ನಿರ್ದೇಶಕ ಎ ಹರ್ಷ 
ಸಿನಿಮಾ ಸುದ್ದಿ

ಜಯಣ್ಣ ಕಂಬೈನ್ಸ್ ನಿಂದ 'ಕಪಿ ಚೇಷ್ಟೆ'?

'ಜೈ ಮಾರುತಿ ೮೦೦' ನಂತರ ನಿರ್ದೇಶಕ ಎ ಹರ್ಷ ಹಾಗು ನಿರ್ಮಾಪಕರಾದ ಜಯಣ್ಣ ಭೋಗೇಂದ್ರ 'ಕಪಿ ಚೇಷ್ಟೆ' ಸಿನೆಮಾಗಾಗಿ ಮತ್ತೆ ಒಗ್ಗೂಡಲಿದ್ದಾರೆ ಎನ್ನುತ್ತದೆ...

ಬೆಂಗಳೂರು: 'ಜೈ ಮಾರುತಿ ೮೦೦' ನಂತರ ನಿರ್ದೇಶಕ ಎ ಹರ್ಷ ಹಾಗು ನಿರ್ಮಾಪಕರಾದ ಜಯಣ್ಣ ಭೋಗೇಂದ್ರ 'ಕಪಿ ಚೇಷ್ಟೆ' ಸಿನೆಮಾಗಾಗಿ ಮತ್ತೆ ಒಗ್ಗೂಡಲಿದ್ದಾರೆ ಎನ್ನುತ್ತದೆ ಗಾಂಧಿನಗರದ ವದಂತಿ. ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಮೂಲಗಳ ಪ್ರಕಾರ ನಿರ್ಮಾಪಕ ಜಯಣ್ಣನವರಿಗೆ ಸ್ಕ್ರಿಪ್ಟ್ ಮತ್ತು ಹರ್ಷ ಅವರ ಕೆಲಸ ಮಾಡುವ ರೀತಿ ಇಷ್ಟವಾಗಿದ್ದು, ಜಯಣ್ಣ ಕಂಬೈನ್ಸ್ ಅಡಿ ಈ ಸಿನೆಮಾ ನಿರ್ಮಿಸಲು ಉತ್ಸುಕರಾಗಿದ್ದಾರಂತೆ.

ಈಗ ಹರ್ಷ 'ಜೈ ಮಾರುತಿ ೮೦೦' ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನಿರತವಾಗಿದ್ದು, ಅದರ ಬಿಡುಗಡೆಯ ನಂತರವೇ 'ಕಪಿ ಚೇಷ್ಟೆ' ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ. 'ಜೈ ಮಾರುತಿ ೮೦೦' ಸಿನೆಮಾದ ಮುಖ್ಯ ತಾರಾಗಣದಲ್ಲಿ ಶರಣ್, ಶೃತಿ ಹರಿಹರನ್ ಮತ್ತು ಶುಭಾ ಪೂಂಜಾ ನಟಿಸುತ್ತಿದ್ದು, ನೃತ್ಯ ನಿರ್ದೇಶಕನಾಗಿ ಹರ್ಷ ಅವರ ಬಹು ದಿನದ ಗೆಳೆಯ ಮೋಹನ್ ಕುಮಾರ್ ಪಾದಾರ್ಪಣೆ ಮಾಡಲಿದ್ದಾರೆ.

'ಜೈ ಮಾರುತಿ ೮೦೦' ಸಿನೆಮಾಗೆ ಚಾಲನೆ ನೀಡುವ ವೇಳೆಯಲ್ಲಿ ಶಿವರಾಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ 'ಕಪಿ ಚೇಷ್ಟೆ' ಸಿನೆಮಾದ ಬಗ್ಗೆ ಘೋಷಣೆ ಮಾಡಿದ್ದರು ಹರ್ಷ. ಆಗ ಈ ಸಿನೆಮಾದಲ್ಲಿ ಅತಿಥಿ ನಟನಾಗಿ ನಟಿಸಲು ಆಸಕ್ತಿ ತೋರಿದ್ದವರು ಶಿವಣ್ಣ. ಶಿವಣ್ಣನಿಗೆ ಯಾವ ಪಾತ್ರ ಸಿಕ್ಕಬಹುದು ಎಂಬುದು ಕೂಡ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

'ಕಪಿ ಚೇಷ್ಟೆ' ಪ್ರೇಮ ಸಂದೇಶವುಳ್ಳ ಆಕ್ಷನ್ ಸಿನೆಮಾವಂತೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT