ನಟಿಸದಂತೆ ದುನಿಯಾ ವಿಜಯ್ ಅವರಿಗೆ ಸೂಚಿಸರುವ ಹಿನ್ನಲೆಯಲ್ಲಿ, ಆವರಿಗಾಗಿ ಕಾಯಲು ಚಂದ್ರು ಸಿದ್ಧರಾಗಿದ್ದಾರೆ. "ವಿಷಯವನ್ನು ತಿಂಗಳುಗಳ ಮೊದಲೇ ವಿಜಯ್ ಜೊತೆಗೆ ಚರ್ಚಿಸಿದ್ದೇನೆ ಮತ್ತು ಕಾಯಲು ಸಿದ್ಧನಿದ್ದೇನೆ" ಎನ್ನುತ್ತಾರೆ.
'ಕನಕ' ಸಿನೆಮಾ ಇಬ್ಬರು ನುತ ಖಳ ನಾಯಕರನ್ನು ಕೂಡ ಪರಿಚಯಿಸಲಿದೆಯಂತೆ. ಆ ಇಬ್ಬರು ತುಮಕೂರು ದರ್ಶನ ಮತ್ತು ವೈದ್ಯವೃತ್ತಿಯಿಂದ ನಟನೆಗೆ ಇಳಿದಿರುವ ನಿರಂಜನ್. 
ಸತ್ಯ ಹೆಗಡೆ ಛಾಯಾಗ್ರಹಣ ಮಾಡಲಿದ್ದು, ಹೊಸ ಸಂಗೀತ ನಿರ್ದೇಶಕ ನವೀನ್ ಸಜ್ಜು ಸಂಗೀತ ಒದಗಿಸಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT