ಸಿನಿಮಾ ಸುದ್ದಿ

ಬ್ರಾಡ್ ಪಿಟ್ ಜೊತೆ ಸಿನೆಮಾ ಮಾಡಲಿರುವ ದೀಪಿಕಾ?

Guruprasad Narayana

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಹಾಲಿವುಡ್ ನ ಜನಪ್ರಿಯ ನಟ ಬ್ರಾಡ್ ಪಿಟ್ ಅವರೊಂದಿಗೆ ಸಿನೆಮಾವೊಂದರಲ್ಲಿ ನಟಿಸಲಿದ್ದಾರೆ ಎನ್ನುತ್ತದೆ ಪಿಂಕ್ ವಿಲ್ಲಾ ವರದಿ. ಇದು ದೀಪಿಕಾ ಅವರ ಹಾಲಿವುಡ್ ನ ಎರಡನೆ ದೊಡ್ಡ ಚಿತ್ರವಾಗಲಿದೆ. ಆದರೆ ಅಧಿಕೃತ ಹೇಳಿಕೆ ಇನ್ನೂ ಹೊರಬೀಳಬೇಕಿದೆ.

ಈಗ ಸದ್ಯಕ್ಕೆ ದೀಪಿಕಾ, ಹಾಲಿವುಡ್ ನಟ ವಿನ್ ಡೀಸೆಲ್ ಜೊತೆಗೆ 'XXX- ದ ರಿಟರ್ನ್ ಆಫ್ ಕ್ಸ್ಯಾಂಡರ್ ಕೇಜ್' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನೆಮಾ ದೀಪಿಕಾ ಅವರಿಗೆ ಹಾಲಿವುಡ್ ನಲ್ಲಿ ಪಾದಾರ್ಪಣಾ ಸಿನೆಮಾ ಆಗಲಿದೆ.

ಕಳೆದ ವರ್ಷವೇ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರತಂಡದ ಜೊತೆಗೆ ತಮ್ಮ ಹಾಲಿವುಡ್ ಪ್ರವೇಶವನ್ನು ದೀಪಿಕಾ ಪಡುಕೋಣೆ ಘೋಷಿಸಿಕೊಂದಿದ್ದರು, ಅಂದಿನಿಂದಲೂ ಅವರ ಹಾಲಿವುಡ್ ವೃತ್ತಿಜೀವನದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿತ್ತು.

SCROLL FOR NEXT