ನಟಿ ಕಾಜಲ್ ಅಗರವಾಲ್ 
ಸಿನಿಮಾ ಸುದ್ದಿ

'ಚಕ್ರವ್ಯೂಹ'ದಲ್ಲಿ ಕಾಜಲ್ ಅಗರವಾಲ್ ಗಾಯನ

ವಿವಿಧ ರಾಜ್ಯದ ನಟರು 'ಚಕ್ರವ್ಯೂಹ' ಸಿನೆಮಾದಲ್ಲಿ ಹಾಡುತ್ತಿರುವುದು ವಿಶೇಷ. ತೆಲುಗು ನಟ ಜೂನಿಯರ್ ಎನ್ ಟಿ ಆರ್, ಈ ಸಿನೆಮಾದಲ್ಲಿ ಹಾಡೊಂದನ್ನು ಹಾಡಿದ ಬೆನ್ನಲ್ಲೇ

ಬೆಂಗಳೂರು: ವಿವಿಧ ರಾಜ್ಯದ ನಟರು 'ಚಕ್ರವ್ಯೂಹ' ಸಿನೆಮಾದಲ್ಲಿ ಹಾಡುತ್ತಿರುವುದು ವಿಶೇಷ. ತೆಲುಗು ನಟ ಜೂನಿಯರ್ ಎನ್ ಟಿ ಆರ್, ಈ ಸಿನೆಮಾದಲ್ಲಿ ಹಾಡೊಂದನ್ನು ಹಾಡಿದ ಬೆನ್ನಲ್ಲೇ ಈಗ ನಟಿ ಕಾಜಲ್ ಅಗರವಾಲ್ ಕೂಡ ಪುನೀತ್ ರಾಜಕುಮಾರ್ ಅಭಿನಯದ ಈ ಚಿತ್ರಕ್ಕೆ ಹಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ನಟಿಯನ್ನು ನಿರ್ಮಾಪಕ ಸಂಪರ್ಕಿಸಿದಾಗ, ಹಾಡಲು ಉತ್ಸುಕತೆಯಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. "ಅವರು ನಿರ್ಮಾಪಕ ಎನ್ ಕೆ ಲೋಹಿತ್ ಅವರ ಒಳ್ಳೆಯ ಗೆಳತಿ. ಅವರನ್ನು ಸಂಪರ್ಕಿಸಿದಾಗ ಬಹಳ ಖುಷಿಯಿಂದ ಹಾಡಲು ಒಪ್ಪಿದರು. ಅವರ ಕಂಠ ಸುಮಧುರವಾಗಿದೆ ಆದುದರಿಂದ ಚಕ್ರವ್ಯೂಹದಿಂದಲೇ  ಅವರ ಈ ಹೊಸ ಕೌಶಲ್ಯ ಬೆಳಕಿಗೆ ಬರಲಿದೆ" ಎನ್ನುತ್ತವೆ.

ಇದೇ ಹಾಡಿನ ಪುರುಷ ಅವತರಿಣೆಕೆಯನ್ನು ಪುನೀತ್ ರಾಜಕುಮಾರ್ ಅವರೇ ಹಾಡಿದ್ದು ಈಗಾಗಲೇ ರೆಕಾರ್ಡಿಂಗ್ ಮುಗಿದಿದೆಯಂತೆ.

ತಮಿಳು, ತೆಲುಗು ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಕಾಜಲ್ ಇಲ್ಲಿಯವರೆಗೂ ಯಾವುದೇ ಕನ್ನಡ ಸಿನೆಮಾದಲ್ಲಿ ನಟಿಸಿಲ್ಲ. ಈಗ ಕನ್ನಡ ಚಿತ್ರೋದ್ಯಮಕ್ಕೆ ಗಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಜನವರಿ ೭ ರಿಂದ ಹಾಡುಗಳ ಚಿತ್ರೀಕರಣಕ್ಕೆ ಪುನೀತ್, ರಚಿತಾ ರಾಮ್, ನಿರ್ದೇಶಕ ಸರವಣನ್ ಚಿತ್ರತಂಡದೊಂದಿಗೆ ಪೋರ್ಚುಗಲ್ ಗೆ ತೆರಳಲಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!