ಸಿಂಪಲ್ ಸುನಿ ಜೊತೆ ಸೆಕೆಂಡ್ ಡೇಟ್ 
ಸಿನಿಮಾ ಸುದ್ದಿ

ಸಿಂಪಲ್ ಸುನಿ ಜೊತೆ ಸೆಕೆಂಡ್ ಡೇಟ್

ಚೊಚ್ಚಲ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರದಲ್ಲಿ ಭರ್ಜರಿ ಮನರಂಜನೆ ನೀಡಿ ಪ್ರೇಕ್ಷಕರ ಮನ ಗೆದಿದ್ದ ನಿರ್ದೇಶಕ ಸುನಿ ಇದೀಗ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಮೂಲಕ ಮತ್ತೊಂದು ಪ್ರೇಮ ಪಕ್ವಾನ್ನ ಉಣಬಡಿಸಲು ಸಜ್ಜಾಗಿದ್ದಾರೆ...

ಚೊಚ್ಚಲ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರದಲ್ಲಿ ಭರ್ಜರಿ ಮನರಂಜನೆ ನೀಡಿ ಪ್ರೇಕ್ಷಕರ ಮನ ಗೆದಿದ್ದ ನಿರ್ದೇಶಕ ಸುನಿ ಇದೀಗ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಮೂಲಕ ಮತ್ತೊಂದು ಪ್ರೇಮ ಪಕ್ವಾನ್ನ ಉಣಬಡಿಸಲು ಸಜ್ಜಾಗಿದ್ದಾರೆ.

ಚಿತ್ರದ ಕಥೆ, ರಚನೆ, ಗೀತೆ ರಚನೆ, ನಿರ್ದೇಶನ ಮಾಡಿರುವುದು ಸಿಂಪಲ್ ಸುನಿಯೇ ಆಗಿದ್ದು, ಚಿತ್ರದ ನಟಿಯಾಗಿ ಮೇಘನಾ ಗಾಂವ್ಕರ್ ಹಾಗೂ ಪ್ರವೀಣ್ ಅಭಿನಯಿಸಿದ್ದಾರೆ. ಈಗಾಗಲೇ ಸಿಂಪಲ್ ಆಗಿ ಒಂದು ಲವ್ ಸ್ಟೋರಿಯ ಡೈಲಾಗ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಸುನಿ ತಮ್ಮ ಎರಡನೇ ಚಿತ್ರದಲ್ಲಿಯೂ ಕಚಗುಳಿ ಇಡುವಂತಹ ಡೈಲಾಗ್ಸ್ ಗಳನ್ನೇ ಇಟ್ಟುದ್ದು, ಚಿತ್ರ ಜನರ ಮನ ಗೆಲ್ಲಲಿದೆ ಎಂಬ ನಿರೀಕ್ಷೆಯಲ್ಲಿ ಸುನಿ ಇದ್ದಾರೆ.

ಎರಡನೇ ಲವ್ ಸ್ಟೋರಿಯಲ್ಲಿರುವ ಸುನಿಯೊಂದಿಗಿನ ಕೆಲವು ಮಾತುಗಳು ನಮ್ಮೊಂದಿಗೆ

ಚಿತ್ರದ ಕಥೆ ಬಗ್ಗೆ

ಚಿತ್ರ ಕಥೆ ಆರಂಭವಾಗುವುದೇ ಪ್ರಯಾಣದ ಮೂಲಕ. ಸಹಾಯ ನಿರ್ದೇಶಕನಾಗಿದ್ದಾಗ ಕಾರಿನಲ್ಲಿ ಹೋಗುತ್ತಿರುವ ವೇಳೆ ನನ್ನ ಪಕ್ಕದಲ್ಲಿ ಯುವತಿಯೊಬ್ಬಳು ಕುಳಿತುಕೊಂಡರೆ ಏನಾಗುತ್ತದೆ ಎಂದು ಆಲೋಚಿಸುತ್ತಿದ್ದೆ. ಇದೀಗ ಅದೇ ಚಿತ್ರದ ಕಥೆಗೆ ದಾರಿಯಾಯಿತು. ಜೀವನದಲ್ಲಿಯೇ ಈ ಚಿತ್ರದಲ್ಲಿ ಉತ್ತಮ ಕಥೆಯೊಂದನ್ನು ಬರೆದಿದ್ದೇನೆಂದು ಹೇಳಿದ್ದಾರೆ.

ಚಿತ್ರ ಲೊಕೇಶನ್ ಚಿತ್ರದಲ್ಲಿ ಎಲ್ಲರದ್ದೂ ಸಿಂಪಲ್ ಕ್ಯಾರೆಕ್ಟರ್ ಇದೆ. ಚಿತ್ರಕ್ಕೆ ಮೂರು ಋತುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ಪ್ರಕೃತಿ ಸೌಂದರ್ಯವನ್ನು ಹೈಲೈಟ್ ಮಾಡಲಾಗಿದೆ. ಚಿತ್ರ ಹೋಗುವುದು ಬೆಂಗಳೂರಿನಿಂದ-ಕಾರವಾರದ ಕಡೆಗೆ. ಚಿತ್ರದ ಸಾಕಷ್ಟು ದೃಶ್ಯಗಳನ್ನು ಮೂಡಬಿದಿರೆಯಲ್ಲೇ ಚಿತ್ರೀಕರಿಸಲಾಗಿದೆ. ನನ್ನ ಆಯ್ಕೆ ಯಾವಾಗಲು ಬೆಂಗಳೂರು ಮತ್ತು ಊಟಿಯಾಗಿತ್ತು. ಅದರಲ್ಲೂ ಬೀಚ್ ಗಳು ಸಾಕಷ್ಟು ಇಷ್ಟವಾಗುತ್ತದೆ. ಇದರ ಮಧ್ಯೆಯಲ್ಲೂ ಇನ್ನಿತರೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಚಿತ್ರದ ಪಾತ್ರಗಳ ಬಗ್ಗೆ
ಚಿತ್ರದಲ್ಲಿ ಪ್ರವೀಣ್ ಹಾಗೂ ಮೇಘನಾ ಗಾಂವ್ಕರ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಟ್ಯೂಬ್ ಯುವಕನೊಬ್ಬನ ಪಾತ್ರವಿದ್ದು, ಕಾರು ಹಾಗೂ ಟ್ಯೂಬ್ ಎರಡರ ಪಾತ್ರ ಮುಖ್ಯವಾಗಿದೆ. ಕಾರನ್ನು ಜೀವನಕ್ಕೆ ಹೋಲಿಕೆ ಮಾಡಲಾಗಿದೆ. ಅದರೆ, ಪ್ರಯಾಣವನ್ನು ಸುಖಕರ ಪ್ರಯಾಣಕ್ಕೆ ಹೋಲಿಕೆ ಮಾಡಲಾಗಿದೆ. ಕಾರಿನ ಬ್ರೇಕ್ ಫೇಲ್ ಆದಾಗ ಯಾವ ರೀತಿಯ ಪರಿಸ್ಥಿತಿ ಎದುರಾಗುತ್ತದೆಯೋ ಹಾಗೆ ಜೀವನ ಕೂಡ ಒಂದು ಹಂತದಲ್ಲಿ ಅಸ್ತವ್ಯಸ್ತವಾಗುತ್ತದೆ.

ಲಾಂಗ್ ಜರ್ನಿಯಲ್ಲಿ ಚಿತ್ರದ ನಾಯಕ ಹೇಗೆಲ್ಲಾ ಎನ್ ಜಾಯ್ ಮಾಡುತ್ತಾರೆ. ಯಾವ ಸಂದರ್ಭದಲ್ಲಿ ನಾಯಕಿಯನ್ನು ಭೇಟಿಯಾಗುತ್ತಾನೆ. ಇಬ್ಬರ ನಡುವಿನ ಲಾಂಗ್ ಜರ್ನಿ ಹೇಗಿರುತ್ತದೆ ಹಾಗೂ ನಾಯಕ ತನ್ನ ಕೊನೆಯ ಗುರಿ ಮುಟ್ಟಿದಾಗ ಏನಾಗುತ್ತದೆ ಎಂಬುದನ್ನು ಕಥೆ ಹೇಳುತ್ತದೆ.

ಖುಷ್ ಹಾಗೂ ಖಷಿ ಎಂಬ ಪಾತ್ರದಲ್ಲಿ ನಾಯಕ ಹಾಗೂ ನಾಯಕಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ಯೂಬ್ ಪಾತ್ರವನ್ನು ಹೇಮಂತ್ ಎಂಬುವವರು ನಿರ್ವಹಿಸುತ್ತಿದ್ದಾರೆ. ಕಾರಿನಲ್ಲಿ ಟ್ಯೂಬ್ ಎಷ್ಟು ಮುಖ್ಯವೋ ಚಿತ್ರದಲ್ಲೂ ಈ ಟ್ಯೂಬ್ ಅಷ್ಟೇ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಟ್ಯೂಬ್ ಇಲ್ಲದ ಟೈರ್ ಗಳನ್ನು ಬಳಿಸಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ಇದಕ್ಕೆ ಸಂಬಂಧಿಸಿ ಕೆಲವು ಡೈಲಾಗ್ ಗಳಿವೆ.

ಚಿತ್ರದ ಸಂಭಾಷಣೆ
ಚಿತ್ರದ ಸಂಭಾಷಣೆಯನ್ನು ಸಾಮಾನ್ಯ ಜನರು ಮಾತನಾಡುವ ಭಾಷೆಯಲ್ಲಿಯೇ ಬರೆಯಲಾಗಿದೆ. ಸಂಭಾಷಣೆ ಬರೆಯುವ ಸಲುವಾಗಿ ರಸ್ತೆಯಲ್ಲಿರುವ ಟೀ ಅಂಗಡಿಗಳ ಬಳಿ ಹೋಗಲಾಗುತ್ತಿತ್ತು. ಈ ವೇಳೆ ಅಲ್ಲಿಗೆ ಬರುತ್ತಿದ್ದ ಜನರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಗಮನಿಸಿ ಡೈಲಾಗ್ ಗಳನ್ನು ಬರೆಯಲಾಗಿದೆ. ಇದಲ್ಲದೆ, ಜೋಡಿಗಳ ಪಾತ್ರಕೂಡ ಡೈಲಾಗ್ ಗಳನ್ನು ಬರೆಯಲು ಸಹಾಯ ಮಾಡಿದೆ. ಚಿತ್ರದಲ್ಲಿ ನಾಯಕ ಬಿಸಿನೆಸ್ ಮ್ಯಾಗ್ ನೆಟ್ ನ ಹಾಗೆ ವರ್ತಿಸುತ್ತಿರುತ್ತಾನೆ. ಆದರೆ, ಮೇಘನಾ ಬೋಲ್ಡ್ ಹಾಗೂ ಸಾಫ್ಟ್ ಆಗಿರುವ ಯುವತಿಯಾಗಿರುತ್ತಾಳೆ.

ಚಿತ್ರೀಕರಣ ಹಾಗೂ ತಾಂತ್ರಿಕ ಸಹಾಯ
ನಿಜ ಜೀವನದ ಕಥೆಯೊಂದನ್ನ ಚಿತ್ರವಾಗಿ ಮಾಡುವುದಕ್ಕೆ ತಂಡ ನಿರ್ಣಯಗಳು ಸಹಾಯ ಮಾಡಿದೆ. ಚಿತ್ರದ ನಿರ್ಮಾಪಕ ಅಶು ಬೆದ್ರಾ ಮತ್ತು ಕ್ಯಾಮೆರಾಮ್ಯಾನ್ ದರ್ಶನ್ ಅವರು ಸಾಕಷ್ಟು ಶ್ರಮವನ್ನು ಪಟ್ಟಿದ್ದಾರೆ. ಚಿತ್ರೀಕರಣವನ್ನು 30 ದಿನಗಳ ಕಾಲ ಮಾಡಲಾಯಿತು. ಸಂಕಲನಕಾರ ಸಚಿನ್ ಚಿತ್ರಕ್ಕೆ ಬೆನ್ನೆಲುಬು ಎಂತಲೇ ಹೇಳಬಹುದು. ಹಾಡುಗಳ ಸಾಹಿತ್ಯವನ್ನು ಹೊಸ ಪ್ರತಿಭೆ ಪ್ರಮೋದ್ ಎಂಬುವವರು ಬರೆಯಿದ್ದಾರೆ. ಸಿದ್ದು ತುಸು ಪ್ರೀತಿಯ ಎಂಬ ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ. ನನಗೆ ಕವನ ಬರೆಯುವುದರಲ್ಲಿ ಆಸಕ್ತಿಯಿದೆ. ಹೀಗಾಗಿ ನಾನೂ ಕೂಡ 3 ಹಾಡಿಗೆ ಸಾಹಿತ್ಯವನ್ನು ಬರೆದಿದ್ದೇನೆ.

ಬೀಚ್ ಕುರಿತಂತೆ ಹೇಳಿ
ನನಗೆ ಪ್ರಕೃತಿ ಎಂದರೆ ಬಹಳ ಇಷ್ಟ. ಅದರಲ್ಲೂ ಬೀಚ್ ಗಳೆಂದರೆ ತುಂಬಾ ಇಷ್ಟ. ಸಾಕಷ್ಟು ಬಾರಿ ಅಲ್ಲಿಯೇ ಸಮಯ ಕಳೆಯಲು ಇಚ್ಛಿಸುತ್ತೇನೆ. ನನಗೆ ಸಮುದ್ರ ನೋಡುವುದೆಂದರೆ ಇಷ್ಟವಾಗುತ್ತದೆ. ಬೀಚ್ ನಲ್ಲಿ ಕಾಲ ಕಳೆಯುವ ಸಮಯದಲ್ಲಿ ನನ್ನ ತಲೆಯಲ್ಲಿ ಸಾಕಷ್ಟು ಪ್ರಶ್ನೆಗಳು ಏಳುತ್ತದೆ. ಆದರೂ, ಆ ಸಮಯದಲ್ಲಿ ಶಾಂತಚಿತ್ತನಾಗಿರುತ್ತೇನೆ. ಬಿಸಿಲು ಇದ್ದಾಗ ಮಾತ್ರ ನನಗೆ ಕೋಪ ಬರುತ್ತಿರುತ್ತದೆ. ಚಿತ್ರೀಕರಣಕ್ಕಾಗಿ ಸ್ಥಳ ಹುಡುಕಲೆಂದು ಹೋದಾಗ ಕೂಡ ನಾನು ಸಾಕಷ್ಟು ಸಮಯವನ್ನು ಬೀಚ್ ನಲ್ಲಿಯೇ ಕಳೆಯುತ್ತೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT