ದರ್ಶನ್ 
ಸಿನಿಮಾ ಸುದ್ದಿ

ಕಿಲ್ಲರ್ ಬಿಎಂಟಿಸಿ ಗೆ ಬಲಿಯಾದ ನಟ ದರ್ಶನ್ ಅಭಿಮಾನಿ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಮರಳುತ್ತಿದ್ದಾಗ ಬಿಎಂಟಿಸಿ ಬಸ್‌ ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ನಾಯಂಡಹಳ್ಳಿ ಮೇಲ್ಸುತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ದರ್ಶನ್ ಅಭಿಮಾನಿ...

ಬೆಂಗಳೂರು:  ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ  ಹುಟ್ಟು ಹಬ್ಬದ ಶುಭಾಶಯ ಕೋರಿ ಮರಳುತ್ತಿದ್ದಾಗ ಬಿಎಂಟಿಸಿ ಬಸ್‌ ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ನಾಯಂಡಹಳ್ಳಿ ಮೇಲ್ಸುತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ದರ್ಶನ್  ಅಭಿಮಾನಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಥಣಿಸಂದ್ರದ ನಿವಾಸಿ ಮಧು ಕುಮಾರ್‌  ಮೃತ ದುರ್ದೈವಿ. ಗಾಯಗೊಂಡಿರುವ ಮತ್ತೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಮುಂದಿನ ಕೆಎಸ್‌ಆರ್‌ಟಿಸಿ ಬಸ್‌ ಹಿಂದಿಕ್ಕಲು ಬಿಎಂಟಿಸಿ ಬಸ್‌ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ತನ್ನ ನೆಚ್ಚಿನ ನಟನ ಜನ್ಮ ದಿನದ ಶುಭ ಕೋರಲು ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್‌ ಮನೆಗೆ ಮುಂಜಾನೆಯೇ ಗೆಳೆಯ ಸುಧಾಂಶು ಜತೆ ತೆರಳಿದ್ದ ಮಧುಕುಮಾರ್‌, ಬಳಿಕ ನಟನನ್ನು ಕಂಡು ಬೆಳಗ್ಗೆ 10.40ರಲ್ಲಿ ಮನೆಗೆ ಮರಳುತ್ತಿದ್ದರು.

ಆ ವೇಳೆ ಸಿಟಿ ಮಾರ್ಕೆಟ್‌ನಿಂದ ಕೆಂಗೇರಿ ತೆರಳುತ್ತಿದ್ದ ಬಿಎಂಟಿಸಿ ಬಸ್‌ ಚಾಲಕ ನಾಗರಾಜ್‌, ನಾಯಡಂಹಳ್ಳಿ ಮೇಲ್ಸೇತುವೆಯಲ್ಲಿ ಮುಂದೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಹಿಂದಿಕ್ಕಲು ಆತ ಯತ್ನಿಸಿದ್ದಾನೆ. ಆಗ ಚಾಲಕನ ನಿಯಂತ್ರಣ ತಪ್ಪಿದ ಬಿಎಟಂಸಿ ಬಸ್‌, ರಸ್ತೆ ವಿಭಜಕ ದಾಟಿ ಹಠತ್ತಾಗಿ ಬಲ ಬದಿಗೆ ಬಂದಿದೆ. ಬಳಿಕ ರಾಜರಾಜೇಶ್ವರಿ ನಗರದಿಂದ ಥಣಿಸಂದ್ರ ಕಡೆಗೆ ತೆರಳುತ್ತಿದ್ದ ಮಧು ಬೈಕ್‌ಗೆ ಮುಖಾಮುಖಿಯಾಗಿ ಬಸ್‌ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಸುಧಾಂಶುಗೆ ಸಣ್ಣಪುಟ್ಟ ಗಾಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ