'ವಿಐಪಿ ೨' ಚಿತ್ರಕ್ಕೆ ಕ್ಲಾಪ್ ಮಾಡಿದ ರಜನಿಕಾಂತ್; ಚಿತ್ರಕೃಪೆ: ಧನುಷ್ ಟ್ವಿಟ್ಟರ್ ಖಾತೆ 
ಸಿನಿಮಾ ಸುದ್ದಿ

ಧನುಷ್ 'ವಿಐಪಿ ೨'ಗೆ ಹರಸಿದ ರಜನಿಕಾಂತ್; ಪುತ್ರಿ ಸೌಂದರ್ಯ ನಿರ್ದೇಶನ

ತಮಿಳು ಚಿತ್ರರಂಗದ ಮೆಗಾಸ್ಟಾರ್ ರಜನಿಕಾಂತ್ ತಮ್ಮ ಅಳಿಯ ಧನುಷ್ ಅವರ ಮುಂದಿನ ತಮಿಳು ಚಿತ್ರ 'ವಿಐಪಿ ೨' ಗೆ ಆಶೀರ್ವದಿಸಿದ್ದಾರೆ. ಗುರುವಾರ ಈ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಿದೆ.

ಚೆನ್ನೈ: ತಮಿಳು ಚಿತ್ರರಂಗದ ಮೆಗಾಸ್ಟಾರ್ ರಜನಿಕಾಂತ್ ತಮ್ಮ ಅಳಿಯ ಧನುಷ್ ಅವರ ಮುಂದಿನ ತಮಿಳು ಚಿತ್ರ 'ವಿಐಪಿ ೨' ಗೆ ಆಶೀರ್ವದಿಸಿದ್ದಾರೆ. ಗುರುವಾರ ಈ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಿದೆ. 
ರಜನಿಕಾಂತ್ ಪುತ್ರಿ ಐಶ್ವರ್ಯ ಅವರನ್ನು ವರಿಸಿರುವ ಧನುಷ್ ಅವರ 'ವಿಐಪಿ ೨' ಚಿತ್ರವನ್ನು ಮೆಗಾಸ್ಟಾರ್ ಅವರ ಮತ್ತೊಬ್ಬ ಪುತ್ರಿ ಸೌಂದರ್ಯ ನಿರ್ದೇಶಿಸುತ್ತಿದ್ದಾರೆ. 
ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾದ ರಜನಿಕಾಂತ್ ಚಿತ್ರತಂಡಕ್ಕೆ ಆಶೀರ್ವದಿಸಿದ್ದಾರೆ. 
ಇದರ ಬಗ್ಗೆ ಟ್ವೀಟ್ ಮಾಡಿರುವ ಧನುಷ್ "ನಾನು ಇದಕ್ಕಿಂತಲೂ ಹೆಚ್ಚಿನದೇನು ಕೇಳಲು ಸಾಧ್ಯ? ಥಲೈವಾ ಧನ್ಯವಾದಗಳು. ನಿಮ್ಮ ಆಶೀರ್ವಾದದೊಂದಿಗೆ 'ವಿಐಪಿ ೨' ಇಂದಿನಿಂದ ಪ್ರಾರಂಭವಾಗಿದೆ. ರಘುವರನ್ ಹಿಂದಿರುಗಿದ್ದಾನೆ" ಎಂದು ಬರೆದಿದ್ದಾರೆ. 
ರಜನಿಕಾಂತ್ ಸಿನೆಮಾಗೆ ಕ್ಲಾಪ್ ಮಾಡಿರುವ ಚಿತ್ರವನ್ನು ಧನುಷ್ ಟ್ವೀಟ್ ಮಾಡಿದ್ದಾರೆ. 
"'ವಿಐಪಿ ೨' ತಂಡಕ್ಕೆ ಶುಭಾಶಯ ಕೋರುತ್ತಿದ್ದೇನೆ. ದೇವರು ಒಳ್ಳೆಯದನ್ನು ಮಾಡಲಿ" ಎಂದು ರಜನಿ ಟ್ವೀಟ್ ಮಾಡಿದ್ದಾರೆ. 
ಧನುಷ್ ಎದುರು ಈ ಸಿನೆಮಾದಲ್ಲಿ ನಟಿಸಲಿರುವ ಅಮಲಾ ಪಾಲ್ ಕೂಡ ಟ್ವೀಟ್ ಮಾಡಿದ್ದು "ಅದ್ಭುತ ಸಂತಸದ ದಿನ! ಥಲೈವಾ ಆಶೀರ್ವಾದದೊಂದಿಗೆ ಮತ್ತೆ 'ವಿಐಪಿ' ಪ್ರಯಾಣ ಪ್ರಾರಂಭವಾಗುತ್ತಿದೆ. ಇದಕ್ಕಿಂತ ಹೆಚ್ಚಿನದು ಕೇಳಲಿಕ್ಕೆ ಸಾಧ್ಯವಿಲ್ಲ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಬಸ್‌ಗೆ ಬೆಂಕಿ; ಚಾಲಕ-ಕ್ಲೀನರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್, Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!