ಬೆಂಗಳೂರು: ರಮೇಶ್ ಅರವಿಂದ್ ಅವರ 100ನೇ ಚಿತ್ರವಾದ ಪುಷ್ಪಕ ವಿಮಾನದಲ್ಲಿ ನಟಿ ರಚಿತಾ ರಾಮ್ ವಕೀಲೆ ಪಾತ್ರದಲ್ಲಿ ಅಭಿನಯಸಿದ್ದಾರೆ.
ಇದೊಂದು ತಂದೆ ಮಗಳ ಬಾಂಧವ್ಯದ ಚಿತ್ರವಾಗಿದ್ದು, ತಂದೆಗೆ ನ್ಯಾಯ ದೊರಕಿಸಿಕೊಡಲು ರಚಿತಾ ರಾಮ್ ವಕೀಲೆ ಮಗಳಾಗಿ ಕಾಣಿಸಿಕೊಂಡಿದ್ದಾರೆ.
ಕಪ್ಪು ಕೋಟು ಧರಿಸಿ ನ್ಯಾಯಕ್ಕಾಗಿ ಹೋರಾಟ ಮಾಡುವ ಮಗಳ ಪಾತ್ರ ಎಂದ ಕೂಡಲೇ ನಾನು ಒಪ್ಪಿ ಕೊಂಡೆ, ನನ್ನ ಪಾತ್ರದಲ್ಲಿ ನಾನು ಪೂರ್ತಿ ತೊಡಗಿಸಿಕೊಂಡೇ ಎಂದು ರಚಿತಾ ರಾಮ್ ಹೇಳುತ್ತಾರೆ.
ಪುಷ್ಪಕ ವಿಮಾನದಲ್ಲಿ ರಚಿತಾ ರಾಮ ಅವರದ್ದು ಚಿಕ್ಕ ಪಾತ್ರ, ಆದರೆ ಅವರೇ ಹೇಳುವಂತೆ ತಮ್ಮ ಪಾತ್ರ ಕಥೆಯಲ್ಲಿ ಪರಿಣಾಮಕಾರಿಯಾಗಿದೆ, ನಾನು ಈ ಹಿಂದೆ ಅಭಿನಯಿಸಿರುವ ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿದೆ. ಈ ಚಿತ್ರದ ಪಾತ್ರ ನನ್ನ ಮನಸ್ಸಿನ ಮೇಲೆ ತುಂಬಾ ಗಾಢ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
ರಚಿತಾ ಒಳ್ಳೆಯ ಕಲಾವಿದೆ ಎಂದು ಸಿನಿಮಾ ವೀಕ್ಷಿಸಿದ ಮೇಲೆ ಜನ ಹೇಳುತ್ತಾರೆ ಎಂದು ರಚಿತಾ ತಿಳಿಸಿದ್ದಾರೆ. ನಾನು ಪೊಲೀಸ್ ಪಡೆ ಇಲ್ಲವೇ ವಕೀಲೆಯಾಗಬೇಕೆಂಬುದು ನನ್ನ ಪೋಷಕರ ಬಯಕೆಯಾಗಿತ್ತು. ಆದರೆ ದಿನಕಳೆದಂತೆ ಕೆಲ ಸಮಸ್ಯೆಗಳಿಗಾಗಿ ನಮ್ಮ ಕುಟುಂಬ ವಕೀಲರನ್ನು ಭೇಟಿಯಾಗುವ ಸಂದರ್ಭ ಬಂತು, ದುರಾದೃಷ್ಟವಶಾತ್ ಆ ವಕೀಲ ನಮ್ಮ ಬಳಿ ಹಣೆ ತೆಗೆದು ಕೊಂಡು ನಮಗೆ ದ್ರೋಹ ಮಾಡಿದ. ಅದಾದ ನಂತರ ನಮ್ಮ ತಂದೆ ಕಪ್ಪು ಕೋಟು ಧರಿಸುವ ವಕೀಲರನ್ನು ದ್ವೇಷಿಸಲು ಆರಂಭಿಸಿದರು ಎಂದು ರಚಿತಾ ತಿಳಿಸಿದ್ದಾರೆ.
ಅಂದಿನಿಂದ ವಕೀಲ ವೃತ್ತಿಯ ಬಗ್ಗೆ ಇದ್ದ ನಂಬಿಕೆ ಕಳೆದು ಹೋಯಿತು. ಪುಷ್ಪಕ ವಿಮಾನದಲ್ಲಿ ಈ ಪಾತ್ರದ ಬಗ್ಗೆ ಕೇಳಿದಾಗ ನನಗೆ ತುಂಬಾ ಕುತೂಹಲವಾಗಿತ್ತು, ಆ ಪಾತ್ರವನ್ನು ನಾನು ನನ್ನ ಕಣ್ಮುಂದೆ ಕಲ್ಪಿಸಿಕೊಳ್ಳುತ್ತಿದೆ ಎನ್ನುತ್ತಾರೆ ರಚಿತಾ.