ಬೆಂಗಳೂರು: ಕೆ ಎಂ ಚೈತನ್ಯ ನಿರ್ದೇಶನದ ಇಂಡೋ-ಬ್ರಿಟಿಷ್ ಸಿನೆಮಾ 'ಆಕೆ'ಯಲ್ಲಿ ಹಾಲಿವುಡ್ ನ ಹಲವು ತಂತ್ರಜ್ಞರು ಮತ್ತು ನಟರು ತೊಡಗಿಸಿಕೊಂಡಿರುವುದು ವಿಶೇಷ.
ಐಶ್ವರ್ಯ ರೈ ಅವರ 'ಪ್ರವೊಕ್ಡ್' ಸಿನೆಮಾದ ಸ್ಕ್ರೀನ್ ಪ್ಲೆ ಬರೆದ ಕಾರ್ಲ್ ಆಸ್ಟಿನ್ ಈ ಸಿನೆಮಾಗೂ ಸ್ಕ್ರೀನ್ ಪ್ಲೆ ಬರೆದಿದ್ದಾರೆ. ಇದಕ್ಕೆ ಚೈತನ್ಯ ಕೈಜೋಡಿಸಿದ್ದಾರೆ. ಮಹಿಳಾ ಕೇಂದ್ರಿತ 'ಆಕೆ' ಚಿತ್ರದಲ್ಲಿ ಮಿಸ್ಟರಿ, ಸಸ್ಪೆನ್ಸ್ ಮತ್ತು ಹಾರರ್ ಕೂಡ ಇದೆಯಂತೆ. 'ಹ್ಯಾರಿ ಪಾಟರ್' ಸಿನೆಮಾದಲ್ಲಿ ಕೆಲಸ ಮಾಡಿರುವ ಹಾವ್ಸ್ ಈ ಸಿನೆಮಾದ ಛಾಯಾಗ್ರಾಹಕ. 'ಗೇಮ್ ಆಫ್ ಥ್ರೋನ್ಸ್' ಸಿನೆಮಾದಲ್ಲಿ ಕೆಲಸ ಮಾಡಿರುವ ಪಾಲ್ ಬರ್ನ್ಸ್ ಈ ಸಿನೆಮಾದ ನಿರ್ಮಾಣ ವಿನ್ಯಾಸಕಾರ.
"ಚಿರಂಜೀವಿ ಸರ್ಜಾ ಮಾತು ಶರ್ಮಿಳಾ ಮಾಂಡ್ರೆ ನಟಿಸಿರುವ ಈ ಸಿನೆಮಾದಲ್ಲಿ ಇಲ್ಲಿನ ಇಬ್ಬರು ತಂತ್ರಜ್ಞರಷ್ಟೇ ಇದ್ದು, ಇನ್ನುಳಿದವರೆಲ್ಲ ಹಾಲಿವುಡ್ ಸಿನೆಮಾಗಳಲ್ಲಿ ಕೆಲಸ ಮಾಡಿರುವವರು" ಎಂದು ತಿಳಿಸುತ್ತಾರೆ ನಿರ್ದೇಶಕ ಚೈತನ್ಯ.
ನಾನು ಅಪ್ಪಟ ಕನ್ನಡಿಗ. ನಟ ಚಿರಂಜೀವಿ, ಕಾರ್ಯಕಾರಿ ನಿರ್ಮಾಪಕ ಯೋಗೀಶ್ ಎಲ್ಲರು ಕನ್ನಡ ಸಂಸ್ಕೃತಿಯ ಭಾಗವಾಗಿರುವವರೇ. ಅವರ ಸೃಜನಶೀಲತೆಗಾಗಿ ಬ್ರಿಟನ್ನಿನ ತಂತ್ರಜ್ಞರನ್ನು ಒಳಗೊಂಡಿದ್ದೇವೆ ಮತ್ತು ಅವರ ಶಿಸ್ತಿಗಾಗಿ ತಂಡವನ್ನು. ಇವೆಲ್ಲವೂ ಕನ್ನಡದ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಲು ಸಹಕರಿಸಿವೆ" ಎನ್ನುವ ನಿರ್ದೇಶಕ ಈ ಸಹಯೋಗವನ್ನು "ಮರ ಮಳೆ ಮತ್ತು ಗಾಳಿಯನ್ನು ಸ್ವಾಗತಿಸುತ್ತದೆ ಆದರೆ ಭೂಮಿಯ ಆಳಕ್ಕೆ ಬೇರು ಬಿಟ್ಟಿರುತ್ತದೆ" ಎಂದು ವಿವರಿಸುತ್ತಾರೆ.
ಈ ಸಿನೆಮಾದ ಚಿತ್ರೀಕರಣ ಲಂಡನ್ ಮತ್ತು ಬೆಂಗಳೂರಿನಲ್ಲಿ ೪೪ ದಿನಗಳ ಕಾಲ ನಡೆದಿದೆಯಂತೆ. ಇದಕ್ಕೆ ರೋಹಿತ್ ಪದಕಿ ಸಂಭಾಷಣೆ ಬರೆದಿದ್ದಾರೆ. ಒಂದಿಬ್ಬರು ಇಂಗ್ಲಿಷ್ ನಟರನ್ನು ಕೂಡ ಒಳಗೊಂಡಿದ್ದು, 'ಆ ದಿನಗಳು' ಸಿನೆಮಾದಲ್ಲಿ ನಟಿಸಿದ್ದ ಬಾಲಾಜಿ ಮನೋಹರ್ ಮತ್ತು ಅಮಾನ್ ಕೂಡ ನಟಿಸಿದ್ದಾರೆ.
ತಮ್ಮ ಹಿಂದಿನ ಸಿನೆಮಾ 'ಆಟಗಾರ'ನ ಯಶಸ್ಸು, 'ಆಕೆ' ಸಿನೆಮಾದೆಡೆಗೆ ಚೈತನ್ಯ ಅವರನ್ನು ಕೊಂಡೊಯ್ಯಿತಂತೆ. "'ಆ ದಿನಗಳು' ದಿನದಿಂದಲೂ ನಾನು ಇಂಗ್ಲೆಂಡಿನ ಮೂಲದ ನಿರ್ಮಾಪಕ ಸುನಂದಾ ಮುರಳಿ ಮನೋಹರ್ ಅವರನ್ನು ಬಲ್ಲೆ. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. ನಂತರ ಅವರು ಯೋಗೀಶ್ ಅವರನ್ನು ಸಂಪರ್ಕಿಸಿದರು, ಆಗ ನನ್ನ ಪ್ರಸ್ತಾಪ ಬಂದು ನಾನು ನಿರ್ದೇಶಕನಾದೆ ಮತ್ತು ಯೋಗೀಶ್ ಕಾರ್ಯಕಾರಿ ನಿರ್ಮಾಪಕರಾದರು" ಎನ್ನುತ್ತಾರೆ.