ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

'ಪುಷ್ಪಕ ವಿಮಾನ'ಕ್ಕೆ ಯು-ಪ್ರಮಾಣ ಪತ್ರ; ಬಿಡುಗಡೆಗೆ ದಿನಗಣನೆ

ರಮೇಶ್ ಅರವಿಂದ್ ನಟನೆಯ ನೂರನೇ ಚಲನಚಿತ್ರ 'ಪುಷ್ಪಕ ವಿಮಾನ' ಸಿನೆಮಾಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಎಸ್ ರವೀಂದ್ರನಾಥ್ ಅವರ ಚೊಚ್ಚಲ ನಿರ್ದೇಶನದ ಈ ಸಿನೆಮಾಗೆ ಸೆನ್ಸಾರ್ ಮಂಡಳಿ

ಬೆಂಗಳೂರು: ರಮೇಶ್ ಅರವಿಂದ್ ನಟನೆಯ ನೂರನೇ ಚಲನಚಿತ್ರ 'ಪುಷ್ಪಕ ವಿಮಾನ' ಸಿನೆಮಾಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಎಸ್ ರವೀಂದ್ರನಾಥ್ ಅವರ ಚೊಚ್ಚಲ ನಿರ್ದೇಶನದ ಈ ಸಿನೆಮಾಗೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಗಳಿಲ್ಲದೆ 'ಯು-ಪ್ರಮಾಣಪತ್ರ' ನೀಡಿದೆ. 
"ಸೆನ್ಸಾರ್ ಮಂಡಳಿ ಸದಸ್ಯರು ಸಿನೆಮಾ ನೋಡಿ, ಬಹಳ ಮೆಚ್ಚಿದರು. ಮತ್ತು ತಂಡದ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಹೊಸ ವರ್ಷಕ್ಕೆ ನಮ್ಮ ಸಿನೆಮಾ ಬಿಡುಗಡೆಯಾಗುತ್ತಿರುವುದನ್ನು ಘೋಷಿಸಲು ನಮಗೆ ಸಂತಸವಿದೆ" ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್. 
ತೂಗುದೀಪ ಡಿಸ್ಟ್ರಿಬ್ಯುಟರ್ಸ್ ಈ ಸಿನೆಮಾವನ್ನು ವಿತರಿಸುತ್ತಿದ್ದು, ಸುಮಾರು ೧೨೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ. ಜನವರಿ ೬ಕ್ಕೆ 'ಪುಷ್ಪಕ ವಿಮಾನ' ಬಿಡುಗಡೆಯಾಗಲಿದೆ. 
ತಂದೆ ಮಗಳ ಭಾವನಾತ್ಮಕ ಸಂಬಂಧದ ಕಥಾಹಂದರ ಹೊಂದಿರುವ ಈ ಸಿನೆಮಾದಲ್ಲಿ ಬಾಲನಟಿ ಯುವಿನಾ ಪಾರ್ಥವಿ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸದ್ದು, ಜೂಹಿ ಚಾವ್ಲಾ ಅತಿಥಿ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 
ಚರಣ್ ರಾಜ್ ಅವರ ಸಂಗೀತ ಈಗಾಗಲೇ ಜನಪ್ರಿಯವಾಗಿದ್ದು, ಭುವನ್ ಗೌಡ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ