ಬಾಲಿವುಡ್ ನಟಿ ರವೀನಾ ಟಂಡನ್ 
ಸಿನಿಮಾ ಸುದ್ದಿ

ಕಿರುತೆರೆಯಲ್ಲಿ ಹೆಚ್ಚು ಗಳಿಕೆಯ ನಟಿ ಬಾಲಿವುಡ್ ತಾರೆ ರವೀನಾ ಟಂಡನ್

ಕಿರುತೆರೆಯಲ್ಲಿ ಪ್ರಸಾರವಾಗಲಿರುವ ನೃತ್ಯ ರಿಯಾಲಿಟಿ ಕಾರ್ಯಕ್ರಮ 'ಶೈನ್ ಆಫ್ ಇಂಡಿಯಾ'ದ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳಲಿರುವ ನಟಿ ರವೀನಾ ಟಂಡನ್, ಒಂದು

ಮುಂಬೈ: ಕಿರುತೆರೆಯಲ್ಲಿ ಪ್ರಸಾರವಾಗಲಿರುವ ನೃತ್ಯ ರಿಯಾಲಿಟಿ ಕಾರ್ಯಕ್ರಮ 'ಶೈನ್ ಆಫ್ ಇಂಡಿಯಾ'ದ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳಲಿರುವ ನಟಿ ರವೀನಾ ಟಂಡನ್, ಒಂದು ದಿನ ಶೋಗಾಗಿ ೧.೨೫ ಕೋಟಿ ರೂ ರಾಯಧನ ಪಡೆಯಲಿದ್ದಾರಂತೆ. ಕಿರುತೆರೆಯಲ್ಲಿ ಅತಿ ಹೆಚ್ಚು ಗಳಿಸುವ ಬಾಲಿವುಡ್ ನಟಿಯಾಗಿ ರವೀನಾ ಹೊರಹೊಮ್ಮಿದ್ದಾರೆ.

ಈ ಹಿಂದೆ 'ಸಾಹಿಬ್ ಬೀವಿ ಔರ್ ಗುಲಾಂ', 'ಛೋಟೆ ಮಿಯಾ', 'ಕಾಮಿಡಿ ಕ ಮಹಾ ಮುಕಾಬಲ' ಮತ್ತು 'ಸಿಂಪ್ಲಿ ಬಾತಿ ವಿತ್ ರವೀನಾ' ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ರವೀನಾ ಈ ಕಾರ್ಯಕ್ರಮವನ್ನು ನಟ ಗೋವಿಂದ ಮತ್ತು ನೃತನಿರ್ದೇಶಕ ಸರೋಜ್ ಖಾನ್ ಅವರೊಂದಿಗೆ ತೀರ್ಪುಗಾರ್ತಿಯಾಗಿ ಭಾಗವಹಿಸಲಿದ್ದಾರೆ.

"ರವೀನಾ ಈ ಕಾರ್ಯಕ್ರಮದ ಎಪಿಸೋಡ್ ಒಂದಕ್ಕೆ ೧.೨೫ ಕೋಟಿ ರಾಯಧನ ಪಡೆಯಲಿದ್ದು,  ಕಿರುತೆರೆಯಲ್ಲಿ ಅತಿ ಹೆಚ್ಚು ಗಳಿಸುವ ಬಾಲಿವುಡ್ ನಟಿಯಾಗಿ ಹೊರಹೊಮ್ಮಿದ್ದಾರೆ" ಎಂದು ಬಲ್ಲ ಮೂಲಗಳು ತಿಳಿಸಿವೆ.

ಈ ಹಿಂದೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯರಾಗಿ ಭಾಗವಹಿಸಿದ್ದ ಶಿಲ್ಪಾ ಶೆಟ್ಟಿ ಮತ್ತು ಮಾಧುರಿ ದೀಕ್ಷಿತ್ ಅವರಿಗೆ ಎಪಿಸೋಡ್ ಒಂದಕ್ಕೆ ೧ ಕೋಟಿ ನೀಡಲಾಗುತ್ತಿತ್ತಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT