ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾಗೆ ಮತ್ತೊಂದು ಮದುವೆಗೆ ಸಿದ್ಧತೆ ನಡೆಯುತ್ತಿದೆ.
ಮೆಗಾಸ್ಟಾರ್ ನಿವಾಸದಲ್ಲಿ ಮದುವೆಗೆ ಸಂಬಂಧಿಸಿದ ಶಾಸ್ತ್ರ ಕಾರ್ಯಕ್ರಮಗಳು ನಡೆಯುತ್ತಿವೆ. ಇತ್ತೀಚೆಗೆ ಭುಜದ ಶಸ್ತ್ರಚಿಕಿತ್ಸೆಗೊಳಗಾಗಿರುವ ಚಿರು ಕೈಗೆ ಪಟ್ಟಿ ಬಿಗಿದಿರುವ ಸ್ಥಿತಿಯಲ್ಲೇ ಪತ್ನಿಯೊಂದಿಗೆ ಚಿರಂಜೀವಿ ಹಲವು ಶಾಸ್ತ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಕೂಡ ಇತ್ತೀಚೆಗೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪತ್ನಿಯೊಂದಿಗೆ ಪಾಲ್ಗೊಂಡಿದ್ದರು. ಶ್ರೀಜಾ ವಿವಾಹವನ್ನು ಸರಳವಾಗಿ ನಡೆಸಲು ಚಿರಂಜೀವಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಚಿರಂಜೀವಿ ಪುತ್ರಿ ಶ್ರೀಜಾ ಚಿತ್ತೂರು ಮೂಲದ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರನ್ನು ವರಿಸುತ್ತಿದ್ದಾರೆ. 2007ರಲ್ಲಿ ಕುಟುಂಬದ ವಿರೋಧವನ್ನೂ ಲೆಕ್ಕಿಸದೇ ಶ್ರೀಜಾ ಪ್ರೀತಿಸಿದ ಯುವಕ ಶಿರೀಶ್ ಭಾರದ್ವಾಜ್ ಎನ್ನುವವರನ್ನು ಮದುವೆಯಾಗಿದ್ದಳು.
ಮದುವೆಯಾದ ಮೂರು ನಾಲ್ಕು ವರ್ಷಗಳಲ್ಲಿ ಒಂದು ಮಗುವಿಗೆ ಶ್ರೀಜಾ ಜನ್ಮ ನೀಡಿದ್ದರು. ನಂತರ ಶಿರೀಶ್-ಶ್ರೀಜಾ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ನಂತರ 2011ರಲ್ಲಿ ಶ್ರೀಜಾ ಶಿರೀಶ್‌ನಿಂದ ಡೈವೋರ್ಸ್ ಪಡೆದು ಹೈದರಾಬಾದ್ ನಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದಳು.