ಮಜಾ ಟಾಕೀಸ್ ರೂವಾರಿ ಸೃಜನ್ ಲೋಕೇಶ್ 
ಸಿನಿಮಾ ಸುದ್ದಿ

'ಮಜಾ ಟಾಕೀಸ್' ೨೦೦; ಅಮ್ಮನಿಗೆ ಧನ್ಯವಾದ ಹೇಳಿದ ಸೃಜನ್

ಕಿರುತೆರಿಯಲ್ಲಿ ಸೃಜನ್ ಲೋಕೇಶ್ ನಡೆಸಿಕೊಡುವ ಹಾಸ್ಯ ಕಾರ್ಯಕ್ರಮ ಮಜಾ ಟಾಕೀಸ್ ಮತ್ತೊಂದು ಮೈಲಿಗಲ್ಲು ತಲುಪಿದೆ. ಗುರುವಾರ ಈ ಕಾರ್ಯಕ್ರಮದ ೨೦೦ ನೇ ಅಧ್ಯಾಯವನ್ನು ಚಿತ್ರೀಕರಿಸಲಾಗಿದ್ದು,

ಬೆಂಗಳೂರು: ಕಿರುತೆರಿಯಲ್ಲಿ ಸೃಜನ್ ಲೋಕೇಶ್ ನಡೆಸಿಕೊಡುವ ಹಾಸ್ಯ ಕಾರ್ಯಕ್ರಮ ಮಜಾ ಟಾಕೀಸ್ ಮತ್ತೊಂದು ಮೈಲಿಗಲ್ಲು ತಲುಪಿದೆ. ಗುರುವಾರ ಈ ಕಾರ್ಯಕ್ರಮದ ೨೦೦ ನೇ ಅಧ್ಯಾಯವನ್ನು ಚಿತ್ರೀಕರಿಸಲಾಗಿದ್ದು, ಇದರ ಸಂಭ್ರಮಾಚರಣೆಗಳನ್ನು ಕೂಡ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.  
ಈ ಸಂಭ್ರಮಾಚರಣೆಯ ಅಂಗವಾಗಿ ಜನವರಿ ೮ ರಂದು ಜಯನಗರದ ಶಾಲಿನಿ ಮೈದಾನದಲ್ಲಿ ಮೆಗಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಡೀ ಕನ್ನಡ ಚಿತ್ರರಂಗವನ್ನು ಇದಕ್ಕಾಗಿ ಸೃಜನ್ ಆಹ್ವಾನಿಸಿದ್ದಾರಂತೆ. ಇದರ ಪ್ರಸಾರ ಆ ವಾರಾಂತ್ಯದಲ್ಲಿ ನಡೆಯಲಿದೆ. 
"ಈ ಕಾರ್ಯಕ್ರಮವನ್ನು ನೆನಪಿನಲ್ಲುಳಿಯುವಂತೆ ಆಯೋಜಿಸುತ್ತಿದ್ದೇನೆ. ಇದು ನನಗೆ ಮತ್ತು ನನ್ನ ತಂಡಕ್ಕೆ ಮರೆಯಲಾಗದ ಪಯಣ. ೨೦೦ ಪ್ರಧರ್ಶನಗಳು ಎಂದರೆ ತಮಾಷೆಯ ಮಾತಲ್ಲ. ೧೦೦೦ ಅಧ್ಯಾಯಗಳು ಓಡುವ ಧಾರಾವಾಹಿಗಳಿಗೆ ಹೋಲಿಸಿದರೆ ಇದು ಸಣ್ಣ ಸಾಧನೆ ಎಂದು ಕೆಲವು ತಿಳಿದುಕೊಳ್ಳಬಹುದು, ಆದರೆ ರಿಯಾಲಿಟಿ ಕಾರ್ಯಕ್ರಮಗಳ ರೀತಿಯೇ ಬೇರೆ. ೨ ವರ್ಷಗಳಿಂದ ಸಂವಾದದ ರೀತಿಯಲ್ಲಿ ವಾರಾಂತ್ಯದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾ, ಉತ್ತಮ ಟಿ ಆರ್ ಪಿ ಕೂಡ ನಿಭಾಯುತ್ತಾ ಬಂದಿರುವುದು ಅತಿ ದೊಡ್ಡ ಸವಾಲು" ಎನ್ನುವ ಸೃಜನ್ "ಇದು ಒಬ್ಬನ ಕಾರ್ಯಕ್ರಮ ಅಲ್ಲ, ಬದಲಾಗಿ ಇಡೀ ತಂಡಕ್ಕೆ ಆ ಶ್ರೇಯಸ್ಸು ಸಲ್ಲಬೇಕು" ಎನ್ನುತ್ತಾರೆ. 
ಮಜಾ ಟಾಕೀಸ್ ಜನಪ್ರಿಯತೆ ಎಷ್ಟಿದೆಯಂದರೆ, ಒಂದು ತಿಂಗಳ ಹಿಂದೆ ಲಂಡನ್ ಕನ್ನಡಿಗರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸೃಜನ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತಂತೆ. ಜನರನ್ನು ನಗಿಸುವ ನಟ ತನ್ನ ಭಾವನೆಗಳನ್ನು ಮರೆಮಾಚುವುದಿಲ್ಲ "ಈ ಕಾರ್ಯಕ್ರಮದ ಜನಪ್ರಿಯತೆಯ ಶ್ರೇಯಸ್ಸು ಮೊದಲು ನನ್ನ ತಾಯಿ ಗಿರಿಜಾ ಲೋಕೇಶ್ ಅವರಿಗೆ ಸಲ್ಲಬೇಕು" ಎನ್ನುವ ಸೃಜನ್ ಈ ಕಾರ್ಯಕ್ರಮ ನಡೆಸಿಕೊಡುವಾಗ ಎದುರಾದ ತೊಂದರೆಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ, ಆದರೆ ಅವರ ಜೊತೆಗೆ ತಾಯಿ ಜೊತೆಗೆ ಕಂಬದಂತೆ ನಿಂತು ಈ ಸಾಮ್ರಾಜ್ಯ ಕಟ್ಟಲು ಸಹಕರಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ. "ಅಮ್ಮ ನನಗೆ ಮಜಾ ಟಾಕೀಸ್ ನೀಡಿದ್ದಕ್ಕೆ ಧನ್ಯವಾದಗಳು" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT