ನಟ ಚಿಕ್ಕಣ್ಣ ಮತ್ತು ನಟಿ ಸುಮನ್ ರಂಗನಾಥ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಬಾಂಬೇ ಮಿಠಾಯಿ ತಯಾರಕರಿಂದ "ಡಬಲ್ ಎಂಜಿನ್"

ಬಾಂಬೇ ಮಿಠಾಯಿ ಎಂಬ ಹಾಸ್ಯ ಪ್ರಧಾನ ಚಿತ್ರ ಮಾಡಿದ್ದ ತಂಡ ಇದೀಗ ಡಬಲ್ ಎಂಜಿನ್ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ...

ಬೆಂಗಳೂರು: ಬಾಂಬೇ ಮಿಠಾಯಿ ಎಂಬ ಹಾಸ್ಯ ಪ್ರಧಾನ ಚಿತ್ರ ಮಾಡಿದ್ದ ತಂಡ ಇದೀಗ ಡಬಲ್ ಎಂಜಿನ್ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಬಾಂಬೇ ಮಿಠಾಯಿಯಂತೆಯೇ ಈ ಡಬಲ್ ಎಂಜಿನ್ ಕೂಡ ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಹಾಸ್ಯ ನಟ ಚಿಕ್ಕಣ್ಣ ಮತ್ತು ನಟ ಸುಮನ್ ರಂಗನಾಥ್ ಅವರು ಪ್ರಮುಖ ಪಾತ್ರದಲ್ಲಿ  ಕಾಣಿಸಿಕೊಳ್ಳಲ್ಲಿದ್ದಾರೆ. ಮೂಲಗಳ ಪ್ರಕಾರ ಚಿತ್ರದಲ್ಲಿ ನಟಿ ಸುಮನ್ ರಂಗನಾಥ್ ಅವರಿಗೆ ಆಸಕ್ತಿಕರ ಪಾತ್ರವಿದ್ದು, ಈ ಹಿಂದೆ ಅವರು ಮಾಡಿರದ ಪಾತ್ರಗಳ ರೀತಿಯಲ್ಲಿ ಈ ಪಾತ್ರವನ್ನು  ತಯಾರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹಳ್ಳಿಯಲ್ಲಿರುವ ಮೂವರು ಹುಡುಗರು ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬೇಕು ಎನ್ನುವ ಕಾರಣದಿಂದ ಪಟ್ಟಣಕ್ಕೆ ಸೇರುತ್ತಾರೆ. ಆದರೆ ಇಲ್ಲಿ ಅವರನ್ನು ಕೆಲವರು ಮೋಸ ಮಾಡುತ್ತಾರೆ. ಕಥೆಯ  ಈ ಎಳೆಯನ್ನಿಟ್ಟುಕೊಂಡೇ ನಿರ್ದೇಶಕರು ಹಾಸ್ಯಮಯವಾಗಿ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಅವರು  ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಮತ್ತೊಂದು ಊಹಾಪೋಹಗಳ ಪ್ರಕಾರ ನಿರ್ದೇಶಕ ಚಂದ್ರ ಮೋಹನ್ ಅವರು ಬಾಂಬೇ ಮಿಠಾಯಿ ಚಿತ್ರದ ಮುಂದುವರೆದ ಭಾಗವಾಗಿ ಈ ಡಬಲ್ ಎಂಜಿನ್ ಚಿತ್ರವನ್ನು ತರಲಿದ್ದಾರೆ ಎಂದು  ಹೇಳಲಾಗುತ್ತಿದೆ. ಆದರೆ ಇಷ್ಟೆಲ್ಲಾ ಗಾಸಿಪ್ ಗಳು ಹರಿದಾಡಿದ್ದರೂ, ಚಿತ್ರ ನಿರ್ದೇಶ ಚಂದ್ರ ಮೋಹನ್ ಮಾತ್ರ ಕಥೆಯ ಬಗ್ಗೆ ರಹಸ್ಯ ಬಿಚ್ಚಿಟ್ಟಿಲ್ಲ. ಬದಲಿಗೆ ಚಿತ್ರದ ಪ್ರಚಾರ ಸಂದರ್ಭದಲ್ಲಿ ಈ ಬಗ್ಗೆ  ಮಾತನಾಡುವುದಾಗಿ ಹೇಳಿದ್ದಾರೆ. "ಬಾಂಬೇ ಮಿಠಾಯಿಗೆ ಸಿಕ್ಕ ಪ್ರತಿಕ್ರಿಯೆ ನನ್ನಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ಹೀಗಾಗಿ ಆ ಚಿತ್ರಕ್ಕಿಂತಲೂ ಹೆಚ್ಚಾಗಿ ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ತಲುಪಲು  ಪ್ರಯತ್ನಿಸುತ್ತೇನೆ" ಎಂದು ಚಂದ್ರ ಮೋಹನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್