ನಟಿ ಐಂದ್ರಿತಾ ರೇ 
ಸಿನಿಮಾ ಸುದ್ದಿ

ಮುಂಗಾರು ಮಳೆಯಲ್ಲಿ ಮಿಂದಲು ಬಂದ ಐಂದ್ರಿತಾ ರೇ

ಗಣೇಶ್ ನಾಯಕ ನಟನಾಗಿರುವ, ಶಶಾಂಕ್ ನಿರ್ದೇಶನದ ಮುಂಗಾರು ಮಳೆ-೨ರ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೇ ಸಂಪೂರ್ಣಗೊಳ್ಳಲಿದೆ.

ಬೆಂಗಳೂರು: ಗಣೇಶ್ ನಾಯಕ ನಟನಾಗಿರುವ, ಶಶಾಂಕ್ ನಿರ್ದೇಶನದ ಮುಂಗಾರು ಮಳೆ-೨ರ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೇ ಸಂಪೂರ್ಣಗೊಳ್ಳಲಿದೆ. ನೇಹಾ ಶೆಟ್ಟಿ ಎಂಬ ಚೆಲುವೆ ಈ ಚಿತ್ರದ ಮೂಲಕ ನಾಯಕನಟಿಯಾಗಿ ಪಾದಾರ್ಪಣೆ ಮಾಡುತ್ತಿರುವುದು ಈಗ ಹಳೆಯ ಸುದ್ದಿ. ಆದರೆ ಇತ್ತೀಚಿನ ಸುದ್ದಿಯ ಪ್ರಕಾರ ಸಿನೆಮಾಗೆ ಎರಡನೆ ನಾಯಕ ನಟಿಯಾಗಿ ಐಂದ್ರಿತಾ ರೇ ಸೇರ್ಪಡೆಯಾಗಿದ್ದಾರೆ.

ಸುಮಾರು ತಿಂಗಳುಗಳಿಂದ ಯಾವುದೇ ಅವಕಾಶಗಳಿಲ್ಲದೇ ಸ್ಯಾಂಡಲ್ವುಡ್ ನಿಂದ ಕಾಣೆಯಾಗಿದ್ದ ಈ ನಟಿಗೆ ಈ ಸಿನೆಮಾ ಮತ್ತೆ ಕೈಹಿಡಿಯಲಿದೆಯೇ ಎಂಬ ಗುಸು ಗುಸು ಗಾಂಧಿನಗರದಲ್ಲಿದೆ. ಕೊನೆಯ ಹಂತದಲ್ಲಿ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದರು ಐಂದ್ರಿತಾಗೆ ಪ್ರಮುಖ ಪಾತ್ರವಿದೆಯಂತೆ.

ತಾವೇ ಚಿತ್ರಕಥೆ ಬರೆದು ಶಶಾಂಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶಕ, ಶೇಖರ್ ಚಂದ್ರು ಸಿನೆಮ್ಯಾಟೋಗ್ರಾಫರ್. ರವಿಚಂದ್ರನ್ ಈ ಸಿನೆಮಾದಲ್ಲಿ ಗಣೇಶ್ ಅವರ ತಂದೆಯ ಪಾತ್ರ ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ