ಮುಂಬೈ: ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಅವರನ್ನು ಮತ್ತೆ ಭೇಟಿ ಮಾಡುವ ಅದೃಷ್ಟ ಒದಗಿತು ಎಂದು ತಿಳಿಸಿರುವ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್, ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
೩೯ ವರ್ಷದ ನಟಿ ಒಬಾಮಾ ಅವರೊಂದಿಗೆ ತೆಗೆದುಕೊಂಡಿರುವ ಸೆಲ್ಫಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
"ಆಕರ್ಷಕ ವ್ಯಕ್ತಿತ್ವದ ಅಧ್ಯಕ್ಷ ಒಬಾಮಾ ಅವರನ್ನು ಮತ್ತೆ ಭೇಟಿ ಮಾಡುವ ಅದೃಷ್ಟ ಒದಗಿ ಬಂತು" ಎಂದು ಬುಧವಾರ ಟ್ವೀಟ್ ಮಾಡಿರುವ ಮಲ್ಲಿಕಾ ಇದು "ಹೆಮ್ಮೆಯ ಕ್ಷಣ" ಎಂದು ಹೇಳಿಕೊಂಡಿದ್ದಾರೆ.